Recent Posts

Saturday, April 25, 2026

ಬೆಳ್ತಂಗಡಿ

ಬೆಳ್ತಂಗಡಿ

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಬಿಜೆಪಿ ಸ್ಥಾಪನಾ ದಿವಾಸ ಕಾರ್ಯಕ್ರಮ-ಕಹಳೆ ನ್ಯೂಸ್

ಬೆಳ್ತಂಗಡಿ : ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಬಿಜೆಪಿ ಸ್ಥಾಪನಾ ದಿವಾಸ ಕಾರ್ಯಕ್ರಮವನ್ನು ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಟ ವಿಧಾನ ಪರಿಷತ್ ಶಾಸಕರಾದ ಶ್ರೀ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ಮಂಡಲ ಅಧ್ಯಕ್ಷರಾದ ಶ್ರೀ ಜಯಂತ್ ಕೋಟ್ಯಾನ್, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು....
ಬೆಳ್ತಂಗಡಿ

ಮೈಸೂರಿನಿಂದ ಧರ್ಮಸ್ಥಳಕ್ಕೆ ವಿವಾಹಕ್ಕೆಂದು ಹೋಗುತ್ತಿದ್ದ ಬಸ್ಸು ಪಲ್ಟಿ ; 15 ಕ್ಕೂ ಅಧಿಕ ಮಂದಿ ಗಾಯ-ಕಹಳೆ ನ್ಯೂಸ್

ಬೆಳ್ತಂಗಡಿ : ನಿಡ್ಲೆ ಗ್ರಾಮದ ಬೂಡುಜಾಲು ಶಾಂತಿನಗರ ಸಮೀಪ ಶನಿವಾರ ರಾತ್ರಿ ಮೈಸೂರಿನಿಂದ ಧರ್ಮಸ್ಥಳಕ್ಕೆ ವಿವಾಹಕ್ಕೆಂದು ಹೋಗುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು 15 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ನಡೆದಿದೆ. ಈ ಘಟನೆಯಲ್ಲಿ 3 ಮಕ್ಕಳ ಸಹಿತ ಓರ್ವನಿಗೆ ಗಂಭೀರ ಗಾಯವಾಗಿದ್ದು, ಬಸ್ಸಿನಲ್ಲಿ 30 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಘಟನೆ ನಡೆದ ಕೂಡಲೇ ಸ್ಥಳೀಯರು ರಕ್ಷಣೆ ಕಾರ್ಯ ನಡೆಸಿದ್ದು, ಗಾಯಾಳುಗಳನ್ನು...
ಬೆಳ್ತಂಗಡಿ

ಬಂದಾರು ಗ್ರಾಮದ ಮೈರೋಳ್ತಡ್ಕ ನಿವಾಸಿ ಶೇಖರ ಪೂಜಾರಿ ನಿವಾಸದಲ್ಲಿ ಹೆಬ್ಬಾವು ಪ್ರತ್ಯಕ್ಷ ; ಹೆಬ್ಬಾವು ಹಿಡಿದು ಕಾಡಿಗೆ ಬಿಟ್ಟ ಚಿದಾನಂದ ಬಾಳೆಹಿತ್ತಿಲು-ಕಹಳೆ ನ್ಯೂಸ್

ಬೆಳ್ತಂಗಡಿ : ಬಂದಾರು ಗ್ರಾಮದ ಮೈರೋಳ್ತಡ್ಕ ನಿವಾಸಿ ಶೇಖರ ಪೂಜಾರಿ ಬಟ್ಟೆಮಾರ್ ಇವರ ನಿವಾಸದಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದೆ. ಇದರಿಂದ ಗ್ರಾಮಸ್ಥರು ಭಯಭೀತಗೊಂಡಿದ್ದು, ಈ ಹೆಬ್ಬಾವುವನ್ನು ಚಿದಾನಂದ ಬಾಳೆಹಿತ್ತಿಲು ಇವರು ಹಿಡಿದು ಕಾಡಿಗೆ ಬಿಟ್ಟರು. ಇವರಿಗೆ ಚೇತನ್, ಮಂಜು, ರಾಜೇಶ್, ರಾಘವೇಂದ್ರ, ಇವರುಗಳು ಸಮಯಕ್ಕೆ ಸರಿಯಾಗಿ ಸಹಕರಿಸಿದರು. ಇದರಿಂದಾಗಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ....
ಬೆಳ್ತಂಗಡಿ

ಮೇಲಂತಬೆಟ್ಟು ಗ್ರಾಮ ಪಂಚಾಯತ್ ಬಳಿ ದನ ಕಳ್ಳತನದ ಆರೋಪ ಹೊರಿಸಿ ಇಬ್ಬರ ಮೇಲೆ ಗುಂಪೊಂದರಿಂದ ಹಲ್ಲೆ-ಕಹಳೆ ನ್ಯೂಸ್

ಬೆಳ್ತಂಗಡಿ : ಮೇಲಂತಬೆಟ್ಟು ಗ್ರಾಮ ಪಂಚಾಯತ್ ಬಳಿ ಪಿಕ್ ಅಪ್ ವಾಹನ ದುರಸ್ತಿ ಮಾಡಿಸಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಇಬ್ಬರ ಮೇಲೆ ಗುಂಪೊಂದು ದನ ಕಳ್ಳತನದ ಆರೋಪ ಹೊರಿಸಿ ದೊಣ್ಣೆ ಹಾಗೂ ಪಾದರಕ್ಷೆಗಳಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ. ಬೆಳ್ತಂಗಡಿ ಕುಪ್ಪೆಟ್ಟು ನಿವಾಸಿ ಅಬ್ದುಲ್ ರಹೀಮ್ ಮಾರ್ಚ್ 31ರಂದು ಸಂಜೆಯ ವೇಳೆ ತಮ್ಮ ಪಿಕ್ ಅಪ್ ವಾಹನಕ್ಕೆ ದುರಸ್ತಿಗಾಗಿ ಮಹಮ್ಮದ್ ಮುಸ್ತಾಫ ಎಂಬವರೊಂದಿಗೆ ಬೆಳ್ತಂಗಡಿ...
ಬೆಳ್ತಂಗಡಿ

ಪಡಂಗಡಿ ಗ್ರಾಮ ಪಂಚಾಯತ್ ಬಳಿಯ ರಸ್ತೆಯಲ್ಲಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು-ಕಹಳೆ ನ್ಯೂಸ್

ಬೆಳ್ತಂಗಡಿ : ಪಡಂಗಡಿ ಗ್ರಾಮ ಪಂಚಾಯತ್ ಬಳಿಯ ರಸ್ತೆಯಲ್ಲಿ ಶನಿವಾರ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಮ್ಯಕ್ತಿಯನ್ನು ಪೊಯ್ಯೆಗುಡ್ಡೆ ನಿವಾಸಿ ಬೈಕ್ ಸವಾರ 34ವರ್ಷದ ಜಾಬಿರ್ ಎಂದು ಗುರುತಿಸಲಾಗಿದೆ. ಧರ್ಮಸ್ಥಳದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಸರಕಾರಿ ಬಸ್ಸು ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ್ದು, ಪರಿಣಾಮ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ....
ಬೆಳ್ತಂಗಡಿ

ಅಶಕ್ತ ಕುಟುಂಬಕ್ಕೆ ಚೆಕ್ ವಿತರಿಸಿ ನೆರವಾದ ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ-ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಆಗುಳೆಬೈಲು ಶ್ರೀ ದಿನೇಶ್ ಪೂಜಾರಿ ಮತ್ತು ಭಾರತಿ ದಂಪತಿಗಳ ಪುತ್ರಿಯಾಗಿರುವ ಕುಮಾರಿ ಧೃತಿ ಎಂಬ ಮಗುವಿಗೆ ಭೀಕರ ಅನಾರೋಗ್ಯದ ಕಾರಣದಿಂದ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಹಾಗಾಗಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ತಾಯಿಯ ಬಳಿ ಬೇಡಿಕೊಂಡಾಗ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಕ್ಷೇತ್ರದ ವತಿಯಿಂದ ಚೆಕ್ ವಿತರಣೆ ಮಾಡಿದರು. ಮತ್ತು ಆ ಮಗುವಿಗೆ ಆದಷ್ಟು ಬೇಗ ಆರೋಗ್ಯ ಚೇತರಿಕೆ ಆಗಲೆಂದು...
ಬೆಳ್ತಂಗಡಿ

ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು- ಕಹಳೆ ನ್ಯೂಸ್

ಬೆಳ್ತಂಗಡಿ: ಖಾಸಗಿ ಕಾಲೇಜೊಂದರ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿನಿಯೋರ್ವಳು ಕಳೆದ ಮಾರ್ಚ್ 14ರಂದು ವಿಷ ಪದಾರ್ಥ ಸೇವಿಸಿ ಆತ್ಯಹತ್ಯೆಗೆ ಯತ್ನಿಸಿ, ಮಂಗಳೂರಿನ ಖಾಸಗಿ ಆಸ್ಪತ್ರಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಗಂಡಿ ಬಾಗಿಲು ದೇವಗಿರಿ ಚೇನಪಳ್ಳಿ ವಿಜು ಅವರ ಪುತ್ರಿ ವಿನ್ಸಿ (20) ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಳು. ಆದ್ರೆ ಸುಮಾರು 10 ದಿನಗಳ ಕಾಲ ನಡೆದ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾಳೆ....
ಬೆಳ್ತಂಗಡಿ

ತನ್ನ ಸ್ವಂತ ಕಚೇರಿಯ ಉದ್ಘಾಟನೆಗೆಂದು ತೆರಳುತ್ತಿದ್ದ ಯುವಕ ರಸ್ತೆ ಅಪಘಾತದಲ್ಲಿ ಸಾವು-ಕಹಳೆ ನ್ಯೂಸ್

ಬೆಳ್ತಂಗಡಿ : ಮದ್ದಡ್ಕ ಸಮೀಪ ತನ್ನ ಸ್ವಂತ ಕಚೇರಿಯ ಉದ್ಘಾಟನೆಗೆಂದು ತೆರಳುತ್ತಿದ್ದ ಯುವಕ ಮಾಲಾಡಿ ಸಮೀಪ ಅರ್ಕುಲ ತಿರುವಿನಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಯುವಕನನ್ನು ಬಂಟ್ವಾಳ ತಾಲೂಕಿನ ಮದ್ದ ನಿವಾಸಿ 28ವರ್ಷದ ಮಾಝಿನ್ ಎಂದು ಗುರುತಿಸಲಾಗಿದೆ. ಸ್ಥಳೀಯರು ಯವಕನನ್ನು ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದರು, ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮಾಝಿನ್ ಎಂಜಿನಿಯರ್ ಆಗಿದ್ದು, ಮದ್ದಡ್ಕದಲ್ಲಿ ಕಚೇರಿಯ ಉದ್ಘಾಟನೆಗೆ ತೆರಲುತ್ತಿದ್ದ ವೇಳೆಯಲ್ಲಿ ಮಾಲಾಡಿ ಬಳಿ...
1 66 67 68 69 70 80
Page 68 of 80