Thursday, July 23, 2026

ಬಂಟ್ವಾಳ

ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಮಾಣಿ ಇದರ ನೆಟ್ಲಮುಡ್ನೂರು ಗ್ರಾಮದ ಬಿಲ್ಲವ ಗ್ರಾಮ ಸಮಿತಿ ಸಭೆ, ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ –ಕಹಳೆ ನ್ಯೂಸ್

ಕಲ್ಲಡ್ಕ : ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಮಾಣಿ ಇದರ ನೆಟ್ಲಮುಡ್ನೂರು ಗ್ರಾಮದ ಬಿಲ್ಲವ ಗ್ರಾಮ ಸಮಿತಿಯ ಕಾರ್ಯಕಾರಿ ಸಭೆಯು ಸೋಮಪ್ಪ ಪೂಜಾರಿ ಮಾದೇಲು ಇವರ ಮನೆಯಲ್ಲಿ ಮೇ 27ನೇ ಬುಧವಾರ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಶ್ರೀಧರ್ ಪೂಜಾರಿ ಮುಜಲ ವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀ ರಮೇಶ್ ಪೂಜಾರಿ ಮೆಸ್ಕಾಂ ಹಾಗೂ ಡಾ. ತ್ರಿವೇಣಿ ರಮೇಶ್ ದಂಪತಿಗಳ ಸುಪುತ್ರಿ ಪ್ರಗತಿ ಆರ್ ಸಾಲ್ಯಾನ್, 2025-26ನೇ ಸಾಲಿನ ಎಸ್.ಎಸ್.ಎಲ್.ಸಿ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಯುವ ಸ್ನೇಹ ಸಂಭ್ರಮ – 2026 -ಕಹಳೆ ನ್ಯೂಸ್

ಕಲ್ಲಡ್ಕ : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಯುವ ಸ್ನೇಹ ಸಂಭ್ರಮ 2026 ಎಂಬ ಒಂದು ದಿನದ ಸ್ನೇಹ ಪ್ರವಾಸವು ಮೇ 24 ಭಾನುವಾರ ನೆರವೇರಿತು. .ಬೆಳಿಗ್ಗೆ 6.00 ಗಂಟೆಗೆ ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಕೊಡಾಜೆ ಅವರು ಎಲ್ಲರನ್ನು ಸ್ವಾಗತಿಸಿ ಸದಸ್ಯರ ಪ್ರವಾಸಕ್ಕೆ ಚಾಲನೆ ನೀಡಿದರು. ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರ, ಕಾಪು ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಬಳಿಕ ಬ್ರಹ್ಮಾವರದ ಸುಂದರ ಪ್ರಕೃತಿ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ-ಕಹಳೆ ನ್ಯೂಸ್

ಉಪ್ಪಿನಂಗಡಿ ಠಾಣಾ ಅಕ್ರ:158/2015 ಕಲಂ:457, 380 ಐಪಿಸಿ ಪ್ರಕರಣದಲ್ಲಿ ಆರೋಪಿಯಾಗಿ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಸುಮಾರು 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಂಗಳೂರು ಕಸಬಾ ಬೇಂಗ್ರೆ ನಿವಾಸಿ ಅಕ್ರಂ @ ಬೋಜ ಅಕ್ರ ಎಂಬಾತನನ್ನು ದಿನಾಂಕ:22-05-2026 ರಂದು, ಉಪ್ಪಿನಂಗಡಿ ಪೊಲೀಸ್ ಠಾಣಾ ತನಿಖೆ-2 ಪಿಎಸೈ ರವರಾದ ಕೌಶೀಕ್ ಬಿಸಿ, ಸಿಬ್ಬಂಧಿಯವರಾದ ಹೆಚ್ ಸಿ-826 ಶಿವರಾಮ್ ರೈ, ಪಿಸಿ-2277 ಮಹದೇವ ರವರು ಮಂಗಳೂರಿನ ಪಣಂಬೂರಿನಲ್ಲಿ ದಸ್ತಗಿರಿ ಮಾಡಿ ಪತ್ತೆ ಮಾಡಿ ಮಾನ್ಯ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಲಡ್ಕ-ಬಾಳ್ತಿಲ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ಕ್ಷಯರೋಗ (TB) ತಪಾಸಣಾ ಹಾಗೂ ಹೃದಯ ಎಕ್ಸ್-ರೇ ಶಿಬಿರ -ಕಹಳೆ ನ್ಯೂಸ್

ಬಂಟ್ವಾಳ : ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಲಡ್ಕ-ಬಾಳ್ತಿಲ ವತಿಯಿಂದ ನರಿಕೊಂಬು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ಕ್ಷಯರೋಗ (TB) ತಪಾಸಣಾ ಹಾಗೂ ಹೃದಯ ಎಕ್ಸ್-ರೇ ಶಿಬಿರ ಮೇ 21 ನೇ ಗುರುವಾರ ಜರಗಿತು. ಕೇಂದ್ರ ಟಿಬಿ ವಿಭಾಗವು ನರಿಕೊಂಬು ಗ್ರಾಮವನ್ನು “ಹೈ ರಿಸ್ಕ್ ವಿಲೇಜ್” ಎಂದು ಗುರುತಿಸಿದ್ದ ಹಿನ್ನೆಲೆಯಲ್ಲಿ, ಪಿಎಚ್‌ಸಿ ಕಲ್ಲಡ್ಕ-ಬಾಳ್ತಿಲ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಈ ಶಿಬಿರವನ್ನು ಆಯೋಜಿಸಿದರು. ಶಿಬಿರಕ್ಕಾಗಿ ಡಿಜಿಟಲ್ ಚೇಸ್ಟ್ ಎಕ್ಸ್-ರೇ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ನೇತ್ರಾವತಿ ನದಿಯಲ್ಲಿ ಯುವಕನ ಮೃತದೇಹ ಪತ್ತೆ -ಕಹಳೆ ನ್ಯೂಸ್

ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಯುವಕನೋರ್ವನ ಮೃತದೇಹ ಗುರುವಾರ ಪತ್ತೆಯಾಗಿದೆ. ಬಿ.ಮೂಡ ಗ್ರಾಮದ ಗೂಡಿನಬಳಿ ನಿವಾಸಿ ಮಹಮ್ಮದ್ ಎಂಬವರ ಪುತ್ರ ಇರ್ಫಾನ್ (36) ಅವರ ಮೃತದೇಹ ಎಂದು ತಿಳಿದು ಬಂದಿದೆ. ಬಂಟ್ವಾಳ ಪುರಸಭೆಯ ಪೌರಕಾರ್ಮಿಕರು ತ್ಯಾಜ್ಯ ನಿರ್ವಹಣೆ ಕಾರ್ಯ ಮಾಡುತ್ತಿದ್ದ ವೇಳೆ ಮೃತದೇಹ ನದಿಯಲ್ಲಿ ಕಂಡು ಬಂದಿದ್ದು, ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂಟ್ವಾಳ ಪೊಲೀಸರು ಹಾಗೂ ಗೂಡಿನಬಳಿಯ ಸ್ಥಳೀಯರು ಮೃತದೇಹವನ್ನು ಮೇಲಕ್ಕೆತ್ತಿ ಗುರುತು ಪತ್ತೆ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಜನಜಾತಿಯ ಗರಿಮಾ ಉತ್ಸವ 2026 ಅಂಗವಾಗಿ ಜನರ ಕುಂದುಕೊರತೆ ಅಲಿಕೆ ಕಾರ್ಯಕ್ರಮ-ಕಹಳೆ ನ್ಯೂಸ್

ಕಲ್ಲಡ್ಕ :ಜನಜಾತಿಯ ಗರಿಮಾ ಉತ್ಸವ 2026 ಅಂಗವಾಗಿ ಮೂಲ ನಿವಾಸಿಗಳಾದ ಕೊರಗ ಸಮುದಾಯದವರು ಮತ್ತು ಇತರೆ ಪರಿಶಿಷ್ಟ ಪಂಗಡದವರ ಕುಂದುಕೊರತೆ ಅಲಿಕೆ ಕಾರ್ಯಕ್ರಮ ಮೇ 20 ನೇ ವೀರಕಂಭ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ಮೂಲ ನಿವಾಸಿಗಳಾದ ಕೊರಗ ಸಮುದಾಯದವರು ಮತ್ತು ಇತರೆ ಪರಿಶಿಷ್ಟ ಪಂಗಡದವರಿಗೆ ಸಾಮಾಜಿಕ ಭದ್ರತೆ ಯೋಜನೆಗಳು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಪ್ರಯೋಜನಗಳ ಕುರಿತು ಅರಿವು ಮೂಡಿಸುವ ಸಭೆಯಾಗಿದ್ದು,...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ಸಭೆ. ನೂತನ ಜಿಲ್ಲಾ ಸಂಘಟನಾ ಅಧ್ಯಕ್ಷರಾಗಿ ಪ್ರಕಾಶ್ ಕಾರಂತ್ ನರಿಕೊಂಬು ಆಯ್ಕೆ-ಕಹಳೆ ನ್ಯೂಸ್

ಬಂಟ್ವಾಳ : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆಯು ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ ಮೇ.20  ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಎ ಸಿ ಭಂಡಾರಿ ಉದ್ಘಾಟಿಸಿದರು. ಜನಜಾಗೃತಿ ವೇದಿಕೆಯ ನೂತನ ಜಿಲ್ಲಾ ಸಂಘಟನಾ ಅಧ್ಯಕ್ಷರಾಗಿ ರೊಟೇರಿಯನ್ ಪ್ರಕಾಶ್ ಕಾರಂತ್...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಬಂಟ್ವಾಳಸಿನಿಮಾಸುದ್ದಿ

ಮೇ.22ರಂದು ತೆರೆಗೆ ಬರುತ್ತಿರುವ ಬಹುನಿರೀಕ್ಷಿತ ತುಳು ಚಿತ್ರ ‘ಗಜಾನನ ಕ್ರಿಕೆಟರ್ಸ್’-ಕಹಳೆ ನ್ಯೂಸ್

ಕರಾವಳಿಯ ಸಂಸ್ಕೃತಿ, ಸ್ನೇಹ, ಕ್ರಿಕೆಟ್ ಹುಚ್ಚು ಮತ್ತು ಭಾವನೆಗಳನ್ನು ಒಂದೇ ಕಥೆಯಲ್ಲಿ ಒಗ್ಗೂಡಿಸಿಕೊಂಡಿರುವ ಬಹುನಿರೀಕ್ಷಿತ ತುಳು ಚಲನಚಿತ್ರ 'ಗಜಾನನ ಕ್ರಿಕೆಟರ್ಸ್' (ಜಂತೊಟ್ಟು ಸಿನ್ಸ್ 1983) ಇದೇ ಮೇ 22ರಂದು ಕರಾವಳಿ ಜಿಲ್ಲೆಯಾದ್ಯಂತ ಭರ್ಜರಿಯಾಗಿ ತೆರೆಕಾಣುತ್ತಿದೆ. ಪ್ರಜ್ವಲ್ ಫಿಲ್ಡ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರವನ್ನು ಪ್ರಜ್ವಲ್ ಶೆಟ್ಟಿ ನಿರ್ಮಿಸಿದ್ದು, ಕೀರ್ತನ್ ಭಂಡಾರಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈಗಾಗಲೇ ಟೀಸರ್, ಹಾಡುಗಳು ಹಾಗೂ ವಿವಿಧ ಪ್ರಚಾರ ಕಾರ್ಯಕ್ರಮಗಳ ಮೂಲಕ ಸಿನಿಪ್ರೇಕ್ಷಕರಲ್ಲಿ ಭಾರೀ...
1 2 3 4 5 6 219
Page 4 of 219