Thursday, July 23, 2026
ಸುದ್ದಿ

ಗಟ್ಟಿಯಾದ ಕರಿಮಣಿ… ತಲೆಮಾರಿನ ಆಯ್ಕೆ… | ನಿಮ್ಮ ಕನಸಿನ ವಿನ್ಯಾಸದಲ್ಲಿ ಕರಿಮಣಿ ಸರ : ಡಿ. ಶಿವ ಭಟ್ ಜ್ಯುವೆಲ್ಲರ್ಸ್ – ಕಹಳೆ ನ್ಯೂಸ್

ಪುತ್ತೂರು: ಕರಿಮಣಿ ಎಂದರೆ ಸಂಪ್ರದಾಯದ ಬೆಸುಗೆ, ವೈವಾಹಿಕ ಜೀವನದ ಜೀವನಾಡಿ. ಎಷ್ಟೇ ಆಭರಣವಿದ್ದರೂ ಕರಿಮಣಿ ಇಲ್ಲದ ಅಲಂಕಾರ ಗೃಹಿಣಿಗೆ ಪರಿಪೂರ್ಣತೆಯನ್ನು ನೀಡದು. ಪರಂಪರೆಯ ಮಹತ್ವವನ್ನು ಉಳಿಸಿಕೊಂಡು, ಗ್ರಾಹಕರ ಅಭಿರುಚಿಗೆ ತಕ್ಕಂತೆ ವೈವಿಧ್ಯಮಯ ಕರಿಮಣಿ ಸರಗಳನ್ನು ಪರಿಚಯಿಸುತ್ತಿದೆ ಪುತ್ತೂರಿನ ವಿಶ್ವಾಸಾರ್ಹ ಆಭರಣ ಮಳಿಗೆ ಡಿ. ಶಿವ ಭಟ್ ಜ್ಯುವೆಲ್ಲರ್ಸ್.

ವಿಶೇಷ ಕರಿಮಣಿ ಮತ್ತು ವಧುವಿನ ಆಭರಣಗಳನ್ನು ಗ್ರಾಹಕರಿಗೆ ಒದಗಿಸುತ್ತಾ ಬಂದಿರುವ ಡಿ. ಶಿವ ಭಟ್ ಜ್ಯುವೆಲ್ಲರ್ಸ್, “ಗಟ್ಟಿಯಾದ ಕರಿಮಣಿ… ತಲೆಮಾರಿನ ಆಯ್ಕೆ…” ಎಂಬ ವಿಶೇಷ ಅಭಿಯಾನದ ಮೂಲಕ ಮತ್ತೆ ಗ್ರಾಹಕರ ಮುಂದೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಉತ್ತಮ ಗುಣಮಟ್ಟ, ಆಕರ್ಷಕ ವಿನ್ಯಾಸ ಮತ್ತು ಬಾಳಿಕೆಗೆ ಆದ್ಯತೆ. ಇದು “ಗಟ್ಟಿಯಾದ ಕರಿಮಣಿ… ತಲೆಮಾರಿನ ಆಯ್ಕೆ…” ಅಭಿಯಾನದ ವಿಶೇಷತೆ. ಸಾಂಪ್ರದಾಯಿಕ ವಿನ್ಯಾಸಗಳ ಜೊತೆಗೆ ಆಧುನಿಕ ಶೈಲಿಯ ಕರಿಮಣಿ ಸರಗಳು, ಕಂಠಿಗಳು ಹಾಗೂ ಗ್ರಾಹಕರ ಆಯ್ಕೆಯ ವಿನ್ಯಾಸದಲ್ಲಿ ತಯಾರಿಸುವ ವಿಶೇಷ ಸೌಲಭ್ಯ ಇಲ್ಲಿದೆ.

ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ನಲ್ಲಿ ವಿವಿಧ ಮಾದರಿಯ ನುಗ್ಗೆ ಸರಗಳು ಗಮನ ಸೆಳೆಯುತ್ತಿವೆ:
ಪ್ಲೇನ್ ಕರಿಮಣಿಯೊಂದಿಗೆ ನುಗ್ಗೆ ಸರ
ಅಷ್ಟಪಟ್ಟಿ ತೇರು ಕವರ್‌ ನೊಂದಿಗೆ ನುಗ್ಗೆ ಸರ
ಬೋಲ್ಟ್ ಕಟಿಂಗ್ ನುಗ್ಗೆ ಸರ
ಪಿರಿ ವಿನ್ಯಾಸದ ನುಗ್ಗೆ ಸರ
ಒಂದು ಕರಿಮಣಿ ಮತ್ತು ಒಂದು ನುಗ್ಗೆ ಸಂಯೋಜನೆ
ಒಂದು ಪಿರಿ ಕರಿಮಣಿ ಮತ್ತು ಒಂದು ನುಗ್ಗೆ ಸಂಯೋಜನೆ
ಅಷ್ಟಪಟ್ಟಿ ತೇರು ಕವರ್‌ನೊಂದಿಗೆ ನುಗ್ಗೆ ಮುಷ್ಟಿ
ಗ್ಲಾಸ್ ಕಟಿಂಗ್ ಮಿಕ್ಸ್ ಮುಷ್ಟಿ
ಮೂರು ರಿಂಗ್ ಚೈನ್ ಕರಿಮಣಿ ಕಾಂಬಿನೇಷನ್
ವಿಶೇಷ ಕರಿಮಣಿ ಕಾಂಬಿನೇಷನ್‌ನೊಂದಿಗೆ ಮುಷ್ಟಿ
ಸ್ಕ್ವೇರ್ ವಿನ್ಯಾಸದ ಕರಿಮಣಿ ಕಾಂಬಿನೇಷನ್

ವಿಶೇಷ ಕಂಠಿ ಸಂಗ್ರಹ
ಕರಿಮಣಿಯ ನಂತರದ ಸ್ಥಾಣ ಕಂಠಿಗಿದೆ. ಸಂಪ್ರದಾಯಕದ ಸೊಬಗನ್ನು ಉಳಿಸಿಕೊಂಡು, ಇಂದಿನ ಮಹಿಳೆಯರ ಅಭಿರುಚಿಗೆ ತಕ್ಕಂತೆ ವಿನ್ಯಾಸ ಮಾಡುವ ಕೌಶಲ ಡಿ. ಶಿವ ಭಟ್ ಜ್ಯುವೆಲ್ಲರ್ಸ್’ನದ್ದು. ಮಹಿಳೆಯರ ದೈನಂದಿನ ಬಳಕೆ, ಮದುವೆ, ನಿಶ್ಚಿತಾರ್ಥ ಹಾಗೂ ವಿಶೇಷ ಕಾರ್ಯಕ್ರಮಗಳಿಗೆ ಹೊಂದುವ ಮಾದರಿಗಳು ಲಭ್ಯವಿವೆ.

ಪ್ರಮುಖ ಕಂಠಿ ವಿನ್ಯಾಸಗಳು ಹೀಗಿವೆ:
ಕಟ್ಸ್ ಚೈನ್ ಕಂಠಿ, ದೆಹಲಿ ಚೈನ್ ಕಂಠಿ, ದಳಪತಿ ಚೈನ್ ಕಂಠಿ, ಪಡ ಚೈನ್ ಕಂಠಿ, ಸುತ್ತಿದ ಕಂಠಿ, ಪ್ಲೇನ್ ಕಂಠಿ, ಪಿರಿ ಕಂಠಿ, ಬೋಲ್ಟ್ ಕಟಿಂಗ್ ಕಂಠಿ, ಕಟಿಂಗ್ ಕವರ್ ಕಂಠಿ
ಪಿರಿ ಮತ್ತು ತೇರು ಕವರ್ ಮಿಕ್ಸ್ ಕಂಠಿ, ಗೋಲು ಕಂಠಿ ಇವುಗಳ ಜೊತೆಗೆ ಗ್ರಾಹಕರ ಉಡುಗೆ, ಮದುವೆಯ ಶೈಲಿ, ವೈಯಕ್ತಿಕ ಅಭಿರುಚಿ ಮತ್ತು ಬಜೆಟ್ ಹೀಗೆ ಇವೆಲ್ಲವಕ್ಕೂ ಅನುಗುಣವಾಗಿ ವಿನ್ಯಾಸ ಆಯ್ಕೆ ಮಾಡಲು ಮಾರ್ಗದರ್ಶನವೂ ನೀಡಲಾಗುತ್ತದೆ.

ನಿಮ್ಮಿಚ್ಛೆಯ ವಿನ್ಯಾಸ:
ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಎಲ್ಲಾ ರೀತಿಯ ವಿನ್ಯಾಸಗಳು ಲಭ್ಯವಿವೆ. ಇವುಗಳನ್ನು ಹೊರತುಪಡಿಸಿ ವಿಭಿನ್ನವಾದ ವಿನ್ಯಾಸ ಬೇಕೆಂದು ಬೇಡಿಕೆಯಿಟ್ಟರೆ, ಗ್ರಾಹಕರಿಗಾಗಿ ವಿಶೇಷ ತಯಾರಿಕಾ ಸೌಲಭ್ಯವೂ ಇಲ್ಲಿದೆ.

ಹಳೆಯ ಕರಿಮಣಿ ವಿನ್ಯಾಸ, ಕುಟುಂಬದ ಪರಂಪರೆಯ ಮಾದರಿ, ಛಾಯಾಚಿತ್ರ ಅಥವಾ ಮನಸ್ಸಿನಲ್ಲಿರುವ ಕಲ್ಪನೆಯನ್ನು ಹಂಚಿಕೊಂಡು ಹೊಸ ವಿನ್ಯಾಸವನ್ನು ತಯಾರಿಸಬಹುದು. ಸರದ ಉದ್ದ, ಕರಿಮಣಿಯ ಸಾಲು, ನುಗ್ಗೆಗಳ ಸಂಖ್ಯೆ, ಕಂಠಿಯ ವಿನ್ಯಾಸ ಮತ್ತು ಚಿನ್ನದ ಅಂಶ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಇಲ್ಲಿ ರೂಪು ಪಡೆಯುತ್ತವೆ.  “ನಿಮ್ಮ ಇಚ್ಛೆಯ ವಿನ್ಯಾಸದಲ್ಲಿ, ವಿಶೇಷ ಕರಿಮಣಿ ತಯಾರಿಕೆ” ಎಂಬ ಸೇವೆಯ ಮೂಲಕ ಪ್ರತಿಯೊಬ್ಬ ಗ್ರಾಹಕರಿಗೂ ವೈಯಕ್ತಿಕ ಮತ್ತು ವಿಭಿನ್ನ ಅನುಭವ ನೀಡುವುದು ಸಂಸ್ಥೆಯ ಉದ್ದೇಶ.

ಮದುವೆ ಮತ್ತು ಕರಿಮಣಿ
ಮದುವೆ ಸಮಾರಂಭದಲ್ಲಿ ಕರಿಮಣಿ ಸರಕ್ಕೆ ಅತ್ಯಂತ ಪ್ರಮುಖ ಸ್ಥಾನ. ಹಾಗಾಗಿ ವಧು ಹಾಗೂ ಕುಟುಂಬಸ್ಥರು ಸರಿಯಾದ ವಿನ್ಯಾಸಕ್ಕಾಗಿ ಹುಡುಕಾಟ ನಡೆಸುತ್ತಾರೆ. ಇನ್ನು ಹೀಗೆ ಹುಡುಕಾಟ ನಡೆಸುವ ಅಗತ್ಯವೇ ಇಲ್ಲ. ಡಿ. ಶಿವ ಭಟ್ ಜ್ಯುವೆಲ್ಲರ್ಸ್’ನಲ್ಲಿ ಸರಿಯಾದ ಕರಿಮಣಿ ವಿನ್ಯಾಸವನ್ನು ಆಯ್ಕೆ ಮಾಡಲು ವಿಶೇಷ ಸಲಹೆ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ.
ವಧುವಿನ ಮುಖದ ಆಕಾರ, ಸೀರೆ ವಿನ್ಯಾಸ, ಇತರೆ ಆಭರಣಗಳು ಹಾಗೂ ಕುಟುಂಬದ ಸಂಪ್ರದಾಯಕ್ಕೆ ಹೊಂದುವಂತೆ ಕರಿಮಣಿ ಆಯ್ಕೆ ಮಾಡಿಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತದೆ. ಮದುವೆಗೆ ಮುಂಚಿತವಾಗಿ ಆರ್ಡರ್ ನೀಡುವ ಗ್ರಾಹಕರು ತಮ್ಮ ಇಚ್ಛೆಯ ವಿನ್ಯಾಸ ಮತ್ತು ಅಗತ್ಯಕ್ಕೆ ಅನುಗುಣವಾಗಿ ಕರಿಮಣಿ ಸರವನ್ನು ಪಡೆದುಕೊಳ್ಳಬಹುದು.

ಗುಣಮಟ್ಟ, ಬಾಳಿಕೆ, ವಿಶ್ವಾಸ:
ಕರಿಮಣಿ ಸರವು ದೀರ್ಘಕಾಲ ಬಳಕೆಯಲ್ಲಿರುವ ಆಭರಣವಾಗಿರುವುದರಿಂದ ಅದರ ಗಟ್ಟಿತನ ಮತ್ತು ಬಾಳಿಕೆ ಅತ್ಯಂತ ಮುಖ್ಯ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಸರದ ಜೋಡಣೆ, ಕರಿಮಣಿ ಬೀಡ್ಸ್, ಚಿನ್ನದ ಭಾಗಗಳು ಹಾಗೂ ಫಿನಿಷಿಂಗ್‌ಗೆ ವಿಶೇಷ ಗಮನ ನೀಡಲಾಗುತ್ತದೆ.  ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ನಲ್ಲಿ ಗುಣಮಟ್ಟದ ಕರಿಮಣಿ, ಉತ್ತಮ ಕರಕುಶಲತೆ ಮತ್ತು ಆಕರ್ಷಕ ವಿನ್ಯಾಸಕ್ಕೆ ಆದ್ಯತೆ ನೀಡಲಾಗುತ್ತದೆ. ತಲೆಮಾರುಗಳಿಂದ ಬೆಳೆದು ಬಂದ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡು, ಸಂಪ್ರದಾಯ ಮತ್ತು ಆಧುನಿಕತೆಯ ಸಮನ್ವಯದೊಂದಿಗೆ ಸೇವೆ ಸಲ್ಲಿಸುವುದು ಸಂಸ್ಥೆಯ ಪ್ರಮುಖ ಗುರಿ. ಕರಿಮಣಿ ಸರ ಖರೀದಿ, ಹೊಸ ವಿನ್ಯಾಸದ ತಯಾರಿಕೆ, ಹಳೆಯ ವಿನ್ಯಾಸದ ಮರುರೂಪಣೆ ಮತ್ತು ವಧುವಿನ ಆಭರಣಗಳ ಆಯ್ಕೆಗಾಗಿ ಗ್ರಾಹಕರು ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಡಿ. ಶಿವ ಭಟ್ ಜ್ಯುವೆಲ್ಲರ್ಸ್ ಮಳಿಗೆಗೆ ಭೇಟಿ ನೀಡಬಹುದು.