Saturday, May 23, 2026
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಲಡ್ಕ-ಬಾಳ್ತಿಲ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ಕ್ಷಯರೋಗ (TB) ತಪಾಸಣಾ ಹಾಗೂ ಹೃದಯ ಎಕ್ಸ್-ರೇ ಶಿಬಿರ -ಕಹಳೆ ನ್ಯೂಸ್

ಬಂಟ್ವಾಳ : ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಲಡ್ಕ-ಬಾಳ್ತಿಲ ವತಿಯಿಂದ ನರಿಕೊಂಬು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ಕ್ಷಯರೋಗ (TB) ತಪಾಸಣಾ ಹಾಗೂ ಹೃದಯ ಎಕ್ಸ್-ರೇ ಶಿಬಿರ ಮೇ 21 ನೇ ಗುರುವಾರ ಜರಗಿತು.

ಕೇಂದ್ರ ಟಿಬಿ ವಿಭಾಗವು ನರಿಕೊಂಬು ಗ್ರಾಮವನ್ನು “ಹೈ ರಿಸ್ಕ್ ವಿಲೇಜ್” ಎಂದು ಗುರುತಿಸಿದ್ದ ಹಿನ್ನೆಲೆಯಲ್ಲಿ, ಪಿಎಚ್‌ಸಿ ಕಲ್ಲಡ್ಕ-ಬಾಳ್ತಿಲ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಈ ಶಿಬಿರವನ್ನು ಆಯೋಜಿಸಿದರು.
ಶಿಬಿರಕ್ಕಾಗಿ ಡಿಜಿಟಲ್ ಚೇಸ್ಟ್ ಎಕ್ಸ್-ರೇ ಸೌಲಭ್ಯವನ್ನು ದಕ್ಷಿಣ ಕನ್ನಡ ಜಿಲ್ಲಾ ಕ್ಷಯರೋಗ ಕೇಂದ್ರದ ಮೂಲಕ ಒದಗಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶಿಬಿರದಲ್ಲಿ ಒಟ್ಟು 102 ಜನರ ತಪಾಸಣೆ ನಡೆಸಲಾಯಿತು ,

ಕಲ್ಲಡ್ಕ-ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎಚ್‌ಒಗಳು,ತಾಲೂಕು ಆರೋಗ್ಯ ಕಚೇರಿಯ ಟಿಬಿ ಮೇಲ್ವಿಚಾರಕರು,ಜಿಲ್ಲಾ ತಂಡದ ರೇಡಿಯೋಗ್ರಫಿ ಇಮೇಜಿಂಗ್ ಅಧಿಕಾರಿಗಳು, ಗ್ರಾಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಭಾಗವಹಿಸಿ ಶಿಬಿರವನ್ನು ನಡೆಸಿಕೊಟ್ಟರು.