
ಉಪ್ಪಿನಂಗಡಿ ಠಾಣಾ ಅಕ್ರ:158/2015 ಕಲಂ:457, 380 ಐಪಿಸಿ ಪ್ರಕರಣದಲ್ಲಿ ಆರೋಪಿಯಾಗಿ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಸುಮಾರು 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಂಗಳೂರು ಕಸಬಾ ಬೇಂಗ್ರೆ ನಿವಾಸಿ ಅಕ್ರಂ @ ಬೋಜ ಅಕ್ರ ಎಂಬಾತನನ್ನು ದಿನಾಂಕ:22-05-2026 ರಂದು, ಉಪ್ಪಿನಂಗಡಿ ಪೊಲೀಸ್ ಠಾಣಾ ತನಿಖೆ-2 ಪಿಎಸೈ ರವರಾದ ಕೌಶೀಕ್ ಬಿಸಿ, ಸಿಬ್ಬಂಧಿಯವರಾದ ಹೆಚ್ ಸಿ-826 ಶಿವರಾಮ್ ರೈ, ಪಿಸಿ-2277 ಮಹದೇವ ರವರು ಮಂಗಳೂರಿನ ಪಣಂಬೂರಿನಲ್ಲಿ ದಸ್ತಗಿರಿ ಮಾಡಿ ಪತ್ತೆ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಸದ್ರಿ ಆರೊಪಿಯ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿರುತ್ತದೆ.










