ಮಂಗಳೂರು: ‘ನಟ ಸುರೇಂದ್ರ ಬಂಟ್ವಾಳ್ನನ್ನು ನಾನೇ ಕೊಂದೆ. ಇದು ಕಿಶನ್ ಹೆಗ್ಡೆ ಸಾವಿನ ಪ್ರತೀಕಾರ’-ಕಹಳೆ ನ್ಯೂಸ್
ತುಳು ಚಿತ್ರರಂಗದ ನಟ ಸುರೇಂದ್ರ ಬಂಟ್ವಾಳ್ ಬುಧವಾರ ಬರ್ಬರವಾಗಿ ಹತ್ಯೆಯಾಗಿದ್ದರು. ಈ ಕೊಲೆಯನ್ನು ನಾನೇ ಮಾಡಿದ್ದು ಎಂದು ಆತನ ಸ್ನೇಹಿತನೊಬ್ಬ ಪೊಲೀಸರಿಗೆ ಕಳುಹಿಸಿದ್ದಾನೆ ಎನ್ನಲಾದ ಆಡಿಯೋ ಲಭ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ನಲ್ಲಿರುವ ತನ್ನ ಫ್ಲಾಟ್ನಲ್ಲೇ ಸುರೇಂದ್ರ ಬಂಟ್ವಾಳ್ ಕೊಲೆಯಾಗಿದ್ದರು. ಸುರೇಂದ್ರನನ್ನು ಕೊಂದದ್ದು ತಾನೇ ಎಂದಿರುವ ಆರೋಪಿ ಸತೀಶ್ ಕುಲಾಲ್, ಕಳಿಸಿರುವ ಆಡಿಯೊ ಸಂದೇಶದಲ್ಲಿ ಏನಿದೆ ಗೊತ್ತಾ? 'ನಮಸ್ತೆ ನಾನು ಸತೀಶ್ ಮಾತನಾಡೋದು. ನಿನ್ನೆ ರಾತ್ರಿ ವಸ್ತಿ...







