ಪದ್ಮಶ್ರೀ ಪುರಸ್ಕೃತ ಡಾ. ಕದ್ರಿ ಗೋಪಾಲನಾಥ ಸ್ವಾರಕ ಹುಟ್ಟೂರಲ್ಲಿ ಲೋಕಾರ್ಪಣೆ-ಕಹಳೆ ನ್ಯೂಸ್
ಬಂಟ್ವಾಳ: ಖ್ಯಾತ ಸ್ಯಾಕ್ಸೋಫೋನ್ ವಾದಕ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ಅವರ ಹುಟ್ಟೂರು ಸಜೀಪದಲ್ಲಿ ಅವರ ಜನ್ಮದಿನವಾದ ಡಿ.6ರಂದು ಕುಟುಂಬದ ಸದಸ್ಯರು ಡಾ. ಕದ್ರಿ ಗೋಪಾಲನಾಥ್ ಅವರ ಪುಣ್ಯಭೂಮಿ ಸ್ಮಾರಕ ಲೋಕಾರ್ಪಣೆ ಮಾಡಿದರು. ಡಾ. ಕದ್ರಿ ಗೋಪಾಲನಾಥ್ ಅವರ ಸಮಾಧಿಯನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು, ಅಲ್ಲಿ ಸಂಗೀತ ದೇಶ, ಧರ್ಮ ಮೀರಿದ ವಿಶ್ವಭಾಷೆ, ಹೃದಯ ಭಾಷೆ ಎಂದು ಬರೆದಿದ್ದು, ಕದ್ರಿಯವರ ಪುತ್ಥಳಿಯಿದೆ. ಅಪರಾಹ್ನ 3 ಗಂಟೆಯಿಂದ ಅವರ ಶಿಷ್ಯರಾದ ಚಂದ್ರಶೇಖರನಾಥ...







