ಸೋಲಿನ ಭೀತಿಯಲ್ಲಿ ಜೆ.ಆರ್.ಲೋಬೊ ವಿರುದ್ದ ವಾಮಚಾರ ಮಾಡಿಸಿದ್ರಾ ವೇದವ್ಯಾಸ್ ಕಾಮತ್ ? – ಕಹಳೆ ನ್ಯೂಸ್
ಮಂಗಳೂರು, ಮೇ 3: ಜೆ.ಆರ್.ಲೋಬೊ ವಿರುದ್ದ ನಂದಿಗುಡ್ಡ ಹಿಂದೂ ರುದ್ರಭೂಮಿಯಲ್ಲಿ ಮಾಟ ಮಂತ್ರ ಪ್ರಯೋಗಿಸಲಾಗಿದೆ ಎಂದು ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ನಂದಿಗುಡ್ಡದ ರುದ್ರಭೂಮಿಯಲ್ಲಿ ಏ. ೦3 ರ ಗುರುವಾರ ವಾಮಚಾರದ ಕುರುಹು ಪತ್ತೆಯಾಗಿದೆ. ಸುಮಾರು 10 ದಿನಗಳ ಹಿಂದೆ ಇಲ್ಲಿ ಶಾಸಕ ಲೋಬೋಗೆ ವಾಮಚಾರ ಮಾಡಲಾಗಿದೆ ಎಂಬ ಮಾಹಿತಿ ಕಾಂಗ್ರೆಸ್ಸಿಗರಿಗೆ ದೊರಕಿದ್ದು ಇದಕ್ಕಾಗಿ ನಂದಿಗುಡ್ಡದ ಸ್ಥಳದಲ್ಲಿ ತೀವ್ರ ಹುಡುಕಾಟ ನಡೆಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಮದ್ಯೆ ಇಂದು...







