Monday, September 7, 2026

ರಾಜಕೀಯ

ರಾಜಕೀಯ

ರಥಬೀದಿಯಲ್ಲಿ ಶ್ರೀಕರ ಪ್ರಭು ರೋಡ್ ಶೋ ; ಯುವಕರ ರಣೋತ್ಸಾಹ – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರಂಗೇರಿದೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿರುವಂತೆಯೇ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಕೂಡ ತಮ್ಮಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಮನೆ ಮನೆ ಭೇಟಿಯ ಬಳಿಕ ಐದನೇ ಹಂತದಲ್ಲಿ ರೋಡ್ ಶೋ ನಡೆಸುವ ಮೂಲಕ ತಮ್ಮ ಪ್ರಬಲ ಜನಬೆಂಬಲವನ್ನು ಸಾಬೀತುಪಡಿಸಿದ್ದಾರೆ. ಗೌಡ ಸಾರಸ್ವತ ಬ್ರಾಹ್ಮಣ ಬಾಹುಳ್ಯದರಥಬೀದಿಯಲ್ಲಿ ತಮ್ಮ ಬೃಹತ್ ಪಾದಯಾತ್ರೆಯ ಅಭಿಯಾನಕ್ಕೆ ಚಾಲನೆ ನೀಡಿದ ಶ್ರೀಕರ ಪ್ರಭು ಮತದಾರರನ್ನು ಸೆಳೆಯುವ ಎಲ್ಲ ಲಕ್ಷಣಗಳನ್ನು ಪ್ರದರ್ಶಿಸಿದ್ದಾರೆ. ತಮ್ಮ ಚುನಾವಣಾ ಚಿಹ್ನೆಯಾದ ಆಟೋ ರಿಕ್ಷಾದಮಾದರಿಯನ್ನು ರಿಕ್ಷಾ ಚಾಲಕರಿಗೆ ನೀಡುವ ಮೂಲಕ ಶ್ರೀಕರ ಪ್ರಭು ತಮ್ಮ ಮತಬೇಟೆಯ ಅಭಿಯಾನವನ್ನು ಅದ್ದೂರಿಯಾಗಿ ಆರಂಭಿಸಿದ್ದಾರೆ. ಇನ್ನು 5 ದಿನಗಳ ಕಾಲ ಮಂಗಳೂರಿನ ಪ್ರಮುಖ ಬೀದಿಗಳಲ್ಲಿ ಶ್ರೀಕರ ಪ್ರಭುರೋಡ್ ಶೋ ನಡೆಸುವ ಮೂಲಕ ಎಲ್ಲರ ಗಮನ ಸೆಳೆಯಲಿದ್ದಾರೆ. * ಅದ್ದೂರಿ ಪ್ರಚಾರಕ್ಕೆ ಶ್ರೀಕರ ಪ್ರಭು ಚಾಲನೆ * ಶ್ರೀಕರ ಪ್ರಭುವಿಗೆ ಜ್ಯೂ. ನರೇಂದ್ರ ಮೋದಿ ಸಾಥ್ * ರೋಡ್ ಶೋಗೆ ಯುವಕರ ರಣೋತ್ಸಾಹ * ಮೊದಲ ದಿನ ರಥಬೀದಿಯಲ್ಲಿ ಭರ್ಜರಿ ಮತಬೇಟೆ * ಗಮನ ಸೆಳೆಯುತ್ತಿರುವ ಪಕ್ಷೇತರ ಅಭ್ಯರ್ಥಿ ಗಮನ ಸೆಳೆದ ಜ್ಯೂನಿಯರ್ ನರೇಂದ್ರ ಮೋದಿ   ರಥಬೀದಿಯಲ್ಲಿ ನರೇಂದ್ರ ಮೋದಿಯನ್ನು ಕಂಡು ಜನ ಹೌಹಾರಿದರು.  ನರೇಂದ್ರ ಮೋದಿ ಅವರನ್ನು ಹೋಲುವ ಜ್ಯೂನಿಯರ್ ನರೇಂದ್ರ ಮೋದಿ @ರಥಬೀದಿಯ ವಸಂತ ಪ್ರಭು ಅವರು ಎಲ್ಲರ ಗಮನಸೆಳೆದಿದ್ದಾರೆ. ಪಕ್ಷೇತರಅಭ್ಯರ್ಥಿ ಶ್ರೀಕರ ಪ್ರಭು ಅವರ ಪರ ಪ್ರಚಾರದಲ್ಲಿ ತೊಡಗಿರುವ ಮಂಗಳೂರಿನ ಜ್ಯೂನಿಯರ್ ಮೋದಿ ಎಂದೇ ಖ್ಯಾತಿ ಪಡೆದ ವಸಂತ ಪ್ರಭು ಒಂದು ಕೈಯಲ್ಲಿ ರಿಕ್ಷಾದ ಪ್ರತಿಕೃತಿ ಇನ್ನೊಂದು ಕೈಯಲ್ಲಿ ಪ್ಯಾಂಪ್ಲೆಟ್ ಹಿಡಿದುರೋಡ್ ಶೋದಲ್ಲಿ ಹೆಜ್ಜೆ ಹಾಕಿದರು. ಜ್ಯೂನಿಯರ್ ಮೋದಿಯನ್ನು ನೋಡಲು ಜನ ಮುತ್ತಿಹಾಕಿದರು. ಕೈ ಕುಲುಕಿ ಸೆಲ್ಫಿ ಪಡೆದು ಖುಷಿ ಪಟ್ಟರು. ರೋಡ್ ಶೋದಲ್ಲಿ ಪ್ರಧಾನ ಆಕರ್ಷಣೆಯಾಗಿ ವಸಂತ್ ಪ್ರಭು ಎಲ್ಲರಗಮನಸೆಳೆದರು. ಪ್ರಮುಖ ಎರಡು ಪಕ್ಷಗಳನ್ನು ಬಿಟ್ಟರೆ ಉಳಿದ ಯಾವ ಅಭ್ಯರ್ಥಿಯೂ ಇಷ್ಟೊಂದು ಭರ್ಜರಿಯಾದ ಪ್ರಚಾರವನ್ನು ನಡೆಸಿಲ್ಲ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಮೊದಲನೇ ದಿನವೇ ತಮ್ಮ ಪರವಾಗಿಹವಾ ಸೃಷ್ಟಿಸಿಕೊಳ್ಳುವಲ್ಲಿ ಶ್ರೀಕರ ಪ್ರಭು ಯಶಸ್ವಿಯಾಗಿದ್ದು ಮತ್ತೊಂದು ಗಮನಾರ್ಹ ಸಂಗತಿ. ಪ್ರಾರಂಭದಲ್ಲಿ ಶ್ರೀಕರ್ ಪ್ರಭು ಅವರ ಕುಟುಂಬ ಮತ್ತು ಬಾರಿ ಸಂಖ್ಯೆಯ ಅಭಿಮಾನಿಗಳು ಮತ್ತು ಚುನಾವಣಾ ಉಸ್ತುವಾರಿಸದಸ್ಯರ ಸಹಿತ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿಯ ಪರ್ವದಿನದಂದು ವಿಶೇಷ ಪೂಜೆ ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ಶ್ರೀಕರ ಪ್ರಭು ಅಭಿಮಾನಿ ಬಳಗದ ಅದ್ಯಕ್ಷರದ ಕೆ.ಪಿ. ಶೆಟ್ಟಿಬೇಡೆಮಾರ್, ಕಾರ್ಯದರ್ಶಿ ಪ್ರೇಮ್ ಚಂದ್ರ, ಉಸ್ತುವಾರಿ ಸುರೇಶ ಶೆಟ್ಟಿ, ಸಂಯೋಜಕ ಅವಿನಾಶ್ ಶೆಟ್ಟಿ, ಚಿತ್ರಕಲಾ ಪ್ರಭು, ಸೀಮಾ ಪ್ರಭು, ಐಶ್ವರ್ಯ ನಾಯಕ್, ಮಾಯಾ ನಾಯಕ್, ಶರತ್ ಅಮೀನ್, ನಿತಿನ್ ಸುವರ್ಣ,ಅಶ್ವಿತ್ ಕುಮಾರ್, ವಸಂತ್ ಪ್ರಭು, ಭಾಸ್ಕರ್ ಗಟ್ಟಿ, ಅನಿಲ್ ಕುಮಾರ್, ಆನಂದ ಶೆಟ್ಟಿ, ವೆಂಕಟರಮಣ ಮಲ್ಯ, ಜೈರಾಮ್ ಕಾಮತ, ರಾಮ್ ಮೋಹನ್, ಮಹೇಶ್ ಭಟ್, ಸೂರಜ್ ಪ್ರಭು, ರಘುನಾಥ್, ಮತ್ತಿತರುಉಪಸ್ಥಿತರಿದ್ದರು. ​...
ರಾಜಕೀಯ

ಬಿಜೆಪಿ ಪ್ರಣಾಳಿಕೆ ಬಿಡುಗಡೆ : ₹ 1 ಲಕ್ಷ ಸಾಲಮನ್ನಾ, ಯುವತಿಯರಿಗೆ ಚಿನ್ನದ ತಾಳಿ, ಮಹಿಳೆಯರಿಗೆ ಸ್ಮಾರ್ಟ್‌ಫೋನ್‌

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮನಗೆಲ್ಲಲು ಬಿಜೆಪಿ ‘ನಮ್ಮ ಕರ್ನಾಟಕಕ್ಕೆ ನಮ್ಮ ವಚನ’ ಎಂಬ ಹೆಸರಿನ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳು: * ₹ 1 ಲಕ್ಷವರೆಗಿನ ರೈತರ ಸಾಲಮನ್ನಾ * ಕಾಲೇಜಿಗೆ ಸೇರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ * ಮೊದಲ ಸಂಪುಟ ಸಭೆಯಲ್ಲಿ ಲೋಕಾಯುಕ್ತಕ್ಕೆ ಪೂರ್ಣಾಧಿಕಾರ ನೀಡುವ ತೀರ್ಮಾನ * ಪಿಎಫ್ಐ, ಕೆಎಫ್ ಡಿ ಸಂಘಟನೆಗಳ ನಿಷೇಧ * ಗೋಹತ್ಯೆ ತಡೆ ಮಸೂದೆ ಜಾರಿ *...
ರಾಜಕೀಯ

ಶಾಸಕ ಲೋಬೋರ ‘ಸಾಧನೆಯ ಹಾದಿಯಲ್ಲಿ’ ಪುಸ್ತಕದಲ್ಲಿ ನಮಗೆ ಅವಮಾನ: ದಂಪತಿ ಆರೋಪ

ಮಂಗಳೂರು: ಮತದಾರರನ್ನು ಮೆಚ್ಚಿಸುವ ಭರದಲ್ಲಿ ತಮ್ಮ ಸಾಧನೆಯ ಹಾದಿ ಪುಸ್ತಕದಲ್ಲಿ ಶಾಸಕ ಜೆ.ಆರ್. ಲೋಬೋ ಅವರು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಬೆಂಗರೆಯ ತೋಟ ನಿವಾಸಿ ಶರತ್ ಮೆಂಡನ್ ದಂಪತಿ ಆರೋಪಿಸಿದ್ದಾರೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಂಪತಿ, ಶಾಸಕರು ಬಿಡುಗಡೆ ಮಾಡಿರುವ ಪುಸ್ತಕದಲ್ಲಿ ತಮಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದರು. ಮೂರು ವರ್ಷದ ಹಿಂದೆ ಬೆಂಗರೆ ತೋಟದಲ್ಲಿರುವ ನಮ್ಮ ಮನೆ ಬೆಂಕಿ ಅನಾಹುತದಲ್ಲಿ...
ರಾಜಕೀಯ

ಕಾಂಗ್ರೆಸ್ ಕಾರ್ಯಕರ್ತರ ಜನ್ಮ ಜಲಾಡಿದ ಕಿಶೋರ್ ಕುಮಾರ್ ಪುತ್ತೂರು – ಕಹಳೆ ನ್ಯೂಸ್

ಮಂಗಳೂರು : ಮನೆಗಳಿಗೆ ಬಿಜೆಪ ಅಭ್ಯರ್ಥಿ ವೇದವ್ಯಾಸ ಕಾಮತ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಪತ್ರಿಕೆ ಯನ್ನು ಹಂಚುತ್ತಿದ್ದ ಇಬ್ಬರು ಯುವಕರನ್ನು ಬಿಜೆಪಿ ಕಾರ್ಯಕರ್ತರು ಹಿಡಿದು ಕದ್ರಿ ಪೋಲಿಸ್ ಠಾಣೆಗೆ ಒಪ್ಪಿಸಿದರು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಪೋಲೀಸರ ಮೇಲೆ ಒತ್ತಡ ಹೇರಿ ಯುವಕರನ್ನು ಬಿಟ್ಟು ಅವರನ್ನು ಹಿಡಿದುಕೊಟ್ಟ ಬಿಜೆಪಿ ಕಾರ್ಯಕರ್ತರ ಮೇಲೆ ಕ್ರಮ ತೆಗೆದುಕೊಳ್ಳಲು ಒತ್ತಡ ಹೇರುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿ...
ರಾಜಕೀಯ

ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ನಟಿ ಭಾವನಾ! – ಕಹಳೆ ನ್ಯೂಸ್

ಸಿನಿಮಾ ಟಾಕ್​ : ನಟಿ ಭಾವನಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪರನ್ನು ಭೇಟಿ ಮಾಡಿ ತೀವ್ರ ಕುತೂಹಲ ಕೆರಳಿಸಿದ್ದಾರೆ. ಕೈ ಪಕ್ಷದ ಅಭ್ಯರ್ಥಿ ನಟಿ  ಭಾವನಾ ಇದೀಗ ಬಿಎಸ್​ ವೈ ನಿವಾಸಕ್ಕೆ  ಭೇಟಿ ಮಾಡಿದ್ದರ ಹಿಂದೆ ಬಿಜೆಪಿ ಸೇರುವ ಲಕ್ಷಣಗಳಿವೆ.  ಈ ಹಿಂದೆ  ಭಾವನಾ ಚಿತ್ರದುರ್ಗದಿಂದ ಕಾಂಗ್ರೆಸ್​ ಪಕ್ಷದ  ಟಿಕೆಟ್​ ಅಭ್ಯರ್ಥಿಯಾಗಿದ್ದರು, ಟಿಕೆಟ್​ಗಾಗಿ ಇನ್ನಿಲ್ಲದ ಕಸರತ್ತು ಕೂಡ ನಡೆಸಿದ್ದರು. ಕೋಟೆನಾಡಿನ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್​ಗಾಗಿ  ಪ್ರಯತ್ನ  ಭಾವನಾ ಇದೀಗ...
ರಾಜಕೀಯ

ಕರುನಾಡಲ್ಲಿ ಜಿಹಾದಿಗಳನ್ನು ಸೃಷ್ಟಿಸಿದ ಕಾಂಗ್ರೆಸ್‌ – ಯೋಗಿ​​​​​​​

ಶಿರಸಿ: ಕರ್ನಾಟಕ ಎಂದರೆ ಕಾಂಗ್ರೆಸ್‌ಗೆ ಎಟಿಎಂ. ರಾಜ್ಯದಲ್ಲಿ ದುರಾಡಳಿತ, ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಕರ್ನಾಟಕದಲ್ಲಿ ಸರಕಾರವೇ ಇಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಟೀಕಾ ಪ್ರಹಾರ ನಡೆಸಿದರು. ಗುರುವಾರ ಶಿರಸಿಯಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಿಂದ ಮಂಗಳೂರು, ಹಾಸನದಿಂದ ಚಿಕ್ಕಮಗಳೂರು, ಹುಬ್ಬಳ್ಳಿ ಎಲ್ಲಿಯೇ ಹೋದರೂ ದುರಾಡಳಿತ ಇದೆ.  ಹಿಂದೂ ಕಾರ್ಯಕರ್ತರ ಕಗ್ಗೊಲೆಗಳಾಗಿವೆ. ರೈತರ ಆತ್ಮಹತ್ಯೆಗಳಾಗಿವೆ. ಯಾರಿಗೂ ನೆಮ್ಮದಿ ಕೊಡದ, ಜಾತಿ, ಮತ, ಧರ್ಮದಲ್ಲಿ ವಿಷ...
ರಾಜಕೀಯ

ಗೋ ಗ್ರೀನ್ ಬಂಟ್ವಾಳ ; ರಾಜೇಶ್ ನಾಯಕ್ ಗೆ ರೈತ ನಾಯಕನ ಬೆಂಬಲ – ಕಹಳೆ ನ್ಯೂಸ್

ಮಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ರಾಜಕೀಯ ಪಕ್ಷಗಳಿಂದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಪುಂಖಾನುಪುಂಖವಾಗಿ ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ಬುದ್ಧಿವಂತ ಮತದಾರರು ಮಾತ್ರ ಅಭ್ಯರ್ಥಿಗಳ ವೈಯಕ್ತಿಕ ಹಿನ್ನೆಲೆಯನ್ನು ನೋಡಿ ಮತ ಹಾಕಲು ಸಜ್ಜಾಗಿದ್ದಾರೆ. ಈ ಪೈಕಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರಿಗೆ ರೈತಸಂಘದ ನಾಯಕ ಮನೋಹರ...
ರಾಜಕೀಯ

ಹೃದಯಾಘಾತ ; ಬಿಜೆಪಿ ಶಾಸಕ ವಿಜಯಕುಮಾರ್ ಇನ್ನಿಲ್ಲ – ಕಹಳೆ ನ್ಯೂಸ್

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಅವರಿಗೆ ಲಘು ಹೃದಯಾಘಾತವಾಗಿದ್ದು, ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತು ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ವೇಳೆ ವಿಜಯ್ ಕುಮಾರ್ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕಾರ್ಯಕರ್ತರು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ....
1 220 221 222 223 224 232
Page 222 of 232