ಮತ್ತೆ ಸಂಪು ವಿಸ್ತರಣೆ ಸದ್ದು: ಜನವರಿ 19ಕ್ಕೂ ಮುಂಚೆ ನಡೆಯುವ ಸಾಧ್ಯತೆ – ಕಹಳೆ ನ್ಯೂಸ್
ಬೆಂಗಳೂರು: ಧನುರ್ಮಾಸ ಹಾಗೂ ಮುಖ್ಯಮಂತ್ರಿ ವಿದೇಶಿ ಪ್ರವಾಸ ಸೇರಿದಂತೆ ನಾನಾ ಕಾರಣಗಳಿಂದ ಮುಂದೂಡಲಾಗಿದೆ ಎನ್ನಲಾಗುತ್ತಿದ್ದ ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಮತ್ತೆ ಸದ್ದು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ರಾಜ್ಯ ಪ್ರವಾಸ ಮುಗಿದ ಕೂಡಲೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಅನುಮೋದನೆ ಪಡೆಯಲು ದೆಹಲಿಗೆ ಪ್ರಯಾಣಿಸಲಿದ್ದಾರೆ ಎಂಬಂತಹ ಸುದ್ದಿಗಳು ಹರಿದಾಡುತ್ತಿವೆ. ಮಕರ ಸಂಕ್ರಾಂತಿ ಬಳಿಕ ಜನವರಿ 16 ಮತ್ತು 19ರ ನಡುವೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ...



