ಡಿಸಿಎಂ ಲಕ್ಷ್ಮಣ್ ಸವದಿಗೆ ಬಿಗ್ ಶಾಕ್ : ಖಾಲಿ ಇರುವ ಒಂದು `MLC’ ಸ್ಥಾನಕ್ಕೆ ಬೇಡಿಕೆ ಇಟ್ಟ ಆರ್.ಶಂಕರ್ -ಕಹಳೆ ನ್ಯೂಸ್

ಬೆಂಗಳೂರು : ಡಿಸಿಎಂ ಲಕ್ಷ್ಮಣ್ ಸವದಿಗೆ ಬಿಗ್ ಶಾಕ್ ಎದುರಾಗಿದ್ದು, ಖಾಲಿ ಉಳಿದಿರುವ ಒಂದು ಎಂಎಲ್ ಸಿ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ ಶುರುವಾಗಿದ್ದು, ಆರ್. ಶಂಕರ್ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ನಡುವೆ ಪರಿಷತ್ ಸ್ಥಾನಕ್ಕಾಗಿ ಬಿಗ್ ಫೈಟ್ ಶುರುವಾಗಿದೆ.
ಫೆಬ್ರವರಿ 20 ಕ್ಕೆ ಲಕ್ಷ್ಮಣ್ ಸವದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ 6 ತಿಂಗಳಾಗುತ್ತದೆ. ಸಚಿವರು 6 ತಿಂಗಳೊಳಗೆ ಪರಿಷತ್ ಗೆ ಆಯ್ಕೆಯಾಗಬೇಕು. ಕಾಂಗ್ರೆಸ್ ಪರಿಷತ್ ಸದಸ್ಯ ರಿಜ್ವಾನ್ ಅರ್ಷಾದ್ ರಿಂದ ತೆರವಾಗುವ ಸ್ಥಾನಕ್ಕೆ ಸದ್ಯ ಆರ್. ಶಂಕರ್ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ನಡುವೆ ಬಿಗ್ ಫೈಟ್ ಎದುರಾಗಿದೆ.
ಆರ್. ಶಂಕರ್ ಅವರು ರಾಣೆಬೆನ್ನೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಚುನಾವಣೆ ಬಳಿಕ ಎಂಎಲ್ ಸಿ ಸ್ಥಾನ ನೀಡುವ ಭರವಸೆಯೊಂದಿಗೆ ಸಚಿವರಾಗುವ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಎಂಎಲ್ ಸಿ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿ









