ಸಿಎಎ & ಎನ್.ಆರ್.ಸಿ. ಬೆಂಬಲಿಸಿ ಮಂಗಳೂರಿನಲ್ಲಿ ಬೃಹತ್ ಸಮಾವೇಶ ; ಲಕ್ಷಕ್ಕೂ ಮಿಕ್ಕಿ ಜನಸ್ತೋಮವನ್ನು ಉದ್ದೇಶಿಸಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಷಣ – ಕಹಳೆ ನ್ಯೂಸ್
ಮಂಗಳೂರು: ಸಿಎಎಯನ್ನು ವಿರೋಧಿಸುವುದು ಸಾಂವಿಧಾನಿಕ ಪ್ರಮಾದವಾಗಿದ್ದು ಸಿಎಎ ಕಾಯ್ದೆಯ ಕುರಿತಂತೆ ಕಾಂಗ್ರೆಸ್ ಗೊಂದಲದ ವಾತಾವರಣವನ್ನು ನಿರ್ಮಿಸಿದ್ದು, ಯಾವುದೇ ವಿಪಕ್ಷಗಳು ತಮ್ಮ ಪಕ್ಷ ಧರ್ಮವನ್ನು ನಿಭಾಯಿಸುವುದಕ್ಕಾಗಿ ರಾಷ್ಟ್ರ ಧರ್ಮವನ್ನು ಮರೆಯಬಾರದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ನಗರದ ಕೂಳೂರಿನ ಗೋಲ್ಡ್ಪಿಂಚ್ ಮೈದಾನದಲ್ಲಿ ಇಂದು ಕೇಂದ್ರ ಸರಕಾರದ ಸಿಎಎ ಪರ ಜಾಗೃತಿ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. “ನಾನು ಇಂದು ಮಂಗಳೂರಿಗೆ ಬಂದಿದ್ದೇನೆ, ಆದರೆ ಇದೇ ಮೊದಲ ಬಾರಿಗೆ ನಾನು...





