ಕಾರ್ಮಿಕರ ಕಷ್ಟ ಕೇಳೋ ಭರದಲ್ಲಿ ಸಾಮಾಜಿಕ ಅಂತರ ಮರೆತಾರ ಐವನ್ ಡಿಸೋಜಾ..!?? – ಕಹಳೆ ನ್ಯೂಸ್
ಮಂಗಳೂರು: ಇಂದು ಬೆಳ್ಳಂ-ಬೆಳಗ್ಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಸುಮಾರು 700 ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಜಮಾಯಿಸಿ, ಸೀನ್ ಕ್ರೀಯೇಟ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುಳ್ಳು ಸುದ್ದಿಯನ್ನು ನಂಬಿ ಉತ್ತರ ಪ್ರದೇಶದ ವಲಸೆ ಕಾರ್ಮಿಕರು ಗಂಟು ಮೂಟೆ ಕಟ್ಟಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ, ಸಾಮಾಜಿಕ ಅಂತರ ಆದೇಶವನ್ನು ಗಾಳಿಗೆ ತೂರಿದ್ದರು. ಇದೀಗ ಕಾರ್ಮಿಕರೇನೂ ಪಾಪ ತಮ್ಮ ಹುಟ್ಟೂರಿಗೆ ತೆರಳುವ ಸಂಭ್ರಮದಲ್ಲೋ ಅಥವಾ ತಮಗೆ ಅರಿವಿಲ್ಲದಂತೆಯೋ ಸಾಮಾಜಿಕ...







