Saturday, May 9, 2026

ರಾಜಕೀಯ

ರಾಜಕೀಯಸುದ್ದಿ

” ಕಾರ್ಯತ್ಯಾಗಮಯಿಗಳ ಮೇಲೆ ದಾಳಿ ಮಾಡುವವ ಯಾರೇ ಆಗಲಿ ಅವನನ್ನು ಗುಂಡಿಟ್ಟು ಕೊಂದರೂ ತಪ್ಪಿಲ್ಲ ” – ಬೆಂಗಳೂರು ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್‌ ಮೇಲಿನ ಹಲ್ಲೆ ಖಂಡಿಸಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಆಕ್ರೋಶ – ಕಹಳೆ ನ್ಯೂಸ್

ಬೆಳ್ತಂಗಡಿ : ಬೆಂಗಳೂರಿನ ಪಾದಾರಾಯನಪುರದಲ್ಲಿ ಪೋಲೀಸರ ಮತ್ತು ಕೊರೊನಾ ವಾರಿಯರ್ಸ್ ಮೇಲೆ ನಡೆದ ಹಲ್ಲೆಯ ಕುರಿತು ಕಟುವಾಗಿ ಖಂಡಿಸಿ ಫೇಸ್‌ಬುಕ್‌ ಪೋಸ್ಟ್ ಮಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಆಕ್ರೋಶ ಹೊರಹಾಕಿದ್ದಾರೆ. " ಕೈ ಮುಗಿದು ಮನವಿ ಮಾಡಿದರು ಬಗ್ಗದವರಿಗೆ ಕೈ ಎತ್ತಿ ಅರಿವು ಮೂಡಿಸಬೇಕಾದ ಕಾಲ ಇದು... ಕೋವಿಡ್19 ಸೋಂಕು ಹರಡುವುದನ್ನು ತಡೆಯಲು ವೈದ್ಯಕೀಯ ಸಿಬ್ಬಂದಿಗಳು ಅವರುಗಳ ಬದುಕನ್ನು ಪಣಕ್ಕೆ ಇಟ್ಟು ಹೋರಾಡುತ್ತಿದ್ದಾರೆ. ಅವರುಗಳ ಈ ಹೋರಾಟ ರಾಜ್ಯದ...
ರಾಜಕೀಯಸುದ್ದಿ

ಸರಕಾರದ ಆದೇಶ ಉಲ್ಲಂಘನೆ ಹಾಗೂ ಜಿಲ್ಲಾಡಳಿತ ಮೇಲೆ ಗೂಬೆ ಕೂರಿಸಿದ್ದ ಉಪ್ಪಿನಂಗಡಿಯ ವ್ಯಕ್ತಿಯ ಪತ್ನಿಗೆ ಹೇಗೆ ಪಾಸಿಟಿವ್ ಆಯಿತು..? ; ತಕ್ಷಣ ಜಿಲ್ಲಾಡಳಿತ ಈತನ ವಿರುದ್ಧ ಪ್ರಕರಣ ದಾಖಲಿಸಬೇಕು – ಶಾಸಕ ಸಂಜೀವ ಮಠಂದೂರು ಆಕ್ರೋಶ – ಕಹಳೆ ನ್ಯೂಸ್

ಮಂಗಳೂರು : ದ.ಕ ಜಿಲ್ಲೆಯಲ್ಲಿ ‌ಮತ್ತೊಂದು ಪಾಸಿಟಿವ್ ಪ್ರಕರಣ ‌ಪತ್ತೆಯಾಗಿದೆ. ಎ.16ರಂದು ಪಾಸಿಟಿವ್ ಆಗಿದ್ದ ಉಪ್ಪಿನಂಗಡಿ ನಿವಾಸಿಯ ಪತ್ನಿಗೆ ಸೋಂಕು ತಗಲಿರುವು ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಕಹಳೆನ್ಯೂಸ್ ಗೆ ಪ್ರತಿಕ್ರಿಯೆ ನೀಡದ ಪುತ್ತೂರು ಶಾಸಕ ಸಂಜೀವ ಮಠಂದೂರು ಆಕ್ರೋಶ ಹೊರಹಾಕಿದ್ದಾರೆ. ಹಿನ್ನಲೆ : P325 ಉಪ್ಪಿನಂಗಡಿಯ ಸೋಂಕಿತ ಒಂದು ಆರೋಪವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತದ ಮೇಲೆ ಮಾಡಿ ಆಡಿಯೋ ಹರಿಬಿಟ್ಟಿದ ಹಾಗೂ ತಾನು ಸ್ವತಃ ವಕೀಲನಾಗಿದ್ದು, ಸರಕಾರ ಆದೇಶಸಿದಾಗ ತಾನು‌...
ರಾಜಕೀಯಸುದ್ದಿ

ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾದ ಚಾರ್ಮಾಡಿ ಘಾಟಿ ಪ್ರದೇಶದಲ್ಲಿರುವ ಕೋತಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಜನಸ್ನೇಹಿ ಶಾಸಕ ಹರೀಶ್ ಪೂಂಜ – ಕಹಳೆ ನ್ಯೂಸ್

ಬೆಳ್ತಂಗಡಿ : ಕೊರೊನಾ ಕೋವಿಡ್ 19 ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೈಗೊಂಡ ಲಾಕ್ ಡೌನ್ ನಿಂದಾಗಿ ವಾಹನಗಳನ್ನೇ ಆಹಾರಕ್ಕೆ ಅವಲಂಬಿತರಾಗಿರುವ ಚಾರ್ಮಾಡಿ ಘಾಟಿ ಪ್ರದೇಶದಲ್ಲಿರುವ ಕೋತಿಗಳು ಸಂಕಷ್ಟಕ್ಕೀಡಾಗಿದ್ದವು, ಆಹಾರ ವಿಲ್ಲದೆ ಪರಿತಪಿಸುತ್ತಿದ್ದ, ಚಾರ್ಮಾಡಿ ಘಾಟಿ ಪ್ರದೇಶದಲ್ಲಿರುವ ಪ್ರಾಣಿಗಳಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಈಗ ಶಾಸಕ ಈ ಫೋಟೋ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಶಾಸಕ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ....
ರಾಜಕೀಯ

‘ನಿಖಿಲ್‌ ಕುಮಾರಸ್ವಾಮಿ ವಿವಾಹ ಸಮಾರಂಭದಲ್ಲಿ ನಿಯಮ ಉಲ್ಲಂಘಿಸಿಲ್ಲ’ ; ಸಿಎಂ ಯಡಿಯೂರಪ್ಪ – ಕಹಳೆ ನ್ಯೂಸ್

ಬೆಂಗಳೂರು, ಎ.18  : ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರ ವಿವಾಹ ಸಮಾರಂಭದಲ್ಲಿ ಅವರು ನಿಯಮ ಉಲ್ಲಂಘಿಸಿಲ್ಲ. ಎಲ್ಲಾ ಅನುಮತಿ ನೀಡಲಾಗಿತ್ತು ಎಂದು ಸಿಎಂ ಬಿಎಸ್‌ವೈ ಅವರು ಹೇಳಿದ್ದಾರೆ. ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಎಸ್‌ವೈ ಅವರು, ಸರಳವಾಗಿ ಅವರು ವಿವಾಹ ಕಾರ್ಯಕ್ರಮ ಮಾಡಿದ್ದಾರೆ. ಅವರು ನಿಯಮ ಉಲ್ಲಂಘಿಸಿಲ್ಲ. ಈ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಬಂಧು-ಬಳಗ ದೊಡ್ಡ ಪ್ರಮಾಣದಲ್ಲಿದ್ದರೂ ಇತಿಮಿತಿಗಳಲ್ಲಿ ವಿವಾಹ ಕಾರ್ಯಕ್ರಮವನ್ನು ಮಾಡಿದ್ದಾರೆ ಎಂದರು....
ರಾಜಕೀಯಸುದ್ದಿ

‘ಮೇ 3ರವರೆಗೂ ಎಣ್ಣೆ ಮಾರಾಟ ಇಲ್ಲ’ – ಸಿಎಂ ಯಡಿಯೂರಪ್ಪ ಸ್ಪಷ್ಟನೆ-ಕಹಳೆ ನ್ಯೂಸ್

ಬೆಂಗಳೂರು(ಏ.18): ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಈಗಾಗಲೇ ಇಡೀ ದೇಶವನ್ನು ಲಾಕ್​​ಡೌನ್​​ ಮಾಡಲಾಗಿದೆ. ಇದರ ಭಾಗವಾಗಿಯೇ ಮದ್ಯ ಮಾರಾಟವನ್ನು ಬಂದ್ ಮಾಡಲಾಗಿದೆ. ತಮಿಳುನಾಡು, ದೆಹಲಿ, ರಾಜಸ್ಥಾನ, ಆಂಧ್ರಪ್ರದೇಶ, ಬಿಹಾರ, ಕೇರಳ, ಮಹಾರಾಷ್ಟ್ರ, ಪಂಜಾಬ್​​, ಹರಿಯಾಣ ಎಲ್ಲಾ ರಾಜ್ಯಗಳಲ್ಲೂ ಮದ್ಯದ ಮಳಿಗೆಗಳಿಗೆ ಅಬಕಾರಿ ಅಧಿಕಾರಿಗಳು ಬೀಗಮುದ್ರೆಯನ್ನು ಹಾಕಿದ್ದಾರೆ. ಮೇ 3ನೇ ತಾರೀಕಿನವರೆಗೂ ಮದ್ಯ ಮಾರಾಟ ಬಂದ್ ಮಾಡುವಂತೆ ಆದೇಶಿಸಿದ್ದಾರೆ. ಹೀಗಿರುವಾಗ ದೇಶದ ವಿವಿಧೆಡೆ ಮದ್ಯ ಮಾರಾಟ ಮತ್ತೆ ಆರಂಭಿಸುವಂತೆ ಒಂದಷ್ಟು ಜನ...
ರಾಜಕೀಯಸುದ್ದಿ

” ತನಗೊಂದು ನ್ಯಾಯ ಸಾಮಾನ್ಯ ಜನತೆಗೊಂದು ನ್ಯಾಯ..! ” ಇದೇನಯ್ಯಾ ಕುಮಾರಾ‌…? ನಿನ್ನ ಕುಮಾರನ ಕಲ್ಯಾಣ – ರಾಮನಗರದಲ್ಲಿ ನಿಖಿಲ್-ರೇವತಿ ಅದ್ದೂರಿ ವಿವಾಹ ; ಲಾಕ್‌ಡೌನ್ ನಿಯಮಗಳ ಉಲ್ಲಂಘನೆ ಆರೋಪ – ಕಹಳೆ ನ್ಯೂಸ್

ರಾಮನಗರ/ಬಿಡದಿ: ಕರೊನಾ ಆತಂಕದ ನಡುವೆಯೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿವಾಹ ಶುಕ್ರವಾರ ಅದ್ದೂರಿಯಾಗಿ ನೆರವೇರಿತು. ರಾಮನಗರ ಕ್ಷೇತ್ರದ ಜನತೆ ಸಮ್ಮುಖದಲ್ಲಿಯೇ ಪುತ್ರನ ವಿವಾಹ ಮಾಡಬೇಕು ಎನ್ನುವ ಎಚ್‌ಡಿಕೆ ದಂಪತಿ ಕನಸು ಈಡೇರಿಲ್ಲವಾದರೂ, ನಿಖಿಲ್ ಮತ್ತು ರೇವತಿ ಕಲ್ಯಾಣ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಬಿಡದಿಯ ಕೇತಿಗಾನಹಳ್ಳಿ ತೋಟದ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಜರುಗಿತು. ಬೆಳಗ್ಗೆ 9.25ರಿಂದ 10.20ರ ಮುಹೂರ್ತದಲ್ಲಿ ನಾದಸ್ವರ ಹಿಮ್ಮೇಳದೊಂದಿಗೆ ಅಜ್ಜಿ ಚನ್ನಮ್ಮ ಮತ್ತು...
ರಾಜಕೀಯಸುದ್ದಿ

ದೇಶದಲ್ಲಿ ಆಹಾರ, ಔಷಧಿ ಹಾಗೂ ಇತರ ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆಯಿಲ್ಲ ; ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟ್ವೀಟ್‌ – ಕಹಳೆ ನ್ಯೂಸ್

ನವದೆಹಲಿ, ಎ.14 : ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‌‌ಡೌನ್‌ನ್ನು ಮೇ 3ರವರೆಗೆ ವಿಸ್ತರಣೆ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಇಂದು ಭಾಷಣದಲ್ಲಿ ಹೇಳಿದ ಬಳಿಕ ಗೃಹ ಸಚಿವ ಅಮಿತ್‌ ಶಾ ಸರಣಿ ಟ್ವೀಟ್‌ಗಳನ್ನು ಮಾಡಿದ್ದು ಜನರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಗೃಹ ಸಚಿವನಾಗಿ ನಾನು ಎಲ್ಲರಲ್ಲೂ ಹೇಳಲು ಬಯಸುತ್ತೇನೆ. ದೇಶದಲ್ಲಿ ಆಹಾರ, ಔಷಧಿ ಹಾಗೂ ಇತರ ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆಯಿಲ್ಲ. ಅವೆಲ್ಲದರ ಬೇಕಾದಷ್ಟು ದಾಸ್ತಾನು ಇದೆ. ಈ ವಿಷಯದಲ್ಲಿ...
ರಾಜಕೀಯಸುದ್ದಿ

ಮದ್ಯ ಮಾರಾಟ ಬಗ್ಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಾಳೆ ನಂತರ ನಿರ್ಧಾರ ; ಸುದ್ದಿಗೋಷ್ಠಿಯಲ್ಲಿ ಸಿಎಂ ಯಡಿಯೂರಪ್ಪ – ಕಹಳೆ ನ್ಯೂಸ್

ಬೆಂಗಳೂರು: ಕೋವಿಡ್-19 ನಿಯಂತ್ರಣಕ್ಕೆ ಮೇ 3ರವರೆಗೆ ಲಾಕ್ ಡೌನ್ ವಿಸ್ತರಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇನ್ನಷ್ಟು ಕಠಿಣ ಕ್ರಮ ತರಲಾಗುವುದು ಎಂದಿದ್ದಾರೆ. ಅವರು ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ,  ಏಪ್ರಿಲ್ 20ರವರೆಗೆ ರಾಜ್ಯದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುವುದು. ಪ್ರಧಾನ ಮಂತ್ರಿಗಳು ನಾಳೆ ಹೊರಡಿಸುವ ಮಾರ್ಗಸೂಚಿಗಳನ್ನು ನೋಡಿಕೊಂಡು ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಲಾಕ್ ಡೌನ್ ಯಾವ ರೀತಿ ಮಾಡಬೇಕು...
1 114 115 116 117 118 232
Page 116 of 232