Saturday, May 9, 2026
ರಾಜಕೀಯಸುದ್ದಿ

ವಿದೇಶದಿಂದ ಅನಾಮಿಕ ಬೆದರಿಕೆ‌ ಕರೆಗಳು ಬರುತ್ತಿರುವ ಬೆನ್ನಲ್ಲೇ, ನನಗೆ ಪೊಲೀಸ್ ಭದ್ರತೆ ಬೇಡ, ಕಾರ್ಯಕರ್ತರೇ ನನಗೆ ಶ್ರೀ ರಕ್ಷೆ ಎಂದ ಸಂಸದೆ ಶೋಭಾ ಕರಂದ್ಲಾಜೆ – ಕಹಳೆ ನ್ಯೂಸ್

ಕುಂದಾಪುರ: ವಿದೇಶದಿಂದ ಅನಾಮಿಕ ಬೆದರಿಕೆ‌ ಕರೆಗಳು ಬರುತ್ತಿರುವ ಬೆನ್ನಲ್ಲೇ ಸಂಸದೆ‌ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿದೇಶಿ ಕರೆಗಳ ಬಗ್ಗೆ ಕುಂದಾಪುರದಲ್ಲಿ ಮಾತನಾಡಿದ ಸಂಸದೆ ನನಗೆ ಪೊಲೀಸ್ ಭದ್ರತೆ ಬೇಡ, ಕಾರ್ಯಕರ್ತರೇ ನನಗೆ ಶ್ರೀ ರಕ್ಷೆ ಎಂದಿದ್ದಾರೆ.

ನಿತ್ಯವೂ ಹಲವು ಬೆದರಿಕೆಗಳು ನನಗೆ ಕರೆ ಬರುತ್ತಿದೆ. ಬೆದರಿಕೆ ಕರೆ ಬಗ್ಗೆ ಡಿಜಿಪಿ ಪ್ರವೀಣ್ ಸೂದ್ ಬಳಿ ಮಾತನಾಡಿದ್ದೇನೆ.

ವಿದೇಶದಿಂದ ಕರೆ ಬರುತ್ತಿರುವ ಸಂಖ್ಯೆಯನ್ನು ನೀಡಿದ್ದೇನೆ. ಪಿಎಫ್ಐ -ಎಸ್ ಡಿಪಿಐ ವಿರುದ್ಧ ಮಾತನಾಡಿದಾಗ ಇಂತಹ ಕರೆಗಳು ಬರುತ್ತೆ.

ಹಿಂದೂ ಯುವಕರ ಹತ್ಯೆಯಾದ ಬಗ್ಗೆ ಮಾತನಾಡಿದಾಗ ಕರೆ ಬರುತ್ತೆ. ಕಳೆದ 2 ವರ್ಷಗಳಿಂದ ಇಂತಹ ಕರೆಗಳು ಬರುತ್ತಿದೆ.

ಈ ಬಗ್ಗೆ ಹಿಂದೆಯೂ ದೂರು ಕೊಟ್ಟಿದ್ದೆ ಇತ್ತೀಚೆಗೆ ತಬ್ಲಿಘಿ ಬಗ್ಗೆ ಮಾತನಾಡಿದ್ದಕ್ಕೆ  ಕರೆಗಳು ಬರುತ್ತಿದೆ.

ಇಂತಹ ಕರೆ ಮಾಡುವರ ಪತ್ತೆ ಮಾಡುವ ಕಾರ್ಯವಾಗಬೇಕೆಂದ ಅವರು ಈ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ.

ನನಗೆ ಪೊಲೀಸರ ಭದ್ರತೆ ಬೇಡ. ಕಾರ್ಯಕರ್ತರು ನನ್ನ ಜೊತೆಗಿದ್ದಾರೆ. ಕೊರೊನಾ ಸಂದರ್ಭ ಪೊಲೀಸರ ಶ್ರಮ ಹೆಚ್ಚಿರುತ್ತೆ.

ಆದ್ದರಿಂದ ಇರುವ ಇಬ್ಬರು ಗನ್ ಮ್ಯಾನ್ ಕೂಡ ವಾಪಾಸ್ ನೀಡಿರುವೆ.ನನಗೆ ಕಾರ್ಯಕರ್ತರು ಮತ್ತು ಜನರೇ ಶ್ರೀ ರಕ್ಷೆಯಾಗಿದ್ದಾರೆ ಎಂದು ಹೇಳಿದ್ದಾರೆ.