Saturday, May 9, 2026
ರಾಜಕೀಯಸುದ್ದಿ

ಕಾರ್ಮಿಕರ ಕಷ್ಟ ಕೇಳೋ ಭರದಲ್ಲಿ ಸಾಮಾಜಿಕ ಅಂತರ ಮರೆತಾರ ಐವನ್ ಡಿಸೋಜಾ..!?? – ಕಹಳೆ ನ್ಯೂಸ್

ಮಂಗಳೂರು: ಇಂದು ಬೆಳ್ಳಂ-ಬೆಳಗ್ಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಸುಮಾರು 700 ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಜಮಾಯಿಸಿ, ಸೀನ್ ಕ್ರೀಯೇಟ್ ಮಾಡಿದ್ದರು.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುಳ್ಳು ಸುದ್ದಿಯನ್ನು ನಂಬಿ ಉತ್ತರ ಪ್ರದೇಶದ ವಲಸೆ ಕಾರ್ಮಿಕರು ಗಂಟು ಮೂಟೆ ಕಟ್ಟಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ, ಸಾಮಾಜಿಕ ಅಂತರ ಆದೇಶವನ್ನು ಗಾಳಿಗೆ ತೂರಿದ್ದರು.

ಇದೀಗ ಕಾರ್ಮಿಕರೇನೂ ಪಾಪ ತಮ್ಮ ಹುಟ್ಟೂರಿಗೆ ತೆರಳುವ ಸಂಭ್ರಮದಲ್ಲೋ ಅಥವಾ ತಮಗೆ ಅರಿವಿಲ್ಲದಂತೆಯೋ ಸಾಮಾಜಿಕ ಅಂತರವನ್ನು ಪಾಲಿಸಲಿಲ್ಲ.

ಆದರೆ ಜನ ಸಾಮಾನ್ಯರಿಗೆ ತಿಳಿ ಹೇಳಬೇಕಾದ ಜನ ನಾಯಕರೇ ಅಂತರ ಕಾಪಾಡಿಕೊಳ್ಳದಿದ್ದರೆ ಹೇಗೆ.?.

ಹೌದು ಕಾರ್ಮಿಕರು ಜಮಾಯಿಸಿದ ಸುದ್ದಿ ಕೇಳಿದ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ ಅವರು ರೈಲ್ವೆ ನಿಲ್ದಾಣಕ್ಕೆ ಓಡೋಡಿ ಬಂದಿದ್ದರು.

ಆದ್ರೆ ಕಾರ್ಮಿಕರ ಕಷ್ಟ ಕೇಳುವ ಭರದಲ್ಲಿ ಐವನ್ ಅವರು ಸಾಮಾಜಿಕ ಅಂತರ ಎಂಬ ಕಾನ್ಸೆಪ್ಟ್ ಅನ್ನೇ ಮರೆತು ಬಿಟ್ಟಂತಿದ್ದರು.

ಯಾಕೆಂದರೆ ಕನಿಷ್ಟಪಕ್ಷ 2 ರಿಂದ 4 ಅಡಿ ದೂರ ನಿಂತು ವ್ಯವಹರಿಬೇಕಾದ ಈ ಪರಿಸ್ಥಿತಿಯಲ್ಲಿ, ಐವನ್ ಡಿಸೋಜಾ ಅವರು ಕಾರ್ಮಿಕರ ಹೆಗಲ ಮೇಲೆ ಕೈ ಹಾಕಿ ಅವರ ಕಷ್ಟ ಕೇಳುವ ಅನಿವಾರ್ಯತೆ ಇತ್ತೇ ಅನ್ನೋ ಪ್ರಶ್ನೆ ಮೂಡುತ್ತದೆ.

ಒಟ್ಟಾರೆ ಇಂದು ಕಾರ್ಮಿಕರ ಜೊತೆಗೆ ಜನನಾಯಕರೂ ಕೂಡ ಸಾಮಾಜಿಕ ಅಂತರವನ್ನು ಮರೆತು ವ್ಯವಹರಿಸುತ್ತಿರುವುದು ಖೇದಕರ ಸಂಗತಿಯಾಗಿದೆ.