Recent Posts

Saturday, September 12, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬೊಳ್ಳಾಡಿ ಕುಟುಂಬಸ್ಥರಿಂದ ಒಂದು ಲೋಡು ಕಟ್ಟಿಗೆ ಕೊಡುಗೆ – ಕಹಳೆ ನ್ಯೂಸ್

ಪುತ್ತೂರು  : ಬಡಗನ್ನೂರು ಒಳಮೊಗ್ರು ಗ್ರಾಮದ ಬೊಳ್ಳಾಡಿ ಕುಟುಂಬಸ್ಥರ ವತಿಯಿಂದ ಪುತ್ತೂರು ಮಹಾತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಸಾರ್ವಜನಿಕ ಅನ್ನದಾನ ವ್ಯವಸ್ಥೆಗಾಗಿ ಒಂದು ಲೋಡು ಕಟ್ಟಿಗೆಯನ್ನು ಕೊಡುಗೆಯಾಗಿ ನೀಡಿದರು.

ಜಾಹೀರಾತು

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ರವರು ಬೊಳ್ಳಾಡಿ ಕುಟುಂಬದ ಹಿರಿಯ ಸದಸ್ಯ ಮೋಹನ್ ಕುಮಾರ್ ಬೊಳ್ಳಾಡಿವರಿಗೆ ಶಾಲು ಹಾಕಿ ಶ್ರೀ ಮಹಾಲಿಂಗಶ್ವರ ದೇವರ ಪ್ರಸಾದ ನೀಡಿ ಸತ್ಕರಿಸಿ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವ್ಯವಸ್ಥಾಪನಾ ಸಮಿತಿಯ ಸದಸ್ಯ ಸುಭಾಷ್ ರೈ ಬೆಳ್ಳಿಪಾಡಿ., ಬೊಳ್ಳಾಡಿ ಕುಟುಂಬದ ಸದಸ್ಯ, ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಹಾಗೂ ಶಿವರಾಮ ಗೌಡ ಬೊಳ್ಳಾಡಿ ರವರು ಉಪಸ್ಥಿತರಿದ್ದರು.