Thursday, May 14, 2026
ರಾಜಕೀಯಸುದ್ದಿ

Breaking News : ಗೋಲ್ಡ್ ಫಿಂಚ್ ಖಾಸಗಿ ಮೈದಾನದಲ್ಲಿ ಕಾಂಗ್ರೆಸ್ ನಾಯಕರ ಹೈಡ್ರಾಮಾ – ಕಹಳೆ ನ್ಯೂಸ್

ಮಂಗಳೂರು: ಊರಿಗೆ ಹೊರಟು ನಿಂತಿದ್ದ ವಲಸೆ ಕಾರ್ಮಿಕರು ಹಾಗೂ ಮಂಗಳೂರಿನ ಕೂಳುರಿನಲ್ಲಿರುವ ಗೋಲ್ಡ್ ಫಿಂಚ್ ಮೈದಾನದ ವಾಚ್ ಮೆನ್ ನಡುವೆ ಕೆಲ ಕಾಲ ಗೊಂದಲ ಉಂಟಾದ ಘಟನೆ ಇಂದು (ಮೇ 5) ಕೂಳೂರಿನ ಗೋಲ್ಡ್ ಫಿಂಚ್ ಖಾಸಗಿ ಮೈದಾನದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತಮ್ಮ-ತಮ್ಮ ಊರಿಗೆ ಹೊರಟು ನಿಂತಿದ್ದ ಕಾರ್ಮಿಕರನ್ನು ಕಳುಹಿಸಿಕೊಡುವ ನಿಟ್ಟಿನಲ್ಲಿ, ವಲಸೆ ಕಾರ್ಮಿಕರನ್ನು ಮಂಗಳೂರು ಕೂಳೂರಿನ ಗೋಲ್ಡ್ ಫಿಂಚ್ ಖಾಸಗಿ ಮೈದಾನಕ್ಕೆ ಆಗಮಿಸಲು ಜಿಲ್ಲಾಡಳಿತ ಸೂಚನೆ ನೀಡಿತ್ತು.

ಆದ್ರೆ ಅಲ್ಲಿ ಕಾರ್ಮಿಕರಿಗೆ ಮೈದಾನಕ್ಕೆ ಪ್ರವೇಶ ನೀಡದ ಮೈದಾನದ ವಾಚ್ ಮೆನ್ ತಡೆದು ನಿಲ್ಲಿಸಿದ್ದ. ಇದರಿಂದ ರೊಚ್ಚಿಗೆದ್ದ ಕಾರ್ಮಿಕರು ರಸ್ತೆಯಲ್ಲೇ ಗಲಾಟೆ ಮಾಡಿದ್ದಾರೆ.

 

ಇತ್ತ ಗಲಾಟೆ ಜೋರಾಗುತ್ತಿದ್ದಂತೆ ಕೆಎಸ್ ಆರ್ ಟಿ ಸಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಈ ನಡುವೆ ಕೂಡಲೇ ಸ್ಥಳಕ್ಕಾಗಮಿಸಿದ ಕಾಂಗ್ರೆಸ್ ಮುಖಂಡರಾದ ಶಾಸಕ ಯು ಟಿ ಖಾದರ್, ಎಂಎಲ್ ಸಿ ಐವಾನ್ ಡಿಸೋಜಾ, ಮಾಜಿ ಶಾಸಕ ಮೋಯಿದ್ದಿನ ಭಾವ ಮಿಥುನ್ ರೈ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಧಿಕಾರಿಗಳ ಜೊತೆ ಯು ಟಿ ಖಾದರ್ ಮಾತಿನ ಚಕಮಕಿ ನಡೆದಿದ್ದಲ್ಲದೇ, ಸರಿಯಾಗಿ ಮಾಹಿತಿ ನೀಡದ ತಸಿಲ್ದಾರ್ ಗೆ ತರಾಟೆ ತೆಗೆದುಕೊಂಡರು.

ಮಾತ್ರವಲ್ಲದೇ ಸರ್ಕಾರದ ವಿರುದ್ದ ಸ್ಥಳದಲ್ಲೇ ಕಾಂಗ್ರೆಸ್ ಪ್ರತಿಭಟನೆ ಕೂಡ ನಡೆಸಿದ್ದು, ಸರ್ಕಾರ ಮತ್ತು ಅಧಿಕಾರಿಗಳ ಕ್ರಮಕ್ಕೆ ಕೈ ನಾಯಕರು.ಧಿಕ್ಕಾರದ ಘೋಷಣೆ ಕೂಗಿದರು.

ಬಳಿಕ ಅಧಿಕಾರಿಗಳು ಸ್ಥಳದಲ್ಲೇ ಬಸ್ ವ್ಯವಸ್ಥೆ ಮಾಡಿಸಿದ ಅಧಿಕಾರಿಗಳು ಸುಮಾರು 1000 ಕ್ಕೂ ಹೆಚ್ಚು ಕಾರ್ಮಿಕರನ್ನ ಕಳುಹಿಸಿಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಂದ ಕಾರ್ಮಿಕರಿಗೆ ಉಚಿತ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು.