Sunday, June 14, 2026

ದಕ್ಷಿಣ ಕನ್ನಡ

ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮಾಡತ್ತಡ್ಕ ಸ್ಫೋಟ: ಇಬ್ಬರ ವಿರುದ್ಧ ಎಫ್‌ಐಆರ್‌-ಕಹಳೆ ನ್ಯೂಸ್

ವಿಟ್ಲ: ಇಲ್ಲಿಗೆ ಸಮೀಪದ ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಡ್ಕದಲ್ಲಿ ಕ್ವಾರಿ ಬಳಿ ಮಂಗಳವಾರ ಸ್ಫೋಟ ಸಂಭವಿಸಿದ ಪ್ರಕರಣ ಸಂಬಂಧ ಇಲ್ಲಿನ ಪೊಲೀಸರು ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ' ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯತನದಿಂದ ಸ್ಫೋಟಕಗಳನ್ನು ಕ್ವಾರಿಯ ಬಳಿ ಇಟ್ಟಿರುವ ಕುರಿತು ಬಂಟ್ವಾಳ ತಾಲ್ಲೂಕಿನ ಕಾವಳಪಡೂರಿನ ಶ್ರೀರಾಮ್‌ ಕನ್‌ಸ್ಟ್ಟ್ರಕ್ಷನ್‌ನ ಅಶೋಕ ಮತ್ತು ಅದರ ಸ್ಫೋಟದ ಕೆಲಸ ಮಾಡುತ್ತಿದ್ದವನ ವಿರುದ್ಧ 1884ರ ಸ್ಫೋಟಕಗಳ ಕಾಯ್ದೆಯ ಸೆಕ್ಷನ್ 9ಬಿ (ಸ್ಫೋಟಕಗಳನ್ನು ಸಾಗಿಸುವುದು)...
ಜಿಲ್ಲೆದಕ್ಷಿಣ ಕನ್ನಡಬೆಂಗಳೂರುಸಂತಾಪಸುದ್ದಿ

ಬೆಂಗಳೂರು: ಯುವತಿ ಜತೆ ಲಿವ್ ಇನ್​ನಲ್ಲಿದ್ದ ಉತ್ತರ ಪ್ರದೇಶದ ಯುವಕ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ-ಕಹಳೆ ನ್ಯೂಸ್

ಬೆಂಗಳೂರು ಮಾರ್ಚ್ 6: ಯುವತಿಯೊಬ್ಬಳ ಜೊತೆ ಲಿವಿಂಗ್ ಟುಗೆದರ್‌ನಲ್ಲಿದ್ದ ಯುವಕನೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಹರಳೂರು ಕೂಡ್ಲು ರಸ್ತೆಯ ಎಸ್‌ಎನ್‌ಎನ್ ರಾಜ್ ಎಟರ್ನಿಯ ಅಪಾರ್ಟ್ಮೆಂಟ್‌ನಲ್ಲಿ ನಡೆದಿರುವುದು ತಿಳಿದುಬಂದಿದೆ. ಮಾರ್ಚ್ 4 ರಂದು ಮುಂಜಾನೆ 5 ಗಂಟೆಗೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು ಉತ್ತರ ಪ್ರದೇಶ ಮೂಲದ ಮಾಯಾಂಕ್ ರಜನಿ ಎಂದು ಗುರುತಿಸಲಾಗಿದೆ. ಮಾರ್ಚ್ 4ರ ನಸುಕಿನಲ್ಲಿ ಮಯಾಂಕ್ ರಜನಿ ಅಪಾರ್ಟ್ಮೆಂಟ್​ನ 12ನೇ ಮಾಡಿಂದ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನೂತನ ಲೀಗೋ-ನೆಟ್ ಕಂಪ್ಯೂಟರ್ ಲ್ಯಾಬ್ಲೈ ಬ್ರೆರಿಯ ಉದ್ಘಾಟನೆ-ಕಹಳೆ ನ್ಯೂಸ್

ಪುತ್ತೂರು: ನೆಹರೂ ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಲೀಗೋ-ನೆಟ್ ಕಂಪ್ಯೂಟರ್ ಲ್ಯಾಬ್ ಹಾಗೂ ಇ- ಲೈಬ್ರೆರಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಉದ್ಘಾಟನಾ ಕಾರ್ಯಕ್ರಮವನ್ನು ಅಬುದಾಬಿಯ ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಮಿತ್ರಂಪಾಡಿ ಜಯರಾಮ್ ರೈಯವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಡಿಜಿಟಲ್ಯು ಗದಲ್ಲಿ ಜಗತ್ತು ಪ್ರತಿಕ್ಷಣ ಬದಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರವು...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಮಾ.9 ವಾಹನ ಚಾಲಕರಿಗೆ ಕಾರ್ಮಿಕ ಕಾರ್ಡು ವಿತರಣೆ; ರಾಜ್ಯ ಸರಕಾರದ ಹೊಸ ಯೋಜನೆಯ ಲಾಭ ಪಡೆದುಕೊಳ್ಳಿ: ಸುದೇಶ್ ಶೆಟ್ಟಿ-ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಅವರ ನಿರಂತರ ಹೋರಾಟದ ಫಲವಾಗಿ ಕರ್ನಾಟಕ ಸರಕಾರ ಕಾರ್ಮಿಕ ಇಲಾಖಾ ವ್ಯಾಪ್ತಿಗೆ ಚಾಲಕರನ್ನು ಸೇರಿಸಿದ್ದು, ಇದು ಬಡ ಚಾಲಕರಿಗೆ ವರದಾನವಾಗಿದೆ. ಕಾರ್ಮಿಕ ಇಲಾಖೆಗೆ ಚಾಲಕರು ತನ್ಮ ಹೆಸರು ನೋಂದಾಯಿಸಿಕೊಂಡಲ್ಲಿ ಸರಕಾರದಿಂದ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಹೇಳಿದರು. ಅವರು ಪುತ್ತೂರು ಶಾಸಕರ ಕಚೇರಿ ಸಭಾಂಗಣದಲ್ಲಿಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಮತ್ತು...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಮಾ 6. ರಂದು ನರೇಂದ್ರ ಪ.ಪೂ.ಕಾಲೇಜಿನಲ್ಲಿ ರಿಟೈಲ್ ಬ್ಯುಸಿನೆಸ್‌ನ ತರಬೇತಿ ಕಾರ್ಯಕ್ರಮ ; “ವ್ಯವಹಾರ “ ಉದ್ಘಾಟನೆ-ಕಹಳೆ ನ್ಯೂಸ್

ಪುತ್ತೂರು: ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಉದ್ಯಮ ಕ್ಷೇತ್ರದ ಕೌಶಲ್ಯ ಮತ್ತು ಜ್ಞಾನವನ್ನು ಸುಧಾರಿಸಲು ಅವಕಾಶಗಳನ್ನು ಒದಗಿಸುವರಿಟೈಲ್ ಬ್ಯುಸಿನೆಸ್ ತರಬೇತಿ ಕಾರ್ಯಕ್ರಮ “ ವ್ಯವಹಾರ “ . ಈ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ತಜ್ಞರಿಂದ (ಇಂಡಸ್ಟ್ರೀಸ್ಪೆಷಲಿಸ್ಟ್) ವಿಶೇಷ ಉಪನ್ಯಾಸಗಳು, ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವ ಅವಕಾಶ, ಸೇಲ್ಸ್, ಅಕೌಂಟಿAಗ್, ಮಾರ್ಕೆಟಿಂಗ್ ಮುಂತಾದ ವ್ಯಾಪಾರ ಆವರಣಗಳ ಭೇಟಿ, ಸಾಫ್ಟ್ ಸ್ಕಿಲ್ ತರಬೇತಿ, ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಮತ್ತು ಇನ್ನಿತರ ಕೌಶಲ್ಯಾಧಾರಿತ ತರಬೇತಿಗಳ ಮೂಲಕ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಮಾ 8 ರಂದು ಪಿಲೋಮಿನಾ ಪ.ಪೂ ಕಾಲೇಜಿನಲ್ಲಿ ‘ಫಿಲೋ ಮಿಲನ’ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು: ಸಂತ ಪಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಮಾಗಮ 'ಫಿಲೋ ಮಿಲನ - 2025' ಕಾರ್ಯಕ್ರಮವು ಮಾರ್ಚ್ 8 ರಂದು ಕಾಲೇಜಿನ ಪ್ರಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾದ ವಂ. ಫಾ. ಲಾರೆನ್ಸ್ ಮಸ್ಕರೇನಸ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ. ವಿಜಯ್ ಲೋಬೋ ವಹಿಸಲಿದ್ದು, ಗೌರವ ಅತಿಥಿಗಳಾಗಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್. ಡಿ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಯುವ ರೆಡ್‌ಕ್ರಾಸ್ ಉತ್ತಮ ನಾಯಕನನ್ನು ರೂಪಿಸುತ್ತದೆ-ನಟೇಶ್ ಆಳ್ವ-ಕಹಳೆ ನ್ಯೂಸ್

ಮಂಗಳೂರು : ನಾಯಕತ್ವ, ಸಂವಹನ, ಅನುಭವ ಈ ಮೂರು ಆದರ್ಶಗಳನ್ನು ಯೂತ್  ರೆಡ್‌ಕ್ರಾಸ್ ವಿದ್ಯಾರ್ಥಿ ಹೊಂದಿರಬೇಕು. ನಾಯಕನಾದವನ ಯೋಚನಾ ಶಕ್ತಿ ತೀರ್ಪುಗಾರನಂತಿರಬೇಕು ಮತ್ತು ಆತ ತೆಗೆದುಕೊಳ್ಳುವ ವಿಷಯ ನಿಖರವಾಗಿರಬೇಕು ಎಂದು ರಾಮಕೃಷ್ಣ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ನಟೇಶ್ ಆಳ್ವ ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಕಾಲೇಜಿನ ಯುವ  ರೆಡ್‌ಕ್ರಾಸ್   ಘಟಕದ ವತಿಯಿಂದ ನಡೆದ ಪುನಃಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ, ಉತ್ತಮ ನಾಯಕನಾಗಬೇಕಾದರೆ ಆತನ ಮಾರ್ಗವನ್ನು ಆತನೇ ನಿರ್ಧರಿಸಬೇಕೇ...
ಅಂಕಣದಕ್ಷಿಣ ಕನ್ನಡಬೆಳ್ತಂಗಡಿಮಂಗಳೂರುಸಿನಿಮಾಸುದ್ದಿ

ನಟನೆ, ನಿರ್ದೇಶನ, ಕಥೆ ಸಂಭಾಷಣೆ ಎಲ್ಲದಕ್ಕೂ ಸೈ ನಮ್ಮ ತುಳುನಾಡ ಕುವರ ಅನೀಶ್ ಪೂಜಾರಿ ವೇಣೂರು..!! – ಕಹಳೆ ನ್ಯೂಸ್

ನಟನೆಯಲ್ಲೂ ಸೈ, ಕಥೆ, ಸಂಭಾಷಣೆ, ನಿರ್ದೇಶನದಲ್ಲಂತೂ ಎತ್ತಿದ ಕೈ. ಅವರೇ ನಮ್ಮ ತುಳುನಾಡಿನ ಕುವರ ಸಕಲಕಲಾವಲ್ಲಭ ಅನೀಶ್ ಪೂಜಾರಿ ವೇಣೂರು.    ಬಹುಶಃ ತುಳುನಾಡಿನಲ್ಲಿ ಇವರ ಹೆಸರು ಕೇಳದವರಿಲ್ಲ. ತುಳುನಾಡು ಮಾತ್ರವಲ್ಲದೇ ಕರ್ನಾಟಕದಾದ್ಯಂತ ಕಾಮಿಡಿ ಕಿಲಾಡಿ ಶೋ ಮೂಲಕ ಹೆಸರುವಾಸಿಯಾದ ಪ್ರತಿಭಾನ್ವಿತ ನಟ, ನಿರ್ದೇಶಕರೂ ಹೌದು. ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾಗವಹಿಸಿ ತನ್ನ ವಿಭಿನ್ನ ಶೈಲಿಯ ನಟನಾ ಕೌಶಲ್ಯದ ಮೂಲಕ ಕರುಣಾಡ ಮನೆ ಮನ ಗೆದ್ದ ಅನೀಶ್ ಅವರು ಬೆಳ್ತಂಗಡಿಯ...
1 194 195 196 197 198 740
Page 196 of 740