Sunday, June 14, 2026

ದಕ್ಷಿಣ ಕನ್ನಡ

ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಫರಂಗಿಪೇಟೆಯ ವಿದ್ಯಾರ್ಥಿ ನಾಪತ್ತೆ ಪ್ರಕರಣ: ತನಿಖೆ ಚುರುಕು, ಮಾಹಿತಿ ಲಭ್ಯ-ಕಹಳೆ ನ್ಯೂಸ್

ಬಂಟ್ವಾಳ: ಕಳೆದ 8 ದಿನಗಳಿಂದ ನಾಪತ್ತೆಯಾಗಿರುವ ಫರಂಗಿಪೇಟೆ ಕಿದೆಬೆಟ್ಟಿನ ವಿದ್ಯಾರ್ಥಿ ದಿಗಂತ್‌ನ ಪತ್ತೆಗಾಗಿ ಪೊಲೀಸ್‌ ತನಿಖೆ ಇನ್ನಷ್ಟು ಚುರುಕುಗೊಂಡಿದೆ. ಬಂಟ್ವಾಳದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಪ್ರಮುಖ ಪೊಲೀಸ್‌ ಅಧಿಕಾರಿಗಳನ್ನು ಕರೆಸಿ ವಿದ್ಯಾರ್ಥಿಯನ್ನು ಪತ್ತೆ ಹಚ್ಚಲು ಪೊಲೀಸ್‌ ಇಲಾಖೆ ಶ್ರಮಿಸುತ್ತಿದೆ. ಒಂದು ಮೂಲದ ಪ್ರಕಾರ ಆತನ ಇರುವಿಕೆ ಬಗ್ಗೆ ಗೊತ್ತಾಗಿದ್ದರೂ, ಆತ ಒಂದೇ ಕಡೆ ನಿಲ್ಲದೆ ಆಗಾಗ ಸ್ಥಳ ಬದಲಾಯಿಸುತ್ತಿರುವುದರಿಂದ ಪತ್ತೆಗೆ ತೊಡಕಾಗಿದೆ ಎನ್ನಲಾಗುತ್ತಿದೆ. ಆತ ಮೊಬೈಲನ್ನು ಬಿಟ್ಟು ಹೋಗಿರುವುದರಿಂದ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಸ್ಪೆಷಲ್‌ ಒಲಿಂಪಿಕ್ಸ್‌ ಕೋಚ್‌ ಆಗಿ ಮಂಗಳೂರಿನ ಸೌಮ್ಯಾ ದೇವಾಡಿಗ- ಕಹಳೆ ನ್ಯೂಸ್

ಮಂಗಳೂರು: ಇಟೆಲಿಯಲ್ಲಿ ಮಾ. 8 ರಿಂದ 15ರ ವರೆಗೆ ನಡೆ ಯಲಿರುವ “ಸ್ಪೆಷಲ್‌ ಒಲಿಂಪಿಕ್ಸ್‌ ವರ್ಲ್ಡ್ ವಿಂಟರ್‌ ಗೇಮ್ಸ್‌ – 2025’ರಲ್ಲಿ ಭಾರತದ ಫ್ಲೋರ್‌ಬಾಲ್‌ ತಂಡದ ತರಬೇತುದಾರರಾಗಿ ಕರ್ನಾಟಕದಿಂದ ಮಂಗಳೂರಿನ ಸೌಮ್ಯಾ ದೇವಾಡಿಗ ಆಯ್ಕೆಯಾಗಿದ್ದಾರೆ. ಫ್ಲೋರ್‌ಬಾಲ್‌ ತಂಡಕ್ಕೆ ಹಿಮಾಚಲ ಪ್ರದೇಶದಿಂದ ಇಬ್ಬರು ಮತ್ತು ಕರ್ನಾಟಕದಿಂದ ಮೂವರು ಆಯ್ಕೆ ಯಾಗಿದ್ದಾರೆ. ಸ್ಪೆಷಲ್‌ ಒಲಿಂಪಿಕ್ಸ್‌ ನಲ್ಲಿ 8 ವಿಭಾಗದಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು, ಭಾರತೀಯರು ಸ್ನೋ ಬೋರ್ಡಿಂಗ್‌, ಸ್ನೋ ಶೂ, ಅಲ್ಪೆನ್‌ ಸ್ಕೇಟಿಂಗ್‌, ಕ್ರಾಸ್‌...
ಉಡುಪಿಕಾರ್ಕಳಕ್ರೈಮ್ದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು ಮಹಿಳೆಯರ ಅಶ್ಲೀಲ ವಿಡಿಯೋ ಇರುವುದಾಗಿ ಬೆದರಿಸಿ ಹಣ ವಸೂಲಿ ; ಯುವತಿಯರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದವ ಸೆರೆ.!! – ಕಹಳೆ ನ್ಯೂಸ್

ಮಂಗಳೂರು : ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಕಾರ್ಕಳದ ಈದು ಗ್ರಾಮದ ಸತೀಶ್ ಹೊಸಮಾರು (36) ಎಂಬಾತನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಯುವತಿಯರ ಮೊಬೈಲ್ ನಂಬರನ್ನು ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಐಡಿ ಮೂಲಕ ಪಡೆದು ಅವರಿಗೆ ನಿಮ್ಮ ಅಶ್ಲೀಲ ವಿಡಿಯೋ ನನ್ನಲ್ಲಿ ಇರುವುದಾಗಿ ಬೆದರಿಕೆ ಹೇಳಿ ಹಣಕ್ಕಾಗಿ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಗುರುಪುರ ಮಠದಗುಡ್ಡೆಯಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯ ಭವನ ಉದ್ಘಾಟನೆ-ಕಹಳೆ ನ್ಯೂಸ್

ಗುರುಪುರ : ಸರ್ಕಾರಿ ಅನುದಾನದ ಕೊರತೆಯಿಂದ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊ0ಡಿವೆ. ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಸರ್ಕಾರ ಮೇಲೆ ಒತ್ತಡ ತಂದು ಅಭಿವೃದ್ಧಿ ಕೆಲಸಗಳಿಗೆ ಅನುದಾನ ತರುವ ಕೆಲಸವಾಗಬೇಕು. ಶಾಸಕನಾಗಿದ್ದ ಹಿಂದಿನ ಅವಧಿಯಲ್ಲಿ ಈ ಪಂಚಾಯತ್ ವ್ಯಾಪ್ತಿಯಲ್ಲಿ ಕೋಟ್ಯಂತರ ರೂ. ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಗುರುಪುರ ಪಂಚಾಯತ್ ವ್ಯಾಪ್ತಿಯ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಧಿಯ ಅಂಗವಾಗಿ ದಕ್ಷಿಣ ಬಿಜೆಪಿ ವತಿಯಿಂದ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಸೆಂಟ್ರಲ್ ವಾರ್ಡ್ ನಿವಾಸಿಯಾದ ಶ್ರೀ ಸುಧಾಕರ್ ಜೋಶಿ ಯವರಿಗೆ ಸನ್ಮಾನ- ಕಹಳೆ ನ್ಯೂಸ್

ಮಂಗಳೂರು :ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಧಿಯ ಅಂಗವಾಗಿ ಬಿಜೆಪಿ ವತಿಯಿಂದ ದೇಶಾದ್ಯಂತ ವಾಜಪೇಯಿಯವರು ಜೀವಿತಾವಧಿಯಲ್ಲಿ ಭೇಟಿ ಮಾಡಿದ್ದ ಬಿಜೆಪಿಯ ಹಿರಿಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ನಡೆಯುತ್ತಿದ್ದು, ಮಂಗಳೂರು ನಗರ ದಕ್ಷಿಣ ಬಿಜೆಪಿ ವತಿಯಿಂದ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಸೆಂಟ್ರಲ್ ವಾರ್ಡ್ ನಿವಾಸಿಯಾದ ಶ್ರೀ ಸುಧಾಕರ್ ಜೋಶಿ ಯವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಶಾಸಕರು, ಶ್ರೀಯುತರು ಜನಸಂಘದ ಕಾಲದಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದು ವಾಜಪೇಯಿ‌ ಯಂತಹ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಸ್ಪ್ಲೆಂಡರ್‌ ಬೈಕ್‌, ಆಯಕ್ಟಿವಾಗಳೇ ಟಾರ್ಗೆಟ್‌; ಅಂತರ್‌ ಜಿಲ್ಲಾ ಕಳ್ಳನ ಸಹಿತ ನಾಲ್ವರ ಬಂಧನ-ಕಹಳೆ ನ್ಯೂಸ್

ಮಂಗಳೂರು: ಜಾತ್ರೆ, ಕಂಬಳ, ಮಾಲ್‌, ಬಸ್ಸು, ರೈಲ್ವೆ ನಿಲ್ದಾಣಗಳಲ್ಲಿ ಪಾರ್ಕ್‌ ಮಾಡಿದ್ದ ಬೈಕ್‌ ಗಳನ್ನು ಕದಿಯುತ್ತಿದ್ದ ಅಂತರ್‌ ಜಿಲ್ಲಾ ದ್ವಿಚಕ್ರ ವಾಹನ ಕಳ್ಳನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಶಿವಮೊಗ್ಗ ಜಿಲ್ಲೆಯ ಸೊರಬದ ಮಣಿಕಂಠ ಗೌಡ ಕೆ. (24) ಬಂಧಿತ ಆರೋಪಿ. ಈತನಿಂದ 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕದ್ದ ಬೈಕ್‌ಗಳನ್ನು ಮಣಿಕಂಠನಿಂದ ಖರೀದಿ ಮಾಡುತ್ತಿದ್ದ ಕಾರ್ಕಳದ ಸತೀಶ್‌ ಬಂಗೇರ, ಮೂಡುಬಿದಿರೆಯ ದೀಕ್ಷಿತ್‌,...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ನಿಸರ್ಗದಲ್ಲಿ ಇರುವ ಪ್ರತಿ ಜೀವಿಗೂ ಬದುಕುವ ಹಕ್ಕಿದೆ.. ನಿತ್ಯಾನಂದ ಶೆಟ್ಟಿ -ಕಹಳೆ ನ್ಯೂಸ್

ಬಂಟ್ವಾಳ : ನಿಸರ್ಗದಲ್ಲಿ ಇರುವ ಪ್ರತಿ ಜೀವಿಗೂ ಬದುಕುವ ಹಕ್ಕಿದೆ ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ನಿಸರ್ಗದಲ್ಲಿ ಇರುವ ಇತರ ಜೀವಿಗಳನ್ನು ನಾಶ ಮಾಡುತ್ತಿದ್ದಾನೆ ಎಂದು ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಹೇಳಿದರು. ಅವರು ಬಂಟ್ವಾಳ ತಾಲೂಕಿನ ಶೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲನಗಲ ಉಳಿವಿಗಾಗಿ ಸಸ್ಯ ರಾಶಿಗಳ ಮಹತ್ವದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಪಕ್ಷಿಗಳ ಸಂರಕ್ಷಣೆ, ಅಗತ್ಯತೆ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಎಪ್ರಿಲ್‌ನಿಂದಲೇ ಕಲ್ಲಡ್ಕ ಫ್ಲೈಓವರ್‌ ಸಂಚಾರಕ್ಕೆ ಮುಕ್ತ -ಕಹಳೆ ನ್ಯೂಸ್

ಮಂಗಳೂರು: ಅಡ್ಡಹೊಳೆ- ಬಿ.ಸಿ.ರೋಡ್‌ ನಡುವಿನ ಚತುಷ್ಪಥ ಹೆದ್ದಾರಿ ಕಾಮಗಾರಿಯ ಪ್ರಮುಖ ಭಾಗಗಳಾದ ಕಲ್ಲಡ್ಕ ಫ್ಲೈಓವರ್‌, ಮಾಣಿ ಓವರ್‌ಪಾಸ್‌, ಮೆಲ್ಕಾರ್‌ ಓವರ್‌ಪಾಸ್‌, ಪುತ್ತೂರು ಕ್ರಾಸ್‌ ಓವರ್‌ ಇತ್ಯಾದಿ ಬಹುತೇಕ ಪೂರ್ಣವಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾ ಪಂಚಾಯತ್‌ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ಸಂಸದ ಕ್ಯಾ| ಬ್ರಿಜೇಶ್‌ ಚೌಟರ ಅಧ್ಯಕ್ಷತೆ ಯಲ್ಲಿ ಜರಗಿದ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯಲ್ಲಿ ಎನ್‌ಎಚ್‌ಎಐ ಯೋಜನಾ ನಿರ್ದೇಶಕ...
1 196 197 198 199 200 740
Page 198 of 740