Sunday, June 14, 2026

ದಕ್ಷಿಣ ಕನ್ನಡ

ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಕಟ್ಟಡದಲ್ಲಿ ಅಗ್ನಿ ಅವಘಡ. ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ-ಕಹಳೆ ನ್ಯೂಸ್

ಮಂಗಳೂರು: ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ನಗರದ ಕುದ್ರೋಳಿ ಅಳಕೆಯಲ್ಲಿ ಶನಿವಾರ (ಮಾ.8) ಸಂಭವಿಸಿದೆ. ಕಟ್ಟಡದ ಎರಡನೇ ಮಹಡಿಯಲ್ಲಿರುವ ಹೆಲ್ತ್ ಕೇರ್‌ ಸರ್ಜಿಕಲ್ ಗೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಯ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಪರಿಣಾಮ ಕಟ್ಟಡದ ಹೊರ ಭಾಗದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಸ್ಥಳಕ್ಕೆ ಪಾಂಡೇಶ್ವರ ಅಗ್ನಿ ಶಾಮಕ ದಳ ದೌಡಾಯಿಸಿದ್ದು ಮುಂಜಾಗ್ರತಾ ಕ್ರಮವಾಗಿ ಕಟ್ಟಡದಲ್ಲಿರುವ ಇತರ ಅಂಗಡಿಗಳಲ್ಲಿದ್ದ ಜನರನ್ನು ತೆರವು ಮಾಡಿ ಬೆಂಕಿ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಕೊನೆಗೂ ಪತ್ತೆ-ಕಹಳೆ ನ್ಯೂಸ್

ಬಂಟ್ವಾಳ: ನಿಗೂಢ ರೀತಿಯಲ್ಲಿ ನಾಪತ್ತೆಯಾದ ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್ ಸುಮಾರು 10 ದಿನದ ಬಳಿಕ ಮಾ.8ರ ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ಆತನನ್ನು ಬಂಟ್ವಾಳಕ್ಕೆ ಕರೆ ತರುತ್ತಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿ, 40ಕ್ಕೂ ಅಧಿಕ ಪೊಲೀಸರ ತಂಡ ಹುಡುಕಾಟ ನಡೆಸಿದ್ದರು. ಡಿ‌ಎಆರ್ ತಂಡದ 30 ಪೊಲೀಸರು, ರೈಲ್ವೆ ಪೊಲೀಸ್, ಅಗ್ನಿಶಾಮಕ ದಳ, ಎಫ್.ಎಸ್.ಎಲ್, ಡಾಗ್ ಸ್ಕ್ವಾಡ್, ಡ್ರೋನ್...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬ್ಲೂ ಹೆರಿ ಹಿಲ್ಸ್ ಬಳಿ ಕಿಯೋನಿಕ್ಸ್ ಸಾಫ್ಟ್ವೇರ್ ಪಾರ್ಕ್ ನಿರ್ಮಾಣದ ಕುರಿತು ಸ್ಥಳ ಪರಿಶೀಲನೆ-ಕಹಳೆ ನ್ಯೂಸ್

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಅವರು ನೀಡಿದ ಮನವಿಯ ಮೇರೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬ್ಲೂ ಹೆರಿ ಹಿಲ್ಸ್ ಬಳಿ ಕಿಯೋನಿಕ್ಸ್ ಸಾಫ್ಟ್ವೇರ್ ಪಾರ್ಕ್ ನಿರ್ಮಾಣದ ಕುರಿತು ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರ ನೇತೃತ್ವದಲ್ಲಿ ಕಿಯೋನಿಸ್ಕ್ ಅಧ್ಯಕ್ಷರಾದ ಶರತ್ ಬಚ್ಚೆಗೌಡ ಹಾಗೂ ವಿವಿಧ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸ್ಥಳ ಪರಿಶೀಲನೆ ನಡೆಯಿತು, ಇದೇ ವೇಳೆ ರಸ್ತೆ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಧಿಯ ಅಂಗವಾಗಿ ಬೋಳೂರು ವಾರ್ಡ್ ನಿವಾಸಿಯಾದ ಶ್ರೀ ಅಮೃತ್ ಬೋಳೂರು ರವರಿಗೆ ಸನ್ಮಾನ-ಕಹಳೆ ನ್ಯೂಸ್

ಮಂಗಳೂರು: ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಧಿಯ ಅಂಗವಾಗಿ ಬಿಜೆಪಿ ವತಿಯಿಂದ ದೇಶಾದ್ಯಂತ ವಾಜಪೇಯಿಯವರು ಜೀವಿತಾವಧಿಯಲ್ಲಿ ಭೇಟಿ ಮಾಡಿದ್ದ ಬಿಜೆಪಿಯ ಹಿರಿಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ನಡೆಯುತ್ತಿದ್ದು, ಮಂಗಳೂರು ನಗರ ದಕ್ಷಿಣ ಬಿಜೆಪಿ ವತಿಯಿಂದ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಬೋಳೂರು ವಾರ್ಡ್ ನಿವಾಸಿಯಾದ ಶ್ರೀ ಅಮೃತ್ ಬೋಳೂರು ರವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಶಾಸಕರು, ಜನಸಂಘದ ಕಾಲದಿಂದಲೂ ಬಿಜೆಪಿಯೊಂದಿಗೆ ಇವರ ಕುಟುಂಬ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದು...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಂಗಾಂಗ ದಾನದ ಬಗ್ಗೆ ಮತ್ತು ಕೇಂದ್ರ ಸರ್ಕಾರದ ಮಹಿಳೆಯರಿಗೆ ಇರುವ ಯೋಜನೆಯ ಬಗ್ಗೆ ಮಾಹಿತಿ-ಕಹಳೆ ನ್ಯೂಸ್

ಮಂಗಳೂರು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರದ ದಕ್ಷಿಣ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಂಗಾಂಗ ದಾನದ ಬಗ್ಗೆ ಮತ್ತು ಕೇಂದ್ರ ಸರ್ಕಾರದ ಮಹಿಳೆಯರಿಗೆ ಇರುವ ಯೋಜನೆಯ ಬಗ್ಗೆ ಮಾಹಿತಿಯನ್ನು ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಅವರು ಮಾತನಾಡಿ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನ ನೋಂದಣಿಯನ್ನು ಮಾಡುವ ಮೂಲಕ...
ಕಾರ್ಕಳಜಿಲ್ಲೆದಕ್ಷಿಣ ಕನ್ನಡಸುದ್ದಿ

ಕಾರ್ಕಳದ ಆರಕ್ಷರ ಠಾಣಾ ಮಹಿಳಾ ಸಿಬ್ಬಂಧಿವರ್ಗ ದವರೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಆಚರಿಸಿದ ಕರುಣಾಳು ಬಾ ಬೆಳಕು ಪ್ರತಿಷ್ಠಾನ (ರಿ.)- ಕಹಳೆ ನ್ಯೂಸ್

ಕಾರ್ಕಳ ಮಾ 8. : ಮಹಿಳೆಯರು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯನ್ನು ಮಾಡಿತ್ತಿದ್ದಾರೆ. ನಮ್ಮೆಲ್ಲರಿಗೆ ರಕ್ಷಣೆಯನ್ನು ನೀಡುವ ಮೂಲಕ ಆರಕ್ಷಕರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತಹ ಪೊಲೀಸ್ ಸಿಬ್ಬಂದಿಗಳಿಗೆ ಅಲ್ಲದೆ ಪೋಲಿಸ್ ನಿರಕ್ಷಣಾಧಿಕಾರಿ APS ಆಗಿರುವ ಹರ್ಷ ಪ್ರಿಯವದ IPS ಅವರಿವಿಗೆ ಕರುಣಾಳು ಬಾ ಬೆಳಕು ಪ್ರತಿಷ್ಠಾನದ ರಮಿತಾ ಶೈಲೇಂದ್ರ, ಮಮತಾ, ಸ್ವಾತಿ ಸಂತೋಷ್, ಹಾಗೂ ಪಲ್ಲವಿಯವರು ಅಭಿನಂದನೆಯನ್ನು ಕಾರ್ಕಳ ಠಾಣೆಯಲ್ಲಿ ಸಲ್ಲಿಸಿದರು....
ಕಡಬಜಿಲ್ಲೆದಕ್ಷಿಣ ಕನ್ನಡಸುದ್ದಿ

ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ದೀಪಪ್ರದಾನ ಕಾರ್ಯಕ್ರಮ- ಕಹಳೆ ನ್ಯೂಸ್

ಕಡಬ:ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ದೀಪಪ್ರದಾನ (ಬೀಳ್ಕೊಡುಗೆ) ಕಾರ್ಯಕ್ರಮವು ಯಾದವ ಶ್ರೀ ಸಭಾಂಗಣ ಹನುಮಾನ್‌ನಗರ ಕೇವಳದಲ್ಲಿ ಮಾರ್ಚ್ 7ರಂದು ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕೇಶವ ಅಮೈ ಮಾಲಕರು ಎಸ್.ಆರ್.ಕೆ ಲ್ಯಾರ‍್ಸ್ ಪುತ್ತೂರು ಇವರು ದೀಪ ಪ್ರಜ್ವಲವನ್ನು ನೆರವೇರಿಸಿ, ಪ್ರೌಢಶಾಲಾ ಶಿಕ್ಷಣ ಮರೆಯಲಾಗದ ಶಿಕ್ಷಣ, ಇಂದು ಬೀಳ್ಕೊಡುತ್ತಿರುವ ವಿದ್ಯಾರ್ಥಿಗಳು ಈ ದೇವಾಲಯದಿಂದ ದೇವತೆ ದೇವರುಗಳಾಗಿ ಹೊರ ಹೋಗುತ್ತಿದ್ದಾರೆ. ಅಂಕಗಳ ಜೊತೆ ಕೌಶಲ್ಯಗಳು ಅಗತ್ಯ ಎಂದು...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ನರೇಂದ್ರ ಪ.ಪೂ.ಕಾಲೇಜಿನಲ್ಲಿ “ ವ್ಯವಹಾರ “ ಕ್ಲಬ್ ವತಿಯಿಂದ ಬ್ಯಾಂಕಿಂಗ್ ಬಗ್ಗೆ ವಿಶೇಷ ಉಪನ್ಯಾಸ-ಕಹಳೆ ನ್ಯೂಸ್

ಪುತ್ತೂರು: “ಬ್ಯಾಂಕುಗಳು ಆಧುನಿಕ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದೆ. ಅವು ದೇಶದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜನರಲ್ಲಿ ಉಳಿತಾಯದ ಹವ್ಯಾಸವನ್ನು ಪ್ರೋತ್ಸಾಹಿಸಲು ಬ್ಯಾಂಕುಗಳು ಕಾಲಕಾಲಕ್ಕೆ ವಿವಿಧ ಯೋಜನೆಗಳನ್ನು ನೀಡುತ್ತವೆ. ಬ್ಯಾಂಕಿನಲ್ಲಿ ಹಾಕುವ ಹಣವು ಉಳಿತಾಯವಾಗುವುದಲ್ಲದೆ ಬೆಳೆಯುತ್ತದೆ.ವ್ಯವಹಾರಗಳ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ವ್ಯಕ್ತಿಗಳ ಹಣ ಮತ್ತು ಇತರ ಅಮೂಲ್ಯ ಆಸ್ತಿಗಳನ್ನು ರಕ್ಷಿಸುವ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ದೇಶದ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಖಂಡಿತವಾಗಿಯೂ ಅವಿಭಾಜ್ಯ ಪಾತ್ರವನ್ನು...
1 192 193 194 195 196 740
Page 194 of 740