Recent Posts

Tuesday, May 5, 2026
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮಾಡತ್ತಡ್ಕ ಸ್ಫೋಟ: ಇಬ್ಬರ ವಿರುದ್ಧ ಎಫ್‌ಐಆರ್‌-ಕಹಳೆ ನ್ಯೂಸ್

ವಿಟ್ಲ: ಇಲ್ಲಿಗೆ ಸಮೀಪದ ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಡ್ಕದಲ್ಲಿ ಕ್ವಾರಿ ಬಳಿ ಮಂಗಳವಾರ ಸ್ಫೋಟ ಸಂಭವಿಸಿದ ಪ್ರಕರಣ ಸಂಬಂಧ ಇಲ್ಲಿನ ಪೊಲೀಸರು ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯತನದಿಂದ ಸ್ಫೋಟಕಗಳನ್ನು ಕ್ವಾರಿಯ ಬಳಿ ಇಟ್ಟಿರುವ ಕುರಿತು ಬಂಟ್ವಾಳ ತಾಲ್ಲೂಕಿನ ಕಾವಳಪಡೂರಿನ ಶ್ರೀರಾಮ್‌ ಕನ್‌ಸ್ಟ್ಟ್ರಕ್ಷನ್‌ನ ಅಶೋಕ ಮತ್ತು ಅದರ ಸ್ಫೋಟದ ಕೆಲಸ ಮಾಡುತ್ತಿದ್ದವನ ವಿರುದ್ಧ 1884ರ ಸ್ಫೋಟಕಗಳ ಕಾಯ್ದೆಯ ಸೆಕ್ಷನ್ 9ಬಿ (ಸ್ಫೋಟಕಗಳನ್ನು ಸಾಗಿಸುವುದು) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 288ರ (ಸ್ಫೋಟಕಗಳನ್ನು ಅಜಾಗರೂಕತೆಯಿಂದ ನಿರ್ವಹಿಸುವುದು) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಡ್ಕಡ ಎನ್‌.ಎಸ್‌ ಕೋರೆಯ ಬಳಿಯ ಮೋನಪ್ಪ ಪೂಜಾರಿ ಅವರ ಜಾಗದಲ್ಲಿರುವ ಕಲ್ಲು ಬಂಡೆಗಳ ಬಳಿ ಆರೋಪಿಗಳು ಸ್ಫೋಟಕಗಳನ್ನು (ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೊನೇಟರ್‌ಗಳು) ಇಟ್ಟಿದ್ದರು. ಆ ಸ್ಪೋಟಕಗಳು ಬಿಸಿಲಿನ ತಾಪದಿಂದ ಸ್ಪೋಟಗೊಂಡಿದ್ದು, ಪರಿಸರದ ಈಶ್ವರ ನಾಯ್ಕ ಮತ್ತು ವಸಂತ ಮೋಹನ ಅವರ ಮನೆಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಸುತ್ತಮುತ್ತಲಿನ ಮರಗಿಡಗಳು ಕರಟಿವೆ. ಆಸುಪಾಸಿನ ಸುಮಾರು 15ಕ್ಕೂ ಅಧಿಕ ಮನೆಗಳಿಗೆ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿತ್ತು.

ಘಟನೆ ನಡೆದ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದವರು ಪರಿಶೀಲನೆ ನಡೆಸಿದರು. ವಿಟ್ಲ ಠಾಣೆಯ ಎಸ್‌ಐ ವಿದ್ಯಾ ಮತ್ತು ಸಿಬ್ಬಂದಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.