ಆಸಕ್ತಿಯುಳ್ಳ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ 3 ದಿನಗಳ ಕಾರ್ಯಾಗಾರ ! – ಕಹಳೆ ನ್ಯೂಸ್
ಪುತ್ತೂರು : ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಆಗರವಾಗಿರುವ ಪ್ರಗತಿ ಎಜ್ಯುಕೇಶನ್ ಫೌಂಡೇಶನ್(ರಿ). ಪುತ್ತೂರು ವತಿಯಿಂದ ಶಿಕ್ಷಕ/ಉಪನ್ಯಾಸಕರಿಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಮೂರು ದಿನಗಳ ಕಾರ್ಯಗಾರ ‘TEACHER- the index of forefinger’ ಎ.8 ರಿಂದ ಎ.10ರವರೆಗೆ ಪುತ್ತೂರಿನ ಹೃದಯಭಾಗದ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಜರುಗಲಿದೆ. ಬೆಳಗ್ಗೆ 9.30 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಅಪರಾಹ್ನ 1.00 ಗಂಟೆಗೆ ಮುಕ್ತಾಯಗೊಳ್ಳಲಿದೆ. ಎ. 08ರಂದು ಖ್ಯಾತ ಸಾಹಿತಿ ಗಿರಿಮನೆ ಶ್ಯಾಮರಾವ್...


