ತರಕಾರಿಗಳು ಹಾಗೂ ಹೂಗಳ ಧಾರಣೆ ಈ ವಾರ ದುಬಾರಿ
ಮೈಸೂರು: ತರಕಾರಿಗಳು ಹಾಗೂ ಹೂಗಳ ಧಾರಣೆ ಈ ವಾರ ದುಬಾರಿಯಾಗಿದ್ದು, ಬಡವರು ಮತ್ತು ಮಧ್ಯಮವರ್ಗದವರು ಖರೀದಿಸಲು ಪರದಾಡುವ ಸನ್ನಿವೇಶ ಎದುರಾಗಿದೆ. ಚಳಿಗಾಲ ಆರಂಭವಾಗುತ್ತಿದ್ದಂತೆ ಸುರಿಯುತ್ತಿರುವ ಇಬ್ಬನಿಯಿಂದ ಹೂಗಳ ಇಳುವರಿಯಲ್ಲಿ ಕುಸಿತ ಉಂಟಾಗಿದೆ. ಒಂದೆಡೆ ಮಾರಕಟ್ಟೆಗೆ ಬರುತ್ತಿರುವ ಹೂವಿನ ಆವಕದಲ್ಲಿ ಕಡಿಮೆಯಾದರೆ ಮತ್ತೊಂದೆಡೆ ಕಡೆ ಕಾರ್ತೀಕ ಸೋಮವಾರದ ಪ್ರಯುಕ್ತ ಹೂಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಸಹಜವಾಗಿಯೇ ಬೆಲೆ ಏರಿಕೆಯಾಗಿದೆ. 'ಸಾಮಾನ್ಯವಾಗಿ ಕೆ.ಜಿಗೆ ₹ 120ಕ್ಕೆ ಮಾರಾಟವಾಗುತ್ತಿದ್ದ ಸೇವಂತಿಗೆ ಈಗ ₹ 200...






