Monday, September 7, 2026

ಕೃಷಿ

ಕೃಷಿದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿಸುಳ್ಯ

ಮೀನು ಕೃಷಿಕರಿಂದ ಉತ್ಪಾದನೆಯಾಗುವ ಎಲ್ಲ ರೀತಿಯ ಮೀನುಗಳನ್ನು ನಿಗಮದಿಂದಲೇ ಖರೀದಿಗೆ ಯೋಜನೆ : ಸಚಿವ ಎಸ್‌. ಅಂಗಾರ – ಕಹಳೆ ನ್ಯೂಸ್

ಸುಳ್ಯ: ಮೀನು ಕೃಷಿಕರಿಂದ ಉತ್ಪಾದನೆಯಾಗುವ ಎಲ್ಲ ರೀತಿಯ ಮೀನುಗಳನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದಲೇ ಖರೀದಿಸಲು ಯೋಜನೆ ರೂಪಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿದ್ದಾರೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ಹೇಳಿದರು. ಅವರು ರವಿವಾರ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಮೈದಾನದಲ್ಲಿ ನಡೆದ ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗಾಗಿ ಸ್ವೋ ಉದ್ಯೋಗ – ಮನೆ...
ಕೃಷಿದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಶಾಸಕರಾದ ಹರೀಶ್ ಪೂಂಜಾರವರ ನೇತೃತ್ವದಲ್ಲಿ ತೋಟಗಾರಿಕಾ ಮಂತ್ರಿಗಳಾದ ಶ್ರೀ ಮುನಿರತ್ನರವರಿಗೆ ರಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಮನವಿ – ಕಹಳೆ ನ್ಯೂಸ್

ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದ ಹೆಚ್ಚಿನ ರೈತರು ತಮ್ಮ ಜೀವನಾಧಾರಕ್ಕೆ ಅಡಿಕೆಯೊಂದಿಗೆ ರಬ್ಬರ್ ಕೃಷಿಯನ್ನು ಅವಲಂಬಿಸಿದ್ದಾರೆ. ರಬ್ಬರಿನ ಪರ್ಯಾಯ ಕೃಷಿಯಿಂದ ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದೆ. ಇತ್ತೀಚಿನ ರಬ್ಬರ್ ಮಾರುಕಟ್ಟೆಯಲ್ಲಿ ಉಂಟಾದ ದರ ಕುಸಿತವು ಕೃಷಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಶಾಸಕರಾದ ಹರೀಶ್ ಪೂಂಜಾರವರ ನೇತೃತ್ವದಲ್ಲಿ ತೋಟಗಾರಿಕಾ ಮಂತ್ರಿಗಳಾದ ಶ್ರೀಮಾನ್ ಮುನಿರತ್ನರವರಿಗೆ ರಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಮನವಿ ಸಲ್ಲಿಸಲಾಯಿತು ಮುಖ್ಯಮಂತ್ರಿ ಗಳೊಂದಿಗೆ ಈ...
ಕೃಷಿದಕ್ಷಿಣ ಕನ್ನಡಸುದ್ದಿಸುಳ್ಯ

ಡ್ರೋನ್‌ ಮೂಲಕ ಅಡಿಕೆಗೆ ಔಷಧ : ಸುಳ್ಯದಲ್ಲಿ ಪ್ರಥಮ ಪ್ರಯೋಗ – ಕಹಳೆ ನ್ಯೂಸ್

ಸುಳ್ಯ: ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಸದ್ಯ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗಕ್ಕೆ ತುತ್ತಾಗಿ ಕೃಷಿ ತೋಟವೇ ನಲುಗಿದೆ. ಇದರ ನಿವಾರಣೆಗೆ ಔಷಧ ಸಿಂಪಡನೆ ಅನಿವಾರ್ಯ. ಇದೀಗ ಡ್ರೋನ್‌ ಮೂಲಕ ಸಿಂಪಡನೆ ತಂತ್ರಜ್ಞಾನ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮವಾಗಿ ಸುಳ್ಯದಲ್ಲಿ ನಡೆಯುತ್ತಿದೆ. ಎಲೆಚುಕ್ಕಿ ರೋಗ ವ್ಯಾಪಕವಾಗಿದ್ದು ಅಡಿಕೆ ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ. ಔಷಧ ಸಿಂಪಡನೆಗೆ ಕಾರ್ಮಿಕರ ಕೊರತೆಯೂ ಎದುರಾಗುತ್ತಿರುವ ಸಂದರ್ಭದಲ್ಲಿ ಸುಧಾರಿತ ತಂತ್ರಜ್ಞಾನ ನೆರವಿಗೆ...
ಕೃಷಿದಕ್ಷಿಣ ಕನ್ನಡರಾಜ್ಯಸುದ್ದಿಸುಳ್ಯ

ಸುಳ್ಯದಲ್ಲಿ ಅಡಿಕೆ ಎಲೆಚುಕ್ಕಿ, ಎಲೆಹಳದಿ ರೋಗ, ಇಸ್ರೇಲ್‌ ವಿಜ್ಞಾನಿಗಳೊಂದಿಗೆ ಚರ್ಚೆ ; 15 ಕೋಟಿ ರೂ. ಬಿಡುಗಡೆಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವ ತೋಟಗಾರಿಕೆ ಸಚಿವ ಮುನಿರತ್ನ- ಕಹಳೆ ನ್ಯೂಸ್

ಸುಳ್ಯ: ಅಡಿಕೆ ಎಲೆ ಚುಕ್ಕಿರೋಗ, ಹಳದಿ ರೋಗ ಬಾಧಿತ ತೋಟಗಳನ್ನು ವೀಕ್ಷಿಸಿದ್ದೇವೆ. ಇದರಿಂದ ರೈತರು ಬಹಳಷ್ಟು ನಷ್ಟ ಅನುಭವಿಸಿದ್ದಾರೆ. ಈ ರೋಗ ಯಾವ ಕಾರಣಕ್ಕೆ ಬರುತ್ತಿದೆ ಎಂಬ ಬಗ್ಗೆ ಸಂಶೋಧನೆ ಮಾಡಬೇಕಾಗಿದೆ. ಮುಂದಿನ ತಿಂಗಳು ಇಸ್ರೇಲ್‌ಗೆ ಹೋಗುವ ವೇಳೆ ಈ ರೋಗದ ಬಗ್ಗೆ ಅಲ್ಲಿನ ವಿಜ್ಞಾನಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಲಾಗುವುದು ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು.ಅಡಿಕೆ ಎಲೆಚುಕ್ಕಿ, ಹಳದಿ ಎಲೆ ರೋಗ ಬಾಧಿತ ತಾಲೂಕಿನ ಮರ್ಕಂಜ...
ಕೃಷಿದಕ್ಷಿಣ ಕನ್ನಡಪುತ್ತೂರುಬೆಳ್ತಂಗಡಿರಾಜ್ಯಸುದ್ದಿ

ದಕ್ಷಿಣ ಕನ್ನಡಗೂ ಬಾಹು ಚಾಚಿದ ಎಲೆಚುಕ್ಕಿ ರೋಗ – ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ, ಮುಂಡಾಜೆಯ ಕೆಲವು ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ ; ಜಿಲ್ಲೆಗೆ ವ್ಯಾಪಿಸುವ ಆತಂಕ – ಕಹಳೆ ನ್ಯೂಸ್

ಪುತ್ತೂರು ವಿಧಾನ ಸಭಾ ಕ್ಷೇತ್ರದ ಕೆಲವು ಭಾಗದಲ್ಲಿ ಈ ಎಲೆಚುಕ್ಕಿ ರೋಗ..! ಬೆಳ್ತಂಗಡಿ : ಸಂಸೆಯಿಂದ ಸುತ್ತುವರಿದು ಎಳನೀರು ಭಾಗಕ್ಕೆ ಹಬ್ಬಿದ್ದ ಎಲೆಚುಕ್ಕಿರೋಗ ಇದೀಗ ಬೆಳ್ತಂಗಡಿ ತಾಲೂಕಿನ ಕೆಳಭಾಗಕ್ಕೂ ಹಬ್ಬಿರುವುದು ಗೋಚರಿಸುತ್ತಿದೆ. ಸರಕಾರದ ನಿರ್ಲಕ್ಷ್ಯವೋ, ರೈತರ ಅಸಹಾಯಕತೆಯೋ ಅಥವಾ ಪ್ರಕೃತಿ ವೈಪರೀತ್ಯವೋ ಒಟ್ಟಿನಲ್ಲಿ ಅಡಿಕೆ ಬೆಳೆ ನಶಿಸುವ ಆತಂಕ ರೈತರಲ್ಲಿ ಕಾಡಿದೆ. ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ, ಮುಂಡಾಜೆಯ ಕೆಲವು ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿರುವುದು ಕೃಷಿಕರನ್ನು ನಿದ್ದೆಗೆಡಿಸಿದೆ. ಶಿವಮೊಗ್ಗ, ಕಳಸ...
ಕೃಷಿಸುದ್ದಿ

ಜಮೀನಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ಬೇಲಿಗೆ ಸಿಲುಕಿ ಗಂಡಾನೆ ಸಾವು- ಕಹಳೆ ನ್ಯೂಸ್

ಹನೂರು: ಜಮೀನಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ಬೇಲಿಗೆ ಸಿಲುಕಿ ಗಂಡಾನೆಯೊಂದು ಮೃತಪಟ್ಟಿರುವ ಘಟನೆ ಬಿಆರ್ ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಉದ್ಧಟಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿನ ಶಿವಕುಮಾರ್ ಎಂಬವರು ತಾವು ಬೆಳೆದ ಫಸಲನ್ನು ವನ್ಯ ಪ್ರಾಣಿಗಳನ್ನು ರಕ್ಷಿಸುವ ಸಲುವಾಗಿ ಜಮೀನಿನ ಸುತ್ತಲೂ ಅಕ್ರಮವಾಗಿ ವಿದ್ಯುತ್ ಬೇಲಿಯನ್ನು ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿದ್ದರು. ಈ ನಡುವೆ ಬಿಆರ್‍ ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಸುಮಾರು 32...
ಕೃಷಿದಕ್ಷಿಣ ಕನ್ನಡರಾಜ್ಯಸುದ್ದಿ

ಕ್ಯಾಂಪ್ಕೋದಿಂದ ದೇಶದ ಮೊದಲ ಹಲಸಿನ ಹಣ್ಣಿನ ಚಾಕ್ಲೆಟ್‌ ಬಿಡುಗಡೆ – ಕಹಳೆ ನ್ಯೂಸ್

ಮಂಗಳೂರು: ದೇಶದಲ್ಲೇ ಮೊದಲ ಬಾರಿ ಹಲಸಿನ ಹಣ್ಣಿನ ಚಾಕೋಲೆಟ್ ಅನ್ನು ಕ್ಯಾಂಪ್ಕೋ ಸಂಸ್ಥೆ ನಿನ್ನೆ ಮಾರುಕಟ್ಟೆಗೆ ಪರಿಚಯಿಸಿದೆ. ಜಾಕ್ ಫ್ರೂಟ್ ಎಕ್ಲೆರ್ ಹೆಸರಿನ ಈ ಚಾಕೋಲೆಟ್ ಅನ್ನು ನಿನ್ನೆ ಕ್ಯಾಂಪ್ಕೋ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಕ್ಯಾಂಪ್ಕೋ ಸಂಸ್ಥೆ ಈಗಾಗಲೇ ವಿವಿಧ ಬಗೆಯ ಚಾಕೋಲೆಟ್​ಗಳನ್ನು ಪರಿಚಯಿಸಿದ್ದು, ಹಲಸಿನ ಹಣ್ಣಿನ ಚಾಕೋಲೆಟ್ ಇಂದು ಪರಿಚಯಿಸಿದೆ. ಹಲಸಿನ ಹಣ್ಣಿನಲ್ಲಿ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಆದರೆ ದೇಶದಲ್ಲಿ ಎಲ್ಲಿಯೂ ಹಲಸಿನ ಹಣ್ಣಿನಿಂದ ಚಾಕೋಲೆಟ್...
ಕೃಷಿದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮಾಣಿ ಶಂಭುಗ ನಿವಾಸಿ ಗೋಪಾಲ ಮೂಲ್ಯರ ಗದ್ದೆಯಲ್ಲಿ ಭತ್ತದ ಕೃಷಿಯ ಸೊಬಗು – ನೇಗಿಲ ಹಿಡಿದ ಹೊಲದೊತ್ತ ಸಾಗಿದ ಸೀತಾರಾಮ ಶೆಟ್ಟಿ – ಕಹಳೆ ನ್ಯೂಸ್

ಮಾಣಿ : ಭತ್ತದ ಕೃಷಿ ದ.ಕ.ಜಿಲ್ಲೆಯ ಸಂಸ್ಕೃತಿಯನ್ನು ಉಳಿಸಿದೆ. ಹಾಗಾಗಿ ಕೃಷಿ ಉಳಿಯಬೇಕೆಂಬ ಆಲೋಚನೆ ಇಂದಿನ ಯುವ ಜನತೆಯಲ್ಲಿ ಇದೆಯಾದರೂ ಕೃಷಿ ಚಟುವಟಿಕೆಗೆ ಅನುಗುಣವಾಗಿ ಪೂರಕವಾದ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಕಷ್ಟವಾಗುತ್ತದೆ ಎಂಬ ಕೂಗುಗಳು ಕೇಳುತ್ತಿದೆ. ಯಾಂತ್ರಿಕ ಕೃಷಿಯಿಂದ ಮಾತ್ರ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಕೃಷಿ ಉಳಿದಿದೆ. ಪ್ರಸ್ತುತ ದಿನಗಳಲ್ಲಿ ಮಾನವ ಬಳಕೆ ಮಾಡಿ ಕೃಷಿ ಮಾಡುವುದು ಕಷ್ಟದ ಕೆಲಸ. ಆದರೂ ಮಾಣಿ ಗ್ರಾಮದಲ್ಲಿ ಮಾನವ ಬಳಕೆ ಮಾಡಿ ಕೃಷಿ...
1 3 4 5 6
Page 5 of 6