ಮನುಷ್ಯನಿಗೆ ಹಂದಿ ಹೃದಯದ ಕಸಿ…!! ಅಮೆರಿಕಾ ವೈದರ ಶಸ್ತ್ರಚಿಕಿತ್ಸೆ ಯಶಸ್ವಿ – ಕಹಳೆ ನ್ಯೂಸ್
ವಾಷಿಂಗ್ಟನ್ : 57 ವರ್ಷದ ವ್ಯಕ್ತಿಯೊಬ್ಬರಿಗೆ ತಳೀಯವಾಗಿ ಮಾರ್ಪಡಿಸಿದ ಹಂದಿಯ ಹೃದಯವನ್ನು ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸುವಲ್ಲಿ ಯುಎಸ್‍ನ ವೈದ್ಯರು ಯಶಸ್ವಿಯಾಗಿದ್ದಾರೆ. ಅಂಗ ದಾನಗಳ ದೀರ್ಘಕಾಲದ ಕೊರತೆಯನ್ನು ಪರಿಹರಿಸಲು ಈ ಪ್ರಕ್ರಿಯೆ ಸಹಕಾರಿಯಾಗಲಿದ್ದು, ಸದ್ಯದ ಮಟ್ಟಿಗೆ ಪ್ರಾಣಿಯಿಂದ ಮಾನವ ಕಸಿಯು ಪ್ರಮುಖ ಮೈಲಿಗಲ್ಲಾಗಿದೆ. ಡೇವಿಡ್ ಬೆನೆಟ್ ನ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಆತನಿಗೆ ಹಂದಿ ಹೃದಯ ಅಳವಡಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಇನ್ನು ಹೃದಯ-ಶ್ವಾಸಕೋಶದ ಬೈಪಾಸ್ ಮೆಷಿನ್ ಸಮಸ್ಯೆಯಿಂದ ಕಳೆದ ಹಲವು...







