Recent Posts

Thursday, June 18, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ದತ್ತಪೀಠದಲ್ಲಿ ಅನಗತ್ಯವಾಗಿ ನಿರ್ಮಾಣವಾಗಿರುವ ಘೋರಿಗಳ ಸ್ಥಳಾಂತರಕ್ಕೆ ಆಗ್ರಹ: ಸಚಿವ ಸುನೀಲ್ ಕುಮಾರ್- ಕಹಳೆ ನ್ಯೂಸ್

ಚಿಕ್ಕಮಗಳೂರು: ಬಾಬಾಬುಡನ್ ಗಿರಿ ದತ್ತಪೀಠದಲ್ಲಿ ಪೂಜಾ ಕೈಂಕರ್ಯಕ್ಕೆ ಅರ್ಚಕರ ನೇಮಕಕ್ಕೆ ಅವಕಾಶ ನೀಡಿ ಹೈಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಇದೀಗ ದತ್ತಪೀಠದ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಅನಗತ್ಯ ಘೋರಿಗಳನ್ನು ಸ್ಥಳಾಂತರ ಮಾಡುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನೀಲ್ ಕುಮಾರ್ ಆದೇಶ ನೀಡಿದ್ದಾರೆ. ದತ್ತಪೀಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಚಿವರು, ದತ್ತಪೀಠದ ಹೋರಾಟದ ಮೂಲಕವೇ ನಾನು ಗುರುತಿಸಿಕೊಂಡಿದ್ದೇನೆ. ದತ್ತಪೀಠದಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಕೋರ್ಟ್ ಅವಕಾಶ ನೀಡಿರುವುದು...
ಹೆಚ್ಚಿನ ಸುದ್ದಿ

ಶೈಕ್ಷಣಿಕ ಸಾಮಾಜಿಕ ಸಮಿಕ್ಷೆ ವರದಿಯನ್ನು ಜಾರಿಗೆ ತನ್ನಿ ಹಾಗೂ ಬಲಿಷ್ಠ ಸಮುದಾಯವನ್ನು ಪ್ರವರ್ಗ 2 ಏ ಗೆ ಸೇರಿಸದಂತೆ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಗ್ರಹ- ಕಹಳೆ ನ್ಯೂಸ್

ಬೆಂಗಳೂರು : ಕಾಂತರಾಜ್ ವರದಿಯನ್ನು ಜಾರಿಗೆ ತನ್ನಿ ಹಾಗೂ ಬಲಿಷ್ಠ ಸಮುದಾಯಗಳನ್ನು ಪ್ರವರ್ಗ 2 ಏ ಗೆ ಸೇರಿಸಬಾರದಂತೆ ಆಗ್ರಹಿಸಿ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ವತಿಯಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಎಂ.ಸಿ ವೇಣುಗೋಪಾಲ್ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ನಡೆಸಿರುವ ಕಾಂತರಾಜ್ ವರದಿಯನ್ನು ಜಾರಿಗೊಳಿಸಬೇಕು....
ಹೆಚ್ಚಿನ ಸುದ್ದಿ

ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಪಡಿಸಿದ ರಾಷ್ಟ್ರ ದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿ.ಹಿಂ.ಪ ಹಾಗೂ ಬಜರಂಗ ದಳ ಉಪ್ಪಿನಂಗಡಿ ವತಿಯಿಂದ ಮನವಿ -ಕಹಳೆ ನ್ಯೂಸ್

ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಪಡಿಸಿದ ರಾಷ್ಟ್ರ ದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಉಪ್ಪಿನಂಗಡಿ ವತಿಯಿಂದ ಉಪ್ಪಿನಂಗಡಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಕುಮಾರ್ ಕಾಂಬ್ಳೆ. ಅವರಿಗೆ ಮನವಿ ಸಲ್ಲಿಸಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 15ರಂದು ಪುತ್ತೂರು ತಾಲೂಕಿನ ಕಬಕ ಗ್ರಾಮ ಪಂಚಾಯತ್‍ನ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ರಥದ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಇಂತಹುದೊಂದು ರಥ ಯಾತ್ರೆಯು ನಮ್ಮ ದೇಶಾಭಿಮಾನದ ಸಂಕೇತ ಆಗಿತ್ತು,...
ಹೆಚ್ಚಿನ ಸುದ್ದಿ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ರೀರಾಮ ಶಾಖೆ ಯೇನೆಕಲ್ಲು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಣೆ – ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ರೀರಾಮ ಶಾಖೆ ಯೇನೆಕಲ್ಲು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಿಸಲಾಯಿತು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ, ವಿಶೇಷವಾಗಿ ದೇಶ ಸೇವೆ ಮಾಡಿದ ಮಾಜಿ ಸೈನಿಕರಾದ ಸುಬೇದಾರ್ ವಾಸುದೇವ ಬಾನಡ್ಕ, ಭವಾನಿ ಶಂಕರ ಪೂಂಬಾಡಿ, ಹರಿಶ್ಚಂದ್ರ ಪರಮಲೆ ಇವರುಗಳಿಗೆ ಊರಿನ ಹಿರಿಯರಾದ ಶೂರಪ್ಪ ಬಾಲಾಡಿ ಸನ್ಮಾನ ಮಾಡಿ ನಂತರ ಮಾಜಿ ಸೈನಿಕರು ಅವರ ಸೇವಾ ವೃತ್ತಿಯ ಬಗ್ಗೆ ಮತ್ತು ವಿಶ್ವಹಿಂದೂ...
ಕ್ರೀಡೆಹೆಚ್ಚಿನ ಸುದ್ದಿ

ಟೋಕಿಯೋ ಒಲಂಪಿಕ್‍ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತ ಮಹಿಳಾ ಹಾಕಿ ತಂಡದ ಕೋಚ್ ಅಂಕಿತಾ ಬಿಲ್ಲವ ಸುರೇಶ ಅವರನ್ನು ಸನ್ಮಾನಿಸಿ ಗೌರವಿಸಿದ ಸಿಎಂ- ಕಹಳೆ ನ್ಯೂಸ್

ಟೋಕಿಯೋ-2020-21 ಓಲಂಪಿಕ್‍ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮಹಿಳಾ ಹಾಕಿ ತಂಡದ ತರಬೇತುದಾರರಲ್ಲಿ ಒಬ್ಬರಾದ ಅಂಕಿತಾ ಬಿಲ್ಲವ ಸುರೇಶ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಸನ್ಮಾನಿಸಿ ಗೌರವಿಸಿದ್ದಾರೆ. ಟೋಕಿಯೋ ಒಲಂಪಿಕ್ ಟೂರ್ನಿಯಲ್ಲಿ ಭಾರತ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿ, ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಮಹಿಳಾ ತಂಡ ಗೆದ್ದಿದೆ. ಕನ್ನಡದ ಯುವತಿ ಭಾರತ ತಂಡದ ಕೋಚ್ ಆಗಿರುವುದು ಹೆಮ್ಮೆಯ ಸಂಗತಿ ಆಗಿದೆ. ಅಂಕಿತ ಅವರು ಮಡಿಕೇರಿ ಮೂಲದವರಾಗಿದ್ದು,...
ಹೆಚ್ಚಿನ ಸುದ್ದಿ

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀ ಶ್ರೀ ಶ್ರೀ ಅನಂತ ವಿಭೂಷಿತ ಕಾಳಹಸ್ತೆಂದ್ರ ಸರಸ್ವತಿ ಮಹಾ ಸ್ವಾಮೀಜಿಯವರಿಂದ ಚೆಕ್ ವಿತರಣೆ- ಕಹಳೆ ನ್ಯೂಸ್

ಉಡುಪಿ : ಕಾಪು ತಾಲೂಕಿನ ಪಡುಕುತ್ಯಾರು ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀ ಶ್ರೀ ಶ್ರೀ ಅನಂತ ವಿಭೂಷಿತ ಕಾಳಹಸ್ತೆಂದ್ರ ಸರಸ್ವತಿ ಮಹಾ ಸ್ವಾಮೀಜಿಯವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1,23,456.00(ಒಂದು ಲಕ್ಷದ ಇಪ್ಪತ್ತಮೂರು ಸಾವಿರದ ನಾನೂರ ಐವತ್ತಾರು) ರೂಪಾಯಿ ಚೆಕ್‍ನ್ನು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಪರಿಹಾರ ನಿಧಿಗೆ ಚೆಕ್ ಹಸ್ತಾಂತರಿಸಿದ್ದು, ಚೆಕ್‍ನ್ನು ಬಳಿಕ ಸಚಿವ ಕೊಟ ಶ್ರೀನಿವಾಸ್ ಪೂಜಾರಿಯವರು...
ಹೆಚ್ಚಿನ ಸುದ್ದಿ

ಕಲ್ಲೇರಿಯಲ್ಲಿ ಆಫ್ರಿಕಾನ್ ಬಸವನ ಹುಳದ ಮಾಹಿತಿ ಕಾರ್ಯಾಗಾರ-ಕಹಳೆ ನ್ಯೂಸ್

ನವಚೇತ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ಕಲ್ಲೇರಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ತೋಟಗಾರಿಕಾ ಇಲಾಖೆ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದೊಂದಿಗೆ ಇಂದು ಆಫ್ರಿಕಾನ್ ಬಸವನ ಹುಳದ ಮಾಹಿತಿ ಕಾರ್ಯಾಗಾರ ಕಲ್ಲೇರಿ ಬಾಪೂಜಿ ಕೇಂದ್ರಲ್ಲಿ ನಡೆಯಿತು. ನವಚೇತನದ ಅಧ್ಯಕರಾದ ಲಿಂಗಪ್ಪ ನಾಯ್ಕ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ ರೈತರು ಕೃಷಿಯ ಜೊತೆ ಪರಿಸರಕ್ಕೆ ಒತ್ತು ನೀಡಬೇಕು ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಟ್ಟು ಸೇರಿ ಈ...
ಹೆಚ್ಚಿನ ಸುದ್ದಿ

BIG BREAKING:ರಾಜ್ಯಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೈಟ್ ಕಫ್ರ್ಯೂ ಹಾಗೂ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕಫ್ರ್ಯೂ ಜಾರಿ- ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕಫ್ರ್ಯೂ ಜಾರಿ ಮಾಡಲಾಗುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಅಧಿಕಾರಿಗಳ ಜೊತೆ ಸಭೆ ಬಳಿಕ ಮಾತನಾಡಿದ ಸಿಎಂ, ರಾಜ್ಯಾದ್ಯಂತ ರಾತ್ರಿ 9ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ನೈಟ್ ಕಫ್ರ್ಯೂ ಜಾರಿಗೊಳಿಸಲಾಗಿದ್ದು, ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕಫ್ರ್ಯೂ ಜಾರಿಯಾಗಲಿದೆ. ಬಳಿಕ ಪರಿಸ್ಥಿತಿ ಅವಲೋಕಿಸಿ ಕೋವಿಡ್ ನಿಯಂತ್ರಣಕ್ಕೆ ಇನ್ನಷ್ಟು ಕಠಿಣ ಕ್ರಮಗಳ ಬಗ್ಗೆ...
1 52 53 54 55 56 174
Page 54 of 174