Thursday, June 18, 2026

ಸುದ್ದಿ

ಚಿಕ್ಕಮಂಗಳೂರುಜಿಲ್ಲೆಸುದ್ದಿ

ಕೇರಳದಿಂದ ಪ್ರವಾಸ ಬಂದಿದ್ದ 10ನೇ ತರಗತಿ ವಿದ್ಯಾರ್ಥಿನಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ನಾಪತ್ತೆ -ಕಹಳೆ ನ್ಯೂಸ್

ಚಿಕ್ಕಮಗಳೂರು: ಕೇರಳದಿಂದ  ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದ 40 ಜನರ ತಂಡದಲ್ಲಿ 16 ವರ್ಷದ ವಿದ್ಯಾರ್ಥಿನಿ  ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ನಾಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ  ಭಾಗದಲ್ಲಿ ನಡೆದಿದೆ. ಶ್ರೀನಂದನ (16) ನಾಪತ್ತೆಯಾಗಿರುವ 10ನೇ ತರಗತಿ ವಿದ್ಯಾರ್ಥಿನಿ. ಕೇರಳದಿಂದ ಬಂದಿದ್ದ 40 ಜನರ ತಂಡ ಮಂಗಳವಾರ ಸಂಜೆ 6:30ರ ಸುಮಾರಿಗೆ ಚಂದ್ರದ್ರೋಣ ಸಾಲಿನಲ್ಲಿ ಪ್ರಕೃತಿ ಸೌಂದರ್ಯ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಕತ್ತಲಾಗಿದ್ದರಿಂದ ಶ್ರೀನಂದನ ನಾಪತ್ತೆಯಾಗಿದ್ದಾಳೆ. ಜೊತೆಗಿದ್ದವರು ಹುಡುಕಾಡಿದರೂ ಪತ್ತೆಯಾಗಿಲ್ಲ....
ಸುದ್ದಿ

ರಾಷ್ಟ್ರಿಯ ಹೆದ್ದಾರಿ ಕಟಪಾಡಿ ಓವರ್ ಪಾಸ್ ಕಾಮಗಾರಿ – ಸಂಸದರಿಂದ ಮತ್ತು ಶಾಸಕರಿಂದ ಪರಿಶೀಲನೆ-ಕಹಳೆ ನ್ಯೂಸ್

ಕಟಪಾಡಿ ಜಂಕ್ಷನ್ ಬಳಿ ಈಗಾಗಲೇ ಓವರ್ ಪಾಸ್ ಕಾಮಗಾರಿ ಆರಂಭವಾಗಿ ಕಾಮಗಾರಿ ಭರದಿಂದ ಸಾಗುತ್ತಿದ್ದು ಸ್ಥಳಕ್ಕೆ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಸಾರ್ವಜನಿಕ ರು ನೀಡು ತ್ತಿರುವ ಸಹಕಾರ ಮತ್ತು ನ್ಯಾಷನಲ್ ಕಂಟ್ರಾಕ್ಷನ್ ಅವರ ಉತ್ತಮ ಕಾಮಗಾರಿ ಯಿಂದ ಆದಷ್ಟು ಬೇಗ ಅವಧಿ ಯ ಮೊದಲೇ ಕೆಲಸ ಮುಗಿಸುವ ಪ್ರಯತ್ನ ಮಾಡುವ ಮತ್ತು...
ಸುದ್ದಿ

ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ : ತಾರತಮ್ಯವಲ್ಲ ಇದು ಶಬರಿಮಲೆ ಸಂಪ್ರದಾಯ ಕೇಂದ್ರ ಸರಕಾರದ ವಾದ-ಕಹಳೆ ನ್ಯೂಸ್

ಹೊಸದಿಲ್ಲಿ, :ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಮರುಪರಿಶೀಲನಾ ಅರ್ಜಿಗಳ ಅಂತಿಮ ವಿಚಾರಣೆಯು ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಆರಂಭವಾಯಿತು. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಬೃಹತ್ ಸಾಂವಿಧಾನಿಕ ಪೀಠವು ಈ ಐತಿಹಾಸಿಕ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ವಿಚಾರಣೆಯ ಮೊದಲ ದಿನವಾದ ಇಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು,...
ಗೋವಾಸುದ್ದಿ

ಉದ್ಯಮಿಯ ಮಗನ ಶೋಕಿಗೆ ಬಿತ್ತು ಹೆಣ –  ಬೈಕ್‌ಗೆ ಮಿನಿ ಕೂಪರ್‌ ಡಿಕ್ಕಿಯಾಗಿ ಯುವತಿ ಸಾವು, ಚಾಲಕ ಅರೆಸ್ಟ್‌ -ಕಹಳೆ ನ್ಯೂಸ್

ಪಣಜಿ: ಬೈಕ್‌ಗೆ ಮಿನಿ ಕೂಪರ್ (Mini Cooper) ಕಾರು ಡಿಕ್ಕಿ ಹೊಡೆದ ಪರಿಣಾಮ ಯುವತಿ ಸಾವನ್ನಪ್ಪಿರುವ ಘಟನೆ ಗೋವಾದ (Goa) ಬಂಬೋಲಿಮ್-ಡೋನಾ ಪೌಲಾ ರಸ್ತೆಯಲ್ಲಿ ನಡೆದಿದೆ. ದಿಕ್ಷಾ ಪರ್ವಾಡ್ಕರ್ (23) ಮೃತ ಯುವತಿ. ಅವರ ಸಹೋದ್ಯೋಗಿ ಡಿ.ಅರುಣ್‌ಕುಮಾರ್ (26) ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಗೋವಾದ ಪಂಚತಾರಾ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಾರು ಚಾಲಕ ಡೇರಿಯಸ್ ಡಯಾಸ್‌ನನ್ನು ಬಂಧಿಸಲಾಗಿದ್ದು, ಗೋವಾದಲ್ಲಿ ಬೇಕರಿ, ಹೋಟೆಲ್‌ಗಳನ್ನು ಹೊಂದಿರುವ ಉದ್ಯಮಿ ಆಂಡ್ರ‍್ಯೂ ಡಯಾಸ್ ಅವರ ಪುತ್ರ ಎಂದು...
ಸುದ್ದಿ

ಸ್ನೇಹಿತನ ಮದುವೆಗೆ ಬಂದಿದ್ದ ಯುವಕ ಭದ್ರಾ ನದಿಯಲ್ಲಿ ಮುಳುಗಿ ಸಾವು -ಕಹಳೆ ನ್ಯೂಸ್

ಚಿಕ್ಕಮಗಳೂರು: ಸ್ನೇಹಿತನ ಮದುವೆಗೆ ಬಂದಿದ್ದ ಯುವಕನೊಬ್ಬ ಭದ್ರಾ ನದಿಯಲ್ಲಿ  ಮುಳುಗಿ ಸಾವನ್ನಪ್ಪಿದ ಘಟನೆ ಎನ್.ಆರ್.ಪುರ  ತಾಲೂಕಿನ ಬನ್ನೂರು ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಗದಗ ಮೂಲದ ಅಭಿಷೇಕ್ (27) ಎಂದು ಗುರುತಿಸಲಾಗಿದೆ. ಬನ್ನೂರು ಸಮೀಪದ ಭದ್ರಾ ರೆಸಾರ್ಟ್‌ನಲ್ಲಿ ಆತ ತಂಗಿದ್ದ. ಏ.5ರ ಸಂಜೆ ಭದ್ರಾ ನದಿಯಲ್ಲಿ ಆತ ನಾಪತ್ತೆಯಾಗಿದ್ದ. ಬಳಿಕ ಬಾಳೆಹೊನ್ನೂರು ಪೊಲೀಸರು ಹಾಗೂ ಸ್ಥಳಿಯರು ಶೋಧ ನಡೆಸಿದ್ದರು. ಭಾನುವಾರ ಕತ್ತಲಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು (ಏ.6) ಶೋಧ ನಡೆಸಿದಾಗ...
ಸುದ್ದಿ

ಚಿನ್ನದ ಬೆಲೆಯಲ್ಲಿ ಇಳಿಕೆ : ಬೆಳ್ಳಿ ಬೆಲೆಯಲ್ಲಿ ಸ್ಥಿರ -ಕಹಳೆ ನ್ಯೂಸ್

ಬೆಂಗಳೂರು : ಚಿನ್ನದ ಬೆಲೆ ಅಕ್ಷರಶಃ ಪ್ರಕ್ಷುಬ್ದತೆಯ ಸ್ವಭಾವ ಪಡೆದಿದೆ. ದಿನವೂ ಏರಿಳಿತಗಳನ್ನು ಕಾಣುತ್ತಿದೆ. ಒಂದೇ ದಿನದಲ್ಲಿ ಬೆಲೆಯಲ್ಲಿ  ಬದಲಾವಣೆ ಆಗುತ್ತಿದೆ. ನಿನ್ನೆ ಬೆಳಗ್ಗೆ 165 ರೂ ಇಳಿದಿದ್ದ ಚಿನ್ನದ ಬೆಲೆ ಸಂಜೆ ಸುಮಾರು 150 ರೂಗಳಷ್ಟು ಏರಿತ್ತು. ಇವತ್ತು ಮಂಗಳವಾರ ಬೆಳಗ್ಗೆ ಬೆಲೆ 75 ರೂನಷ್ಟು ಕಡಿಮೆಗೊಂಡಿದೆ. ವಿದೇಶಗಳಲ್ಲೂ ಇದೇ ರೀತಿ ಏರಿಳಿತದ ಆಟ ನಡೆದಿದೆ. ಈ ಮಧ್ಯೆ ಬೆಳ್ಳಿ ಬೆಲೆಯ ಸ್ಥಿರತೆ ಮುಂದುವರಿದಿದೆ. ಭಾರತದಲ್ಲಿ ಸದ್ಯ 10...
ಸುದ್ದಿ

ಇರಾನ್, ಇಸ್ರೇಲ್-ಅಮೆರಿಕ ವಾರ್ ಎಫೆಕ್ಟ್ : ಭಾರತದ ವಿಮಾನಯಾನ ಉದ್ಯಮಕ್ಕೆ 2,500 ಕೋಟಿ ನಷ್ಟ-ಕಹಳೆ ನ್ಯೂಸ್

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷಕ್ಕೆ ಇಂದು 39ನೇ ದಿನ. ಆರನೇ ವಾರಕ್ಕೆ ಕಾಲಿಟ್ಟಿರುವ ಈ ಯುದ್ಧದಿಂದ ಭಾರತಕ್ಕೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತಲೇ ಇದೆ. ಇದಕ್ಕೆ ಭಾರತದ ವಿಮಾನಯಾನ  ವಲಯವೂ ಹೊರತಾಗಿಲ್ಲ. ಕಚ್ಚಾತೈಲದ ಬೆಲೆ ಏರಿಕೆ, ಹಲವು ದೇಶಗಳ ವಾಯುಪ್ರದೇಶ ಮುಚ್ಚುವಿಕೆ ಸೇರಿದಂತೆ ಭಾರತದ ಏವಿಯೇಷನ್ ಉದ್ಯಮಕ್ಕೆ 2,500 ಕೋಟಿ ರೂ. ನಷ್ಟ ಉಂಟಾಗಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ಪರಿಣಾಮ ಈಗ ಭಾರತೀಯ ವಿಮಾನಯಾನ ಸಂಸ್ಥೆಗಳ ಗಳಿಕೆಯ ಮೇಲೆ ಪರಿಣಾಮ...
ಸುದ್ದಿ

ಟ್ರಂಪ್‌ಗೆ ಟೆನ್ಷನ್‌ ಕೊಟ್ಟ ಇರಾನ್‌ : ವಿದ್ಯುತ್‌ ಸ್ಥಾವರಗಳ ಸುತ್ತ ಮಾನವ ಸರಪಳಿ ನಿರ್ಮಿಸಲು ದೇಶದ ಯುವ ಸಮೂಹಕ್ಕೆ ಕರೆ -ಕಹಳೆ ನ್ಯೂಸ್

ಟೆಹ್ರಾನ್‌: ತಮ್ಮ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಇಡೀ ಇರಾನ್‌ನನ್ನು  ಸರ್ವನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಮಂಗಳವಾರದ ವರೆಗೆ (ಇಂದು) ಡೆಡ್‌ಲೈನ್‌ ಕೂಡ ನೀಡಿದ್ದಾರೆ. ಟ್ರಂಪ್‌  ಗಡುವು ಸಮೀಪಿಸುತ್ತಿದ್ದಂತೆ ಟೆನ್ಞನ್‌ ಕೊಡೋಕೆ ಇರಾನ್‌ ಹೊಸ ವರಸೆ ತೆಗೆದಿದೆ. ವಿದ್ಯುತ್‌ ಸ್ಥಾವರಗಳ ಸುತ್ತಲೂ ಮಾನವ ಸರಪಳಿ  ನಿರ್ಮಿಸುವಂತೆ ಇಡೀ ದೇಶದ ಯುವ ಸಮೂಹಕ್ಕೆ ಇರಾನ್‌ ಕರೆ ಕೊಟ್ಟಿದೆ. ಕ್ರೀಡಾಪಟುಗಳು, ಕಲಾವಿದರು, ವಿದ್ಯಾರ್ಥಿಗಳು ಸೇರಿದಂತೆ ದೇಶಾದ್ಯಂತ ಇರುವ ಯುವಜನರು ಮಂಗಳವಾರ...
1 76 77 78 79 80 3,395
Page 78 of 3395