
ಕಟಪಾಡಿ ಜಂಕ್ಷನ್ ಬಳಿ ಈಗಾಗಲೇ ಓವರ್ ಪಾಸ್ ಕಾಮಗಾರಿ ಆರಂಭವಾಗಿ ಕಾಮಗಾರಿ ಭರದಿಂದ ಸಾಗುತ್ತಿದ್ದು ಸ್ಥಳಕ್ಕೆ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.
ಸಾರ್ವಜನಿಕ ರು ನೀಡು ತ್ತಿರುವ ಸಹಕಾರ ಮತ್ತು ನ್ಯಾಷನಲ್ ಕಂಟ್ರಾಕ್ಷನ್ ಅವರ ಉತ್ತಮ ಕಾಮಗಾರಿ ಯಿಂದ ಆದಷ್ಟು ಬೇಗ ಅವಧಿ ಯ ಮೊದಲೇ ಕೆಲಸ ಮುಗಿಸುವ ಪ್ರಯತ್ನ ಮಾಡುವ ಮತ್ತು ಹಿರಿಯ ನಾಗರೀಕ ರು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕ ರಿಗೆ ಆಗುತ್ತಿರುವ ತೊಂದರೆ ಗಳ ಬಗ್ಗೆ ಎಲ್ಲರ ನ್ನು ಜೊತೆ ಗೂಡಿಸಿ ಮುಂದಿನ ದಿನಗಳಲ್ಲಿ ಸರಿಯಾದ ನಿರ್ಧಾರ ತೆಗೆದು ಕೊಳ್ಳುವ, ರಾತ್ರಿ ಹೊತ್ತು ಬೆಳಕಿನ ಸಮಸ್ಯೆ ಬಗ್ಗೆ ಶೀಘ್ರ ವ್ಯವಸ್ಥೆ ಮಾಡುವ ಎಪ್ರಿಲ್ 10 ರಿಂದ ಒಂದು ಭಾಗದ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದರು ತಿಳಿಸಿದರು.
ತಾನು ಶಾಸಕ ನಾಗುವ ಅನೇಕ ಶಾಸಕರು ವರ್ಷ ಗಳ ಮೊದಲು ಈ ಸಮಸ್ಯೆ ಕಣ್ಣಾರೆ ಕಂಡು ಅನುಭವಿಸಿ ದವ ಸಂಸದರು ಮತ್ತು ನಮ್ಮ ಶಾಸಕರು ಮತ್ತು ನಾನು ಬಹಳ ಪ್ರಯತ್ನ ಪಟ್ಟು ಕಟಪಾಡಿ ಈ ಸಮಸ್ಯೆ ಬಗೆ ಹರಿಸುವಲ್ಲಿ ಇವತ್ತು ನನಗೆ ತುಂಬಾ ಸಂತೋಷ ವಾಗುತ್ತಿದೆ ಪೇಟೆಯ ವ್ಯವಹಾರ, , ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದ್ರೆ, ಸಾರ್ವಜನಿಕ ರ ತೊಂದರೆ ಎಲ್ಲವು ನನಗೆ ಅರ್ಥ ವಾಗುತ್ತದೆ, ಕೆಲಸ ಪೂರ್ಣ ಗೊಳಿಸುವಲ್ಲಿ ನಾನು ಹೆಚ್ಚಿನ ಗಮನ ಕೊಡುತ್ತೇನೆ ನಿಮ್ಮೆಲ್ಲರ ಸಹಕಾರ ಮತ್ತು ಮಾರ್ಗದರ್ಶನ ಇರಲಿ ಎಂದು ಕಾಪು ಕ್ಷೇತ್ರ ದ ಶಾಶಕರು ಗುರ್ಮೆ ಸುರೇಶ್ ಶೆಟ್ಟಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಿಲ್ಪಾ ಜಿ ಸುವರ್ಣ, ಕಟಪಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀನಿವಾಸ್ ಕಿಣಿ, ಸುಭಾಸ್ ಬಲ್ಲಾಳ್, ಪವಿತ್ರ ಶೆಟ್ಟಿ, ಕೋಟೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಯೋಗೀಶ್, ಹರ್ಷಿತ್, ರತ್ನಾಕರ್, ಕುರ್ಕಾಲು ಗ್ರಾಮ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಪ್ರವೀಣ್ ಪೂಜಾರಿ, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, ಮೂಡಬೆಟ್ಟು ಮಹಾಶಕ್ತಿ ಕೇಂದ್ರದ ನಿತಿನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.*









