Thursday, June 18, 2026

ಸುದ್ದಿ

ಜಿಲ್ಲೆಸುದ್ದಿಹಾಸನ

ಕೇರಳಕ್ಕೆ ಮತ ಚಲಾಯಿಸಲು ಹೊರಟಿದ್ದಾಗ ಕಾರು ಅಪಘಾತ : ವ್ಯಕ್ತಿಯ ಸ್ಥಿತಿ ಗಂಭೀರ -ಕಹಳೆ ನ್ಯೂಸ್

ಹಾಸನ: ಏ.9 ರಂದು ಕೇರಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ   ಮತ ಚಲಾಯಿಸಲು ತೆರಳುತ್ತಿದ್ದಾಗ ಕಾರು ಅಪಘಾತವಾಗಿ  ಕಾರಿನಲ್ಲಿದ್ದ ವ್ಯಕ್ತಿ ಗಂಭಿರವಾಗಿ ಗಾಯಗೊಂಡ ಘಟನೆ ಸಕಲೇಶಪುರದ  ಮಳಲಿ ಬೈಪಾಸ್ ಬಳಿ ನಡೆದಿದೆ. ಗಾಯಾಳುವನ್ನು ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ. ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದ ಖಾದರ್ ಮತ ಚಲಾಯಿಸಲು ಕಾರಿನಲ್ಲಿ ಕೇರಳಕ್ಕೆ ತೆರಳುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿ, ರಸ್ತೆಯಿಂದ ಕೆಳಗೆ ಹಾರಿ, ಸುಮಾರು 25 ಅಡಿ ದೂರದಲ್ಲಿ...
ಬೆಂಗಳೂರುರಾಜ್ಯಸುದ್ದಿ

ಹಾಸ್ಟೆಲ್‌ ಬಳಿ ಡ್ರಗ್ಸ್‌ ಮಾರುತ್ತಿದ್ದ ಆರೋಪಿಗಳು ಅರೆಸ್ಟ್‌ : 10.5 ಲಕ್ಷ ಮೌಲ್ಯದ ಗಾಂಜಾ ಸೀಜ್‌ -ಕಹಳೆ ನ್ಯೂಸ್

ಬೆಂಗಳೂರು: ಯಲಹಂಕ  ಉಪನಗರದ ಬಾಯ್ಸ್ ಹಾಸ್ಟೆಲ್ ಒಂದರ ಹಿಂಭಾಗ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮುಹಮ್ಮದ್ ನಿಶಾದ್ ಹಾಗೂ ಆದೇಶ್‌ ಎಂದು ಗುರುತಿಸಲಾಗಿದೆ. ಬಂಧಿತರಿಂದ 10.5 ಲಕ್ಷದ ರೂ. ಮೌಲ್ಯದ 21 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಹಾಸ್ಟೆಲ್‌ ಹಿಂಭಾಗದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್‌ ಮಾಡಿ, ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಹೊರ ರಾಜ್ಯಗಳಿಂದ ಕಡಿಮೆ...
ಜಿಲ್ಲೆಶಿವಮೊಗ್ಗಸುದ್ದಿ

ತೀರ್ಥಹಳ್ಳಿ | ತುಂಗಾ ನದಿಯಲ್ಲಿ ಮುಳುಗಿ ಯುವಕ ದುರ್ಮರಣ -ಕಹಳೆ ನ್ಯೂಸ್

ಶಿವಮೊಗ್ಗ: ತುಂಗಾ ನದಿಯಲ್ಲಿ  ಹೋಗಿ ಕಣ್ಮರೆಯಾಗಿದ್ದ ಯುವಕನ ಶವ ಪತ್ತೆಯಾಗಿದೆ. ಮುಳುಗು ತಜ್ಞ ಈಶ್ವರ್ ಮಲ್ಪೆ ಯುವಕನ ಶವಕ್ಕಾಗಿ ನದಿಯಲ್ಲಿ ಹುಡುಕಾಟ ನಡೆಸಿದ್ದರು. ನದಿಗೆ ಇಳಿದಿದ್ದ ಕೆಲವೇ ಅಡಿಯ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿದೆ. ಮೃತನನ್ನು ತೀರ್ಥಹಳ್ಳಿ ತಾಲೂಕಿನ ಸೀಬಿನಕೆರೆ ನಿವಾಸಿ ಅಕ್ಷಯ್ (26) ಎಂದು ಗುರುತಿಸಲಾಗಿದೆ. ಏ.7ರ ಸಂಜೆ ಕಲ್ಲು ಬಂಡೆ ಮೇಲೆ ಮೊಬೈಲ್, ಚಪ್ಪಲಿ, ಬಟ್ಟೆಯನ್ನು ಇಟ್ಟು ಈಜಲು ಹೋಗಿ ಕಣ್ಮರೆಯಾಗಿದ್ದ. ಯುವಕನ ಶವವನ್ನು ತೀರ್ಥಹಳ್ಳಿ ಆಸ್ಪತ್ರೆಗೆ ರವಾನೆ...
ಜಿಲ್ಲೆಸುದ್ದಿ

ಪ್ರೇಯಸಿ ಆತ್ಮಹತ್ಯೆ : ಮನನೊಂದು ಪ್ರಿಯಕರನೂ ನೇಣಿಗೆ ಶರಣು – ಕಹಳೆ ನ್ಯೂಸ್

ಬಾಗಲಕೋಟೆ: ಪ್ರೇಯಸಿ (Lover) ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಪ್ರಿಯಕರನೂ ನೇಣಿಗೆ ಶರಣಾಗಿರುವ ಘಟನೆ ಬಾಗಲಕೋಟೆ (Bagalkote) ಜಿಲ್ಲೆ ರಬಕವಿಬನಹಟ್ಟಿಯ ಅಸ್ಕಿ (Aski ) ಗ್ರಾಮ ಹಾಗೂ ಬನಹಟ್ಟಿ (Banahatti) ನಗರದಲ್ಲಿ ನಡೆದಿದೆ. ಪವಿತ್ರಾ ಒಂಟಿ (19), ಕಾರ್ತಿಕ್ ನಾಯಕ್(19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಪವಿತ್ರಾ ಬನಹಟ್ಟಿಯ ಕೆಹೆಚ್‌ಡಿಸಿ ಕಾಲೋನಿ ನಿವಾಸಿಯಾಗಿದ್ದಳು. ಕಾರ್ತಿಕ್ ಅಸ್ಕಿ ಗ್ರಾಮದ ಹುಡುಗ. ಮಂಗಳವಾರ ಇವರಿಬ್ಬರ ಮಧ್ಯೆ ವೈಮನಸ್ಸಿನಿಂದ ಜಗಳ ನಡೆದಿತ್ತು. ಇದಾದ ಬಳಿಕ ಮನನೊಂದು...
ಬೆಂಗಳೂರುರಾಜ್ಯಸುದ್ದಿ

ಇರಾನ್, ಇಸ್ರೇಲ್ ಕದನ ವಿರಾಮ ಬೆನ್ನಲ್ಲೇ ಚಿನ್ನ, ಬೆಳ್ಳಿ ಬೆಲೆ ಭಾರೀ ಏರಿಕೆ -ಕಹಳೆ ನ್ಯೂಸ್

ಬೆಂಗಳೂರು: ಸತತ ಮೂರು ವಾರಗಳ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ  ಭಾರೀ ಏರಿಕೆ ಕಂಡಿದೆ. ಇರಾನ್ - ಅಮೆರಿಕ, ಇಸ್ರೇಲ್ ನಡುವಿನ ಯುದ್ಧವು ತಾರ್ಕಿಕ ಅಂತ್ಯ ಕಾಣುವ ಲಕ್ಷಣ ಕಾಣಿಸುತ್ತಿದೆ. ಯುದ್ಧಕ್ಕೆ 2 ಕದನ ವಿರಾಮ ಘೋಷಣೆ ಮಾಡುತ್ತಿದ್ದಂತೆಯೇ ಕಚ್ಚಾ ತೈಲದ ಬೆಲೆ ಭರ್ಜರಿ ಕುಸಿತ ಕಂಡಿದೆ. ಅಲ್ಲದೆ ಚಿನ್ನ ಮತ್ತು ಬೆಳ್ಳಿ ಬೆಲೆ ಹೆಚ್ಚಳವಾಗಿದೆ. ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಾಗಿದೆ? ಎಂಬ ಬಗ್ಗೆ ಇಲ್ಲಿ...
ಬೆಂಗಳೂರುರಾಜ್ಯಸುದ್ದಿ

ಸಿಗ್ನಲ್‌ನಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿದ ಮತ್ತೊಂದು ಲಾರಿ : ಚಾಲಕ ಸಾವು-ಕಹಳೆ ನ್ಯೂಸ್

ಬೆಂಗಳೂರು: ಸಿಗ್ನಲ್‌ನಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಗುದ್ದಿದ ಪರಿಣಾಮ ಲಾರಿ ಚಾಲಕ  ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ರಸ್ತೆ ಸಾಟಲೈಟ್ ಬಸ್ ನಿಲ್ದಾಣದ   ಸಿಗ್ನಲ್‌ನಲ್ಲಿ ನಡೆದಿದೆ. ವಿಜಯ್ ಕುಮಾರ್ ಮೃತ ಲಾರಿ ಚಾಲಕ (60). ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಮೈಸೂರು ರಸ್ತೆ ಫ್ಲೈಓವರ್ ಇಳಿಯುತ್ತಿದ್ದಂತೆ ಅಲ್ಲಲ್ಲಿ ವಾಹನಗಳಿಗೆ ಟಚ್ ಮಾಡಿಕೊಂಡು ಬಂದಿರುವ ಹಿಂಬದಿ ಲಾರಿ ಚಾಲಕ ಬಳಿಕ ಸಾಟಲೈಟ್ ಬಸ್ ನಿಲ್ದಾಣದ...
ಸುದ್ದಿ

ಅಮೆರಿಕ-ಇರಾನ್‌ ಮಧ್ಯೆ 2 ವಾರಗಳ ಕದನ ವಿರಾಮ ಘೋಷಣೆ -ಕಹಳೆ ನ್ಯೂಸ್

ವಾಷಿಂಗ್ಟನ್‌: ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ  ಮತ್ತು ಇರಾನ್‌  ನಡುವೆ 2 ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಇರಾನ್‌ಗೆ ನೀಡಿದ್ದ 48 ಗಂಟೆಗಳ ಡೆಡ್‌ಲೈನ್‌ ಅಮೆರಿಕ ಕಾಲಮಾನ ರಾತ್ರಿ 8 ಗಂಟೆಗೆ ಅಂತ್ಯವಾಗುವ ಒಂದು ಗಂಟೆಯ ಮೊದಲು ಟ್ರಂಪ್‌  ತಮ್ಮ ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಇರಾನ್‌ ಒಪ್ಪಿಕೊಂಡಿದೆ ಮತ್ತು ಅವರ ಕಡೆಯಿಂದ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಟ್ರಂಪ್‌ ಪೋಸ್ಟ್‌ನಲ್ಲಿ...
ಬೆಂಗಳೂರುರಾಜ್ಯಸುದ್ದಿ

ಚಾಕುವಿನಿಂದ ಇರಿದು ಹೆಂಡತಿಯಿಂದಲೇ ಗಂಡನ ಕೊಲೆ -ಕಹಳೆ ನ್ಯೂಸ್

ಬೆಂಗಳೂರು: ಚಾಕುವಿನಿಂದ ಇರಿದು ಹೆಂಡತಿಯೇ ಗಂಡನ ಕೊಲೆ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರದ  ಮಲ್ಲತ್ತಹಳ್ಳಿಯಲ್ಲಿ ನಡೆದಿದೆ. ತೌಹಿಬ್ ಪಾಷ ಕೊಲೆಯಾದ ಪತಿ. ಪತ್ನಿ ಸೋಹಾನ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಂಗಳವಾರ ರಾತ್ರಿ ಮನೆಯಲ್ಲಿ ಗಲಾಟೆ ನಡೆದು ಕೊಲೆ ಮಾಡಿದ್ದಾರೆ. ಪತ್ನಿ, ಆಕೆಯ ತಾಯಿ, ಮತ್ತು ತಂದೆ ಮೂವರು ಸೇರಿ ಕೊಲೆ ಮಾಡಿದ್ದಾರೆ ಎಂದು ತೌಹಿಬ್ ಪಾಷ ಕುಟುಂಬಸ್ಥರು ಆರೋಪಿಸಿದ್ದಾರೆ....
1 75 76 77 78 79 3,395
Page 77 of 3395