Thursday, June 18, 2026

ಸುದ್ದಿ

ದೆಹಲಿಸುದ್ದಿ

ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದವರು ಆಶಾ ಭೋಸ್ಲೆ: ಮೋದಿ ಕಂಬನಿ -ಕಹಳೆ ನ್ಯೂಸ್

ನವದೆಹಲಿ: ಆಶಾ ಭೋಸ್ಲೆ ಅವರ ದಶಕಗಳ ಕಾಲದ ಸಂಗೀತ ಪ್ರಯಾಣವು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಭಾರತ ಕಂಡ ಅತ್ಯಂತ ಪ್ರತಿಮಾರೂಪದ ಮತ್ತು ಬಹುಮುಖ ಪ್ರತಿಭೆಯ ಧ್ವನಿಗಳಲ್ಲಿ ಒಬ್ಬರಾದ ಆಶಾ ಭೋಸ್ಲೆ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಎಕ್ಸ್‌ನಲ್ಲಿ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಹೃದಯ ಸ್ತಂಭನದಿಂದ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ ಭೋಸ್ಲೆ ಅವರ ಸಂಗೀತ ವಿಶ್ವಾದ್ಯಂತ...
ಬೆಂಗಳೂರುಸುದ್ದಿ

ಪ್ರೀತಿಸಿದವಳ ಕಿಡ್ನ್ಯಾಪ್ ಮಾಡಿ ಅತ್ತೆಗೆ ಚಾಕು ಇರಿತ ಕೇಸ್ :ಚಿಕಿತ್ಸೆ ಫಲಿಸದೇ ಮಹಿಳೆ ಸಾವು -ಕಹಳೆ ನ್ಯೂಸ್

ಬೆಂಗಳೂರು: ಪ್ರೀತಿಸಿದವಳ ಕಿಡ್ನ್ಯಾಪ್ ವೇಳೆ ಅಣ್ಣನ ಮಗನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಆಡುಗೋಡಿಯಲ್ಲಿ ನಡೆದಿದೆ.   ಚಿಕಿತ್ಸೆ ಫಲಿಸದೇ ಅತ್ತೆ ಮಾಗೇಶ್ವರಿ (55) ಸಾವನ್ನಪ್ಪಿದ ಮಹಿಳೆ. ಮಾ.25 ರಂದು ಆಡುಗೋಡಿ ಮನೆಯಲ್ಲಿ ಮಾಗೇಶ್ವರಿಗೆ ಚಾಕು ಇರಿಯಲಾಗಿತ್ತು. ಮಾಗೇಶ್ವರಿ ಅಣ್ಣನ ಮಗ ಕಿರಣ್‌ಗೆ ಮದುವೆಯಾಗಿತ್ತು. ಆದರೂ ಮಾಗೇಶ್ವರಿ ಸಂಬಂಧಿಯೊಬ್ಬಳನ್ನು ಕರೆದುಕೊಂಡು ಹೋಗಿದ್ದ. ಕೆಲ ದಿನಗಳ ಹಿಂದೆ ಕಿರಣ್ ಬಿಟ್ಟು ಬಂದಿದ್ದ ಆಕೆ ಅಜ್ಜಿ ಜೊತೆ ಇದ್ದಳು....
ಮುಂಬೈರಾಜ್ಯಸುದ್ದಿ

ಹೃದಯ ಸ್ತಂಭನದಿಂದ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ -ಕಹಳೆ ನ್ಯೂಸ್

ಮುಂಬೈ: ಖ್ಯಾತ ಗಾಯಕಿ ಆಶಾ ಭೋಸ್ಲೆ (92) ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆಶಾ ಭೋಸ್ಲೆ ಅವರಿಗೆ ಶನಿವಾರ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಪುತ್ರ ಆನಂದ್ ಭೋಸ್ಲೆ ಅವರು ತಾಯಿಯ ಸಾವನ್ನು ದೃಢಪಡಿಸಿದ್ದಾರೆ. ‘ಅಮ್ಮ ಇನ್ನಿಲ್ಲ. ಅವರ ಅಂತ್ಯಕ್ರಿಯೆ ನಾಳೆ ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆಯಲಿದೆ’ ಎಂದು ತಿಳಿಸಿದ್ದಾರೆ. ಪಿಯಾ ತು ಅಬ್ ತೊ...
ಬೆಂಗಳೂರುರಾಜ್ಯಸುದ್ದಿ

ಪ್ರೀತಿ ಹೆಸರಲ್ಲಿ ಯುವತಿಯಿಂದ ಮೋಸ ಆರೋಪ :  ವಿಡಿಯೋ ಕಾಲ್ ಮಾಡಿ ಯುವಕ ಆತ್ಮಹತ್ಯೆ -ಕಹಳೆ ನ್ಯೂಸ್

ಬೆಂಗಳೂರು: ಪ್ರೀತಿ ಹೆಸರಲ್ಲಿ ಯುವತಿಯಿಂದ ಮೋಸ ಮಾಡಿದಳೆಂದು ವಿಡಿಯೋ ಕಾಲ್ ಮಾಡಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 23 ವರ್ಷದ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೀತಿ ಮಾಡುತ್ತಿದ್ದ ಯುವತಿಗೆ ವಿಡಿಯೋ ಕಾಲ್ ಮಾಡಿ ಸಾಯುತ್ತಿರುವುದಾಗಿ ತಿಳಿಸಿದ್ದ ಎನ್ನಲಾಗಿದೆ. ಸಾಯುವ ಮುನ್ನ ಕರೆ ಮಾಡಿದ್ದ ವಿಡಿಯೋ ಕಾಲ್ ಹಾಗೂ ಮೆಸೇಜ್‌ನ ಸ್ಕ್ರೀನ್‌ಶಾಟ್‌ಗಳು ಲಭ್ಯವಾಗಿವೆ. ಅಲ್ಲದೇ ಮನೆಯವರಿಗೆ ಗೊತ್ತಿಲ್ಲದೆ ಮದುವೆಯಾಗಿದ್ದಾಗಿ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಂಟಿಕ – ಬಾಳ್ತಿಲ ಮಕ್ಕಳ ಸಾಂಸ್ಕೃತಿಕ ಕಲರವ 2026 ಹಾಗೂ ಯಕ್ಷಗಾನ – “ಶ್ರೀದೇವಿ ವೈಷ್ಣವಿ ಮಹಾತ್ಮೆ” -ಕಹಳೆ ನ್ಯೂಸ್

ಕಲ್ಲಡ್ಕ : ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಂಟಿಕ ಇಲ್ಲಿ ಮಕ್ಕಳ ಸಾಂಸ್ಕೃತಿಕ ಕಲರವ 2026 ಹಾಗೂ ಯಕ್ಷಗಾನ ಕಾರ್ಯಕ್ರಮ ಏಪ್ರಿಲ್ 11ನೇ ಶನಿವಾರ ಸಾಯಂಕಾಲ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸೌಮ್ಯಶ್ರೀ ವಹಿಸಿದ್ದರು. ಕಾರ್ಯಕ್ರಮವನ್ನು ಕಲ್ಲಡ್ಕ ಕೇಟಿ ಹೋಟೆಲ್ ಲಕ್ಷ್ಮಿ ಗಣೇಶ್ ಮಾಲಕಿ ಪದ್ಮಾವತಿ ಭಟ್ ಉದ್ಘಾಟಿಸಿ ಮಾತನಾಡಿ ನಮ್ಮ ಆಚರಣೆ ಸಂಸ್ಕೃತಿ ಕಲೆಗಳು ಮಾಯವಾಗುತ್ತಿತ್ತು ಇಂತಹ ಸಂದರ್ಭದಲ್ಲಿ ಕೇವಲ...
ಬೆಂಗಳೂರುಸುದ್ದಿ

ನಟ ದುನಿಯಾ ವಿಜಯ್ ಸೇರಿ 20 ಮಂದಿಗೆ ಬಾಗಲೂರು ಪೊಲೀಸರಿಂದ ನೋಟಿಸ್‌ -ಕಹಳೆ ನ್ಯೂಸ್

ಬೆಂಗಳೂರು: ಝಾಂಬಿ ಡ್ರಗ್ಸ್‌  ಕುರಿತು ಯುವಕನೊಬ್ಬ ಶೇರ್‌ ಮಾಡಿದ್ದ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದ ನಟ ದುನಿಯಾ ವಿಜಯ್‌ಗೆ  ಈಗ ಕಾನೂನು ಸಂಕಷ್ಟ ಎದುರಾಗಿದೆ. ಅಪಯಕಾರಿ ಝಾಂಬಿ ಡ್ರಗ್ಸ್ ಬೆಂಗಳೂರಿಗೆ ಲಗ್ಗೆ ಇಟ್ಟಿದೆ ಎನ್ನುವ ವಿಡಿಯೋವನ್ನು ಹೇಮಂತ್ ಎಂಬ ಯುವಕ ತನ್ನ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದ. ಯುವಕನ ವಿಡಿಯೋ ಪೂರ್ವಾಪರ ಪರಿಶೀಲಿಸದೇ ನಟ ದುನಿಯಾ ವಿಜಯ್ ಶೇರ್ ಮಾಡಿಕೊಂಡಿದ್ದರು. ನಾನು ಸಿನಿಮಾ ಮಾಡಿ ಡ್ರಗ್ಸ್ ಬಗ್ಗೆ ಮಾಹಿತಿ ನೀಡುವ ಕೆಲಸ...
ದೆಹಲಿಸುದ್ದಿ

ಯುಪಿಯಲ್ಲಿ ಬೆಳಗ್ಗೆ ವಾಕಿಂಗ್‌ ಹೊರಟಿದ್ದ ವಕೀಲನಿಗೆ ಗುಂಡಿಕ್ಕಿ ಹತ್ಯೆ: ಎಸ್ಕೇಪ್‌ ಆಗುವಾಗ ಬೈಕ್‌ ಸ್ಟಾರ್ಟ್‌ ಆಗದೇ ಆತಂಕಕ್ಕೆ ಒಳಗಾಗಿದ್ದ ಹಂತಕರು -ಕಹಳೆ ನ್ಯೂಸ್

ಲಕ್ನೋ: ಉತ್ತರ ಪ್ರದೇಶದ  ಮಿರ್ಜಾಪುರದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ವಕೀಲನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹಿರಿಯ ವಕೀಲ ರಾಜೀವ್‌ ಸಿಂಗ್‌ (45) ಹತ್ಯೆಗೀಡಾದ ವ್ಯಕ್ತಿ. ಶೂಟೌಟ್‌ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗುಂಡಿನ ದಾಳಿ ನಡೆಸಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ರಾಜೀವ್‌ ಸಿಂಗ್‌ ಎಂದಿನಂತೆ ಬೆಳಗ್ಗೆ ವಾಕಿಂಗ್‌ ಹೋಗಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು, ವಕೀಲನ ಮೇಲೆ ಏಕಾಏಕಿ ಗುಂಡಿನ...
ಜಿಲ್ಲೆಸುದ್ದಿ

ಕೆರೆಯಲ್ಲಿ ಹೂಳೆತ್ತುವಾಗ ಪುರಾತನ ಕಾಲದ ಬಸವಣ್ಣ ಮೂರ್ತಿ ಪತ್ತೆ!-ಕಹಳೆ ನ್ಯೂಸ್

ಹಾವೇರಿ: ಕೆರೆಯಲ್ಲಿ ಹೂಳು ತೆಗೆಯುತ್ತಿದ್ದ  ವೇಳೆ ಪುರಾತನ ಕಾಲದ ಬಸವಣ್ಣ ಮೂರ್ತಿ ಪತ್ತೆಯಾದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ದೂದಿಹಳ್ಳಿ ನಡೆದಿದೆ. ಗ್ರಾಮದ ಬಳಿ ಇರೋ ಬಾಳೆ ಕೆರೆಯಲ್ಲಿ ಹೂಳು ತೆಗೆಯುತ್ತಿದ್ದ ವೇಳೆ ಬಸವಣ್ಣ ಮೂರ್ತಿ (Basavanna Statue) ಪತ್ತೆಯಾಗಿದೆ. ಸುಮಾರು 3 ಅಡಿ ಎತ್ತರದ ಬಸವಣ್ಣ ಮೂರ್ತಿ ಪತ್ತೆಯಾಗಿದ್ದು, ಬಸವಣ್ಣನ ಮೂರ್ತಿಗೆ ಪೂಜೆ ಸಲ್ಲಿಸಿದ್ದಾರೆ. ಗ್ರಾಮದ ದೇವಸ್ಥಾನ ಬಳಿ ಪ್ರತಿಷ್ಠಾನ ಮಾಡಿ ಪೂಜೆ ಮಾಡಲು ನಿರ್ಧಾರ ಮಾಡಿದ್ದಾರೆ....
1 71 72 73 74 75 3,395
Page 73 of 3395