Thursday, July 23, 2026
ಜಿಲ್ಲೆಸುದ್ದಿ

ಕೆರೆಯಲ್ಲಿ ಹೂಳೆತ್ತುವಾಗ ಪುರಾತನ ಕಾಲದ ಬಸವಣ್ಣ ಮೂರ್ತಿ ಪತ್ತೆ!-ಕಹಳೆ ನ್ಯೂಸ್

ಹಾವೇರಿ: ಕೆರೆಯಲ್ಲಿ ಹೂಳು ತೆಗೆಯುತ್ತಿದ್ದ  ವೇಳೆ ಪುರಾತನ ಕಾಲದ ಬಸವಣ್ಣ ಮೂರ್ತಿ ಪತ್ತೆಯಾದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ದೂದಿಹಳ್ಳಿ ನಡೆದಿದೆ.
ಗ್ರಾಮದ ಬಳಿ ಇರೋ ಬಾಳೆ ಕೆರೆಯಲ್ಲಿ ಹೂಳು ತೆಗೆಯುತ್ತಿದ್ದ ವೇಳೆ ಬಸವಣ್ಣ ಮೂರ್ತಿ (Basavanna Statue) ಪತ್ತೆಯಾಗಿದೆ. ಸುಮಾರು 3 ಅಡಿ ಎತ್ತರದ ಬಸವಣ್ಣ ಮೂರ್ತಿ ಪತ್ತೆಯಾಗಿದ್ದು, ಬಸವಣ್ಣನ ಮೂರ್ತಿಗೆ ಪೂಜೆ ಸಲ್ಲಿಸಿದ್ದಾರೆ.

ಗ್ರಾಮದ ದೇವಸ್ಥಾನ ಬಳಿ ಪ್ರತಿಷ್ಠಾನ ಮಾಡಿ ಪೂಜೆ ಮಾಡಲು ನಿರ್ಧಾರ ಮಾಡಿದ್ದಾರೆ. ಮುಂದೆ ಕೆರೆಯಲ್ಲಿ ಹೂಳು ತೆಗೆಯುವ ಕಾರ್ಯ ಮತ್ತೆ ಪ್ರಾರಂಭವಾಗಿದ್ದು ಮತ್ತೆ ಏನಾದರೂ ಪುರಾತನ ಕಾಲದ ಮೂರ್ತಿಗಳು ಸಿಗಬಹುದು ಅನ್ನೋ ಹೂಳು ತೆಗೆಯುವ ಕಾರ್ಯವನ್ನ ಮಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು