Thursday, April 23, 2026
ಬೆಂಗಳೂರುಸುದ್ದಿ

ನಟ ದುನಿಯಾ ವಿಜಯ್ ಸೇರಿ 20 ಮಂದಿಗೆ ಬಾಗಲೂರು ಪೊಲೀಸರಿಂದ ನೋಟಿಸ್‌ -ಕಹಳೆ ನ್ಯೂಸ್

ಬೆಂಗಳೂರು: ಝಾಂಬಿ ಡ್ರಗ್ಸ್‌  ಕುರಿತು ಯುವಕನೊಬ್ಬ ಶೇರ್‌ ಮಾಡಿದ್ದ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದ ನಟ ದುನಿಯಾ ವಿಜಯ್‌ಗೆ  ಈಗ ಕಾನೂನು ಸಂಕಷ್ಟ ಎದುರಾಗಿದೆ.

ಅಪಯಕಾರಿ ಝಾಂಬಿ ಡ್ರಗ್ಸ್ ಬೆಂಗಳೂರಿಗೆ ಲಗ್ಗೆ ಇಟ್ಟಿದೆ ಎನ್ನುವ ವಿಡಿಯೋವನ್ನು ಹೇಮಂತ್ ಎಂಬ ಯುವಕ ತನ್ನ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದ. ಯುವಕನ ವಿಡಿಯೋ ಪೂರ್ವಾಪರ ಪರಿಶೀಲಿಸದೇ ನಟ ದುನಿಯಾ ವಿಜಯ್ ಶೇರ್ ಮಾಡಿಕೊಂಡಿದ್ದರು.

ನಾನು ಸಿನಿಮಾ ಮಾಡಿ ಡ್ರಗ್ಸ್ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಿದ್ದೆ. ಪೊಲೀಸರು ಸರಿಯಾದ ಕ್ರಮ ಕೈಗೊಳ್ಳಲಿಲ್ಲ ಎಂದು ದುನಿಯಾ ವಿಜಯ್ ವಿಡಿಯೋ ಶೇರ್ ಮಾಡಿದ್ದರು. ಆ ವಿಡಿಯೋ ಈಗ ನಟನಿಗೆ ಸಂಕಷ್ಟ ತಂದೊಡ್ಡಿದೆ. ಝಾಂಬಿ ವಿಡಿಯೋ ಬಗ್ಗೆ ಅಪಪ್ರಚಾರ ಮಾಡಿದ್ದ ಯುವಕ ಹೇಮಂತ್‌ನನ್ನ ಪೊಲೀಸರು ಬಂಧಿಸಿ ಕ್ಷಮೆ ಕೇಳಿಸಿ ಬಿಡುಗಡೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ಹೇಮಂತ್ ವಿಡಿಯೋ ಶೇರ್ ಮಾಡಿದ್ದ 20ಕ್ಕೂ ಹೆಚ್ಚು ಮಂದಿಗೆ ನೋಟಿಸ್ ಕೊಟ್ಟು ‌ವಿಚಾರಣೆಗೆ ಕರೆಯಲು ಪೊಲೀಸರು ಮುಂದಾಗಿದ್ದಾರೆ. 20 ಮಂದಿಯಲ್ಲಿ ನಟ ದುನಿಯಾ ವಿಜಯ್‌ಗೂ ನೋಟಿಸ್ ಕೊಟ್ಟು ಸ್ಪಷ್ಟನೆ ಕೇಳಲು ಬಾಗಲೂರು ಪೊಲೀಸರು ಮುಂದಾಗಿದ್ದಾರೆ. ನಟ ದುನಿಯಾ ವಿಜಯ್ ಹೊರ ರಾಜ್ಯದಲ್ಲಿರುವ ಮಾಹಿತಿ ಪಡೆದಿರುವ ಪೊಲೀಸರು ವಾಟ್ಸಪ್ ಮೂಲಕ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದು ಸ್ಪಷ್ಟನೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.