ಇಂದು ಮಧ್ಯರಾತ್ರಿಯಿಂದ ಖಾಸಗಿ ಬಸ್ ಟಿಕೆಟ್ ದರ ಏರಿಕೆ – ಕಹಳೆ ನ್ಯೂಸ್
ಬೆಂಗಳೂರು: ಪೆಟ್ರೋಲ್, ಡಿಸೇಲ್ ದರ ಏರಿಕೆ ಬೆನ್ನಲ್ಲೇ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಿದ್ದು, ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಈ ಕುರಿತು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘ ಮಾಹಿತಿ ನೀಡಿದೆ. 20ರಿಂದ 30% ದರ ಏರಿಕೆ ಮಾಡಲಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಪ್ರತಿದಿನ ಖಾಸಗಿ ಬಸ್ ಮಾಲೀಕರು ಕನಿಷ್ಠ 150 ಲೀಟರ್ ಆಯಿಲ್ ಹಾಕಿಸಿಕೊಳ್ಳಬೇಕು. ನಮಗೆ ಪ್ರತಿ ಟ್ರಿಪ್ಗೆ ಹೆಚ್ಚುವರಿಯಾಗಿ 450 ರೂ. ಅಂದರೆ ಹೊರೆ...







