
ಬೆಂಗಳೂರು: ಪೆಟ್ರೋಲ್, ಡಿಸೇಲ್ ದರ ಏರಿಕೆ ಬೆನ್ನಲ್ಲೇ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಿದ್ದು, ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ.
ಇನ್ನೂ `ಪಬ್ಲಿಕ್ ಟಿವಿ’ ಜೊತೆ ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನಗಳ ಯುನಿಯನ್ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಸ್ಕೂಲ್ ವಾಹನಗಳ ದರ 10% ವರೆಗೆ ಏರಿಕೆ ಮಾಡಿದ್ದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ರಾಜ್ಯ ಟ್ರ್ಯಾವೆಲ್ ಪಾಸೆಂಜರ್ ವಾಹನಗಳ ದರವೂ 10%-15%ನಷ್ಟು ಏರಿಕೆಯಾಗಲಿದೆ.
ಒಲಾ, ಉಬರ್ ದರ ಏರಿಕೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸೋಮವಾರ (ಮೇ 18) ಚಾಲಕರ ಸಂಘದಿಂದ ಸಭೆ ನಡೆಯಲಿದೆ. ಸಭೆಯ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಿದ್ಧತೆ ನಡೆದಿದ್ದು, ದರ ಏರಿಕೆಗೆ ಪ್ರಸ್ತಾವನೆಗೆ ಒತ್ತಡ ಹೇರಲು ತಯಾರಿ ನಡೆಸಿದೆ.









