ಸಕಾಲಕ್ಕೆ ಮದುವೆ ಮಾಡಿಲ್ಲ ಅಂತ ಅಪ್ಪನನ್ನೇ ಕೊಂದ ಮಗ -ಕಹಳೆ ನ್ಯೂಸ್
ಚಿತ್ರದುರ್ಗ: ಸಕಾಲಕ್ಕೆ ಮದುವೆ ಮಾಡಲಿಲ್ಲವೆಂದು ಆಕ್ರೋಶಗೊಂಡ ಪಾಪಿಪುತ್ರನೋರ್ವ ಹೆತ್ತ ತಂದೆಯನ್ನೇ ಬರ್ಬರವಾಗಿ ಕೊಲೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತಿಘಟ್ಟ ಗ್ರಾಮದಲ್ಲಿ ನಡೆದಿದೆ. ಮೃತ ಸಣ್ಣನಿಂಗಪ್ಪನಿಗೆ ಮೂವರು ಮಕ್ಕಳು. ಹಿರಿಯ ಮಗ ಮಾರುತಿ, ಎರಡನೇ ಮಗ ನಿಂಗರಾಜ್, ಕಿರಿಯ ಮಗಳು ಜ್ಯೋತಿ. ಮಾರುತಿ ಹಾಗೂ ಜ್ಯೋತಿಗೆ ಮದುವೆಯಾಗಿತ್ತು. ಆದರೆ ನಿಂಗರಾಜ್ಗೆ ಮದುವೆ ಆಗಿರಲಿಲ್ಲ. ಹೀಗಾಗಿ ಬುಧವಾರ ನಿಂಗರಾಜ್ ಮದುವೆ ಮಾಡದ ವಿಚಾರಕ್ಕೆ ತಂದೆ ಸಣ್ಣನಿಂಗಪ್ಪ ಜೊತೆಗೆ ಜಗಳ ಮಾಡಿದ್ದ....







