Friday, April 24, 2026
ದೆಹಲಿರಾಜ್ಯರಾಷ್ಟ್ರೀಯಸುದ್ದಿ

ಗಂಡನಿಲ್ಲದಾಗ ಸೊಸೆ, ಬಾಡಿಗೆದಾರನ ಲವ್ವಿಡವ್ವಿ :ವಿರೋಧಿಸಿದ ಅತ್ತೆಯನ್ನೇ ಚಟ್ಟಕ್ಕೇರಿಸಿದ ಖರ್ತನಾಕ್ ಪ್ರೇಮಿಗಳು -ಕಹಳೆ ನ್ಯೂಸ್

ಲಕ್ನೋ: ಮನೇಲಿ ಗಂಡನಿಲ್ಲದಾಗ ಸೊಸೆ ಹಾಗೂ ಬಾಡಿಗೆದಾರನ ನಡುವೆ ನಡೆಯುತ್ತಿದ್ದ ಲವ್ವಿಡವ್ವಿಯನ್ನು ವಿರೋಧಿಸಿದ ಅತ್ತೆಯನ್ನು ಚಟ್ಟಕ್ಕೇರಿಸಿದ ಘಟನೆ ಲಕ್ನೋದ ನಿಶಾತ್‌ಗಂಜ್‌ನಲ್ಲಿ ನಡೆದಿದೆ.

ಹಂತಕ ಪ್ರೇಮಿಗಳನ್ನು ಸೊಸೆ ರಂಜನಾ ಮತ್ತು ಬಾಡಿಗೆದಾರ ರಾಜನ್ ಎಂದು ಗುರುತಿಸಲಾಗಿದ್ದು, ಇಬ್ಬರು ಸೇರಿಕೊಂಡು ಅತ್ತೆ ನಿರ್ಮಲಾ ದೇವಿ (69) ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೊಲೆಯಾದ ನಿರ್ಮಲಾ ದೇವಿ ಅವರು ತಮ್ಮ ಮಗ ತ್ರಿದೇಶ್, ಸೊಸೆ ರಂಜನಾ ಹಾಗೂ ಮೂವರು ಮೊಮ್ಮಕ್ಕಳೊಂದಿಗೆ ಲಕ್ನೋದ ನಿಶಾತ್‌ಗಂಜ್‌ನಲ್ಲಿರುವ ತಮ್ಮ ಎರಡು ಅಂತಸ್ತಿನ ಮನೆಯ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದರು. ಮೊದಲ ಮಹಡಿಯನ್ನು ಆರೋಪಿ ರಾಜನ್‌ಗೆ ಬಾಡಿಗೆಗೆ ಕೊಡಲಾಗಿತ್ತು. ಕಳೆದ ಮೂರು ವರ್ಷಗಳಿಂದ ಅಲ್ಲೇ ವಾಸವಾಗಿದ್ದ ಎಂದು ತಿಳಿದುಬಂದಿದೆ.

ಬಾಡಿಗೆಗೆ ಬಂದ ಸ್ವಲ್ಪ ಸಮಯದ ನಂತರ ರಾಜನ್ ಹಾಗೂ ರಂಜನಾ ನಡುವೆ ಸಂಬಂಧ ಶುರುವಾಗಿತ್ತು. ಇದರಿಂದ ರಂಜನಾ ಹಾಗೂ ತ್ರಿದೇಶ್ ನಡುವೆ ಆಗಾಗ ಜಗಳವಾಗುತ್ತಿತ್ತು. ಅದಾದ ಸ್ವಲ್ಪ ಸಮಯದ ಬಳಿಕ ರಾಜನ್ ಹಾಗೂ ರಂಜನಾ ನಡುವಿನ ಅಕ್ರಮ ಸಂಬಂಧದ ಬಗ್ಗೆ ಮನೆಯವರಿಗೆ ಗೊತ್ತಾಗಿತ್ತು. ವಿರೋಧದ ನಡುವೆಯೂ ಅವರಿಬ್ಬರ ಸಂಬಂಧ ಮುಂದುವರೆದಿತ್ತು. ಮಗ ತ್ರಿದೇಶ್ ಮನೆಯಲ್ಲಿ ಇಲ್ಲದೇ ಇರುವಾಗ ಆರೋಪಿಗಳಿಬ್ಬರು ಭೇಟಿಯಾಗುತ್ತಿದ್ದರು. ಇದನ್ನು ಅತ್ತೆ ನಿರ್ಮಲಾ ವಿರೋಧಿಸಿದ್ದರು.