ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ ಪಡೆದ ಕಂದನ ಎತ್ತಿ ಮುದ್ದಾಡಿದ ಅಲಿನ್ ಪೋಷಕರು -ಕಹಳೆ ನ್ಯೂಸ್
ತಿರುವನಂತಪುರಂ: ಅಂದು ಕುಟುಂಬಸ್ಥರೊಂದಿಗೆ ಹೊರಟಿದ್ದ ಆ ಕಂದಮ್ಮನನ್ನು ಯಮರಾಜ ತಂದೆ, ತಾಯಿ ನೋವನ್ನೂ ಅರಿಯದೇ ತನ್ನೂರಿಗೆ ಕರೆದೊಯ್ದ. ಆದರೆ ಪೋಷಕರು ತಮಗಾದ ನೋವು ಬೇರೆಯವರಿಗೆ ಆಗದಿರಲೆಂದು ಮಗಳ ಅಂಗಾಂಗವನ್ನು ದಾನ ಮಾಡಿ, ಇಂದು ಮರುಜೀವ ಪಡೆದ ಮಗುವನ್ನು ಎತ್ತಿ ಮುದ್ದಾಡಿದ್ದಾರೆ. ರಸ್ತೆ ಅಪಘಾತದಲ್ಲಿ ಮಗಳು ಅಲಿನ್ಳನ್ನು ಕಳೆದುಕೊಂಡಿದ್ದ ಕೇರಳ ದಂಪತಿ ಅರುಣ್ ಹಾಗೂ ಶೆರಿನ್ ಬೇರೆ ಮಕ್ಕಳ ಜೀವ ಉಳಿಸುವ ಸಲುವಾಗಿ ಅಂಗಾಂಗ ದಾನ ಮಾಡುವ ಮಹತ್ತರ ನಿರ್ಧಾರ ತೆಗೆದುಕೊಂಡಿದ್ದರು. 9...







