Wednesday, June 17, 2026

ಸುದ್ದಿ

ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಶ್ರೀ ದಂಡನಾಯಕ ಉಳ್ಳಾಳ್ತಿ ದೈವಸ್ಥಾನದಲ್ಲಿ ಭಕ್ತರಿಗೆ ವಿಶೇಷ ಸೇವೆಯಾಗಿ “ನಾಳೆ ಬೆಳಗ್ಗಿಂದಲೇ ಮಲ್ಲಿಗೆ, ಹರಕೆ ಅರ್ಪಿಸಲು ಅವಕಾಶ -ಕಹಳೆ ನ್ಯೂಸ್

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ಪೂರ್ವ ಸಂಪ್ರದಾಯದಂತೆ ಏ.16 ರಂದು ಸಂಜೆ.4.30ಕ್ಕೆ ಶ್ರೀ ದಂಡನಾಯಕ ಉಳ್ಳಾಳ್ತಿ ದೈವಗಳ ಕಿರುವಾಳು ಭಂಡಾರವು ಬಲ್ನಾಡು ದೈವಸ್ಥಾನದಿಂದ ಹೊರಡಲಿರುವುದು. ಈ ಹಿನ್ನೆಲೆ ನಾಳೆ ಬಲ್ನಾಡು ದೈವಸ್ಥಾನದಲ್ಲಿ ಬೆಳಿಗ್ಗೆ 9 ರಿಂದ ಮದ್ಯಾಹ್ನ 1 ಗಂಟೆಯ ತನಕ ಹಾಗೂ ಸಂಜೆ 3 ರಿಂದ 5 ಗಂಟೆಯ ತನಕ ಮಲ್ಲಿಗೆ ಹೂವು ಮತ್ತು ಹರಕೆ ಅರ್ಪಿಸಿ ಪ್ರಸಾದ ಸ್ವೀಕರಿಸಲು ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ....
ಚಿಕ್ಕಮಂಗಳೂರುಜಿಲ್ಲೆಸುದ್ದಿ

ಅಂಬೇಡ್ಕರ್‌ ಜಯಂತಿ ಮೆರವಣಿಗೆಯಲ್ಲಿದ್ದವರ ಮೇಲೆ ಮದ್ಯ ವ್ಯಸನಿಯಿಂದ ಕಾರು ಚಾಲನೆ – 7 ವರ್ಷದ ಮಗು ಸ್ಥಳದಲ್ಲೇ ಸಾವು -ಕಹಳೆ ನ್ಯೂಸ್

ಚಿಕ್ಕಮಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ ಜಯಂತಿ (Ambedkar Jayanti) ಮೆರವಣಿಗೆ ವೇಳೆ ಭಾರಿ ಅಚಾತುರ್ಯವೊಂದು ಬಿಳೇಕಲ್ಲು ಗ್ರಾಮದಲ್ಲಿ ನಡೆದಿದೆ. ಮೆರವಣಿಗೆಯಲ್ಲಿದ್ದವರ ಮೇಲೆ ಮದ್ಯ ವ್ಯಸನಿ ಕಾರು ಚಲಾಯಿಸಿದ ಪರಿಣಾಮ 7 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. 7 ಜನರಿಗೆ ಗಾಯವಾಗಿದೆ. 7 ವರ್ಷದ ಮಗು ಸಾನ್ವಿ ಸಾವನ್ನಪ್ಪಿದೆ. 11 ವರ್ಷದ ನಿಶ್ಚಿತ್-ತೃಪ್ತಿ, ತಿಮ್ಮರಾಜು, ಉಷಾ, ಚೇತನ್, ಸೃಷ್ಠಿ ಹಾಗೂ ನಾಗರಾಜ್ ಗಾಯಗೊಂಡಿದ್ದು, ಹಾಸನದ ಮೆಡಿಕಲ್‌ ಕಾಲೇಜಿಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಅಪಘಾತವಾಗುತ್ತಿದ್ದಂತೆ...
ಮುಂಬೈರಾಜ್ಯಸುದ್ದಿ

180 ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ, 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ರೆಕಾರ್ಡ್‌ ಮಾಡಿದ್ದ ಆರೋಪಿ ಬಂಧನ – ಕಹಳೆ ನ್ಯೂಸ್

ಮುಂಬೈ: ಮಹಾರಾಷ್ಟ್ರದ ಅಮರಾವತಿಯಲ್ಲಿ 180 ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ 350 ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಿಜೆಪಿ ಸಂಸದರೊಬ್ಬರ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಪರತ್ವಾಡ ನಗರದ ನಿವಾಸಿ ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್, ಹುಡುಗಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ, ಮುಂಬೈ ಮತ್ತು ಪುಣೆಗೆ ಕರೆದೊಯ್ದು ಅವರ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಿದ್ದಾನೆ ಎಂದು ಆರೋಪಿಸಲಾಗಿದೆ....
ಉಡುಪಿಜಿಲ್ಲೆಸುದ್ದಿ

ಕಟಪಾಡಿ ಎಸ್‌ವಿಎಸ್ ಕ್ರೀಡಾಂಗಣದಲ್ಲಿ ಭಕ್ತ ಸಾಗರ ಸಾಕ್ಷಾತ್ ಅನುಭವಿಸಿದ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ -ಕಹಳೆ ನ್ಯೂಸ್

ಉಡುಪಿ : ವಿಜಯದ ಧನ್ಯತೆ ಪುರುಷೋತ್ತಮನ ಸಾಧನೆ ಮತ್ತು ಮಾರ್ಗದರ್ಶನ ಸತ್ಯದಿಂದಲೇ ರಾಜನಾಗುವ ಧೇಯ ಎಲ್ಲರೂ ಸೇರಿ ಪ್ರೀತಿಯಿಂದ ಸಮಾಧಾನದಿಂದ ಬದುಕಬೇಕೆಂಬ ಕೃಷ್ಣನ ಮೋಹನ ಗುಣ ಇವೆಲ್ಲದರ ಪ್ರತ್ಯಕ್ಷ ಸಾಕ್ಷಿಯೇ ಕಟಪಾಡಿ ಎಸ್‌ವಿಎಸ್ ಕ್ರೀಡಾಂಗಣದಲ್ಲಿ ಭಕ್ತ ಸಾಗರ ಸಾಕ್ಷಾತ್ ಅನುಭವಿಸಿದ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ತ್ರೇತಾ ಯುಗದಲ್ಲಿ ಶ್ರೀರಾಮನು ವೇದವಲ್ಲಿಗೆ ನೀಡಿದ ವಚನದಂತೆ ದ್ವಾಪರದಲ್ಲಿ ಯಶೋದ ಮಾತೆಯ ಇಚ್ಛೆಯಂತೆ ಕಲಿಯುಗದಲ್ಲಿ ಭೂಮಿಯ ಮೇಲೆ ಸಂಸಾರದ ಸಾರ್ಥಕ್ಯದ ಸಮಾಧಾನದ ಬದುಕು...
ಸುದ್ದಿ

ಅಮೆರಿಕ-ಇರಾನ್‌ ಸಂಧಾನ : ಪಾಕಿಸ್ತಾನದಲ್ಲೇ 2ನೇ ಸುತ್ತಿನ ಮಾತುಕತೆ -ಕಹಳೆ ನ್ಯೂಸ್

ವಾಷಿಂಗ್ಟನ್‌: ಇರಾನ್ ಜೊತೆ ಎರಡನೇ ಸುತ್ತಿನ ನೇರ ಮಾತುಕತೆ ಮುಂದಿನ ಎರಡು ದಿನಗಳಲ್ಲಿ ಪಾಕಿಸ್ತಾನದಲ್ಲಿ ನಡೆಯಬಹುದು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತಿಳಿಸಿದ್ದಾರೆ. ಎರಡನೇ ಸುತ್ತಿನ ಮಾತುಕತೆ ಯುರೋಪ್‌ನಲ್ಲಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ಮುಂದಿನ ಎರಡು ದಿನಗಳಲ್ಲಿ ಪಾಕ್‌ನ ಇಸ್ಲಾಮಾಬಾದ್‌ನಲ್ಲಿಯೇ ಮಾತುಕತೆ ನಡೆಯಲಿದೆ ಎನ್ನಲಾಗಿದೆ. ನಾವು ಅಲ್ಲಿಗೆ ಹೋಗಲು ಹೆಚ್ಚು ಒಲವು ತೋರುತ್ತೇವೆ ಎಂದು ಟ್ರಂಪ್‌ ಹೇಳಿದ್ದಾರೆ. ಮುಂದಿನ ಸುತ್ತಿನ ಮಾತುಕತೆಯಲ್ಲಿ ಅಮೆರಿಕವನ್ನು ಯಾರು ಪ್ರತಿನಿಧಿಸುತ್ತಾರೆಂದು ಟ್ರಂಪ್‌ ಸ್ಪಷ್ಟಪಡಿಸಿಲ್ಲ....
ಸುದ್ದಿ

ಕೊಪ್ಪಳ ಲವ್ ಜಿಹಾದ್‌ಗೆ ಟ್ವಿಸ್ಟ್ : ಆರೋಪಿಗೆ ಅಂತರಾಜ್ಯ ಲಿಂಕ್, ಹೈಫೈ ಜೀವನಕ್ಕಾಗಿ ಬುಕ್ಕಿಗಳಿಂದ ಆರ್ಥಿಕ ಸಹಾಯ- ಕಹಳೆ ನ್ಯೂಸ್

ಕೊಪ್ಪಳ: ಜಿಲ್ಲೆಯಲ್ಲಿ ಕೇಳಿಬಂದಿದ್ದ ಲವ್ ಜಿಹಾದ್  ಆರೋಪ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದೀಗ ಆರೋಪಿಗೆ ಅಂತರಾಜ್ಯದವರ ಜೊತೆ ಲಿಂಕ್ ಇರುವುದು ಗೊತ್ತಾಗಿದ್ದು, ಆರ್ಥಿಕ ಸಹಾಯ ಪಡೆದಿದ್ದ ಎಂದು ಬೆಳಕಿಗೆ ಬಂದಿದೆ. ಆರೋಪಿ ಮುಸ್ತಫಾ ಖಾದ್ರಿಗೆ ಅಂತರಾಜ್ಯ ಲಿಂಕ್ ಇದ್ದು, ಗೋವಾ, ಮುಂಬೈನಿಂದ ಆರ್ಥಿಕ ಸಹಾಯ ದೊರೆತಿದೆ ಎನ್ನಲಾಗಿದೆ. ಗೋವಾ ಹಾಗೂ ಮುಂಬೈನ ಇಬ್ಬರು ಮಟ್ಕಾ ಬುಕ್ಕಿಗಳ ಸಂಪರ್ಕವಿದೆ. ಕೊಪ್ಪಳದಲ್ಲಿ ಹೈಫೈ ಜೀವನ ನಡೆಸಲು ಅಂತರಾಜ್ಯಗಳ ಬುಕ್ಕಿಗಳಿಂದ ಆರ್ಥಿಕ ಸಹಾಯ...
ಸುದ್ದಿ

ಆರಿಫ್‌ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ, ತಿಂಗಳ ಹಿಂದೆಯೂ ಕೊಲೆಗೆ ಯತ್ನಿಸಿದ್ದ ತಂಡ- ಕಹಳೆ ನ್ಯೂಸ್ 

ಮಂಗಳೂರು: ರೌಡಿ ಶೀಟರ್ ಟ್ಯಾಬ್ಲೆಟ್ ಆರಿಫ್ ಕೊಲೆ ಪ್ರಕರಣ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅರ್ಷದ್, ಪುಚ್ಚೆ ನಿಸಾಕ್ ಮತ್ತು ಜುನೈದ್ ಬಂಧಿತರು. ಪ್ರಕರಣದಲ್ಲಿ ಈ ಹಿಂದೆ 7 ಮಂದಿಯನ್ನು ಬಂಧಿಸಿದ್ದು, ಈಗ ಬಂಧಿತರ ಸಂಖ್ಯೆ 10 ಕ್ಕೇರಿದೆ. ಆರಿಫ್ ನನ್ನು ಮಾರ್ಚ್ 27 ರಂದು ತೊಕ್ಕೊಟ್ಟಿನಲ್ಲಿ ಕಾರು ಡಿಕ್ಕಿ ಹೊಡೆಸಿ ಹತ್ಯೆ ಮಾಡಿದ್ದರು. ಅದಕ್ಕೂ ಹಿಂದೆ ಫೆ.13 ರಂದು ಆರಿಫ್ ಎಂದಿನಂತೆ ಬೈಕಿನಲ್ಲಿ...
ಸುದ್ದಿ

ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಅಡ್ಡಲಾಗಿ ಹೊಂಡ ಕೊರೆದು ಸಲಗ ರಕ್ಷಿಸಿದ ಅರಣ್ಯ ಸಿಬ್ಬಂದಿ, ಎಂಟು ಗಂಟೆಗಳ ನಿರಂತರ ಕಾರ್ಯಾಚರಣೆ ಯಶಸ್ವಿ- ಕಹಳೆ ನ್ಯೂಸ್ 

ಮಂಗಳೂರು: ಅಕಸ್ಮಾತ್ ಪಾಳು ಬಾವಿಗೆ ಬಿದ್ದ ಒಂಟಿ ಸಲಗವೊಂದನ್ನು ಎಂಟು ಗಂಟೆಗಳ ಕಾರ್ಯಾಚರಣೆಯ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೆರಾಜೆ ಗ್ರಾಮದಲ್ಲಿ ನಡೆದಿದೆ. ಪೆರಾಜೆ ಗ್ರಾಮದ ಕಲ್ಲಚರ್ಪ ಎಂಬಲ್ಲಿನ ನಿವಾಸಿ ರಾಮ ನಾಯ್ಕ ಎಂಬವರ ತೋಟದಲ್ಲಿ ಎಪ್ರಿಲ್ 12ರ ಭಾನುವಾರ ರಾತ್ರಿ 11 ಗಂಟೆ ವೇಳೆಗೆ ಆನೆ ಘೀಳಿಡುವ ಶಬ್ದ ಕೇಳಿಸಿತ್ತು. ಈ ಪ್ರದೇಶದಲ್ಲಿ ಆನೆಗಳು ಘೀಳಿಡೋದು ಸಾಮಾನ್ಯ ಎಂದುಕೊಂಡರೂ...
1 68 69 70 71 72 3,395
Page 70 of 3395