Saturday, June 13, 2026
ಸುದ್ದಿ

ಅಮೆರಿಕ-ಇರಾನ್‌ ಸಂಧಾನ : ಪಾಕಿಸ್ತಾನದಲ್ಲೇ 2ನೇ ಸುತ್ತಿನ ಮಾತುಕತೆ -ಕಹಳೆ ನ್ಯೂಸ್

ವಾಷಿಂಗ್ಟನ್‌: ಇರಾನ್ ಜೊತೆ ಎರಡನೇ ಸುತ್ತಿನ ನೇರ ಮಾತುಕತೆ ಮುಂದಿನ ಎರಡು ದಿನಗಳಲ್ಲಿ ಪಾಕಿಸ್ತಾನದಲ್ಲಿ ನಡೆಯಬಹುದು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತಿಳಿಸಿದ್ದಾರೆ.
ಎರಡನೇ ಸುತ್ತಿನ ಮಾತುಕತೆ ಯುರೋಪ್‌ನಲ್ಲಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ಮುಂದಿನ ಎರಡು ದಿನಗಳಲ್ಲಿ ಪಾಕ್‌ನ ಇಸ್ಲಾಮಾಬಾದ್‌ನಲ್ಲಿಯೇ ಮಾತುಕತೆ ನಡೆಯಲಿದೆ ಎನ್ನಲಾಗಿದೆ. ನಾವು ಅಲ್ಲಿಗೆ ಹೋಗಲು ಹೆಚ್ಚು ಒಲವು ತೋರುತ್ತೇವೆ ಎಂದು ಟ್ರಂಪ್‌ ಹೇಳಿದ್ದಾರೆ.

ಜಾಹೀರಾತು

ಇರಾನ್‌ ಪರಮಾಣು ಹೊಂದುವುದನ್ನು ನಿಲ್ಲಿಸಬೇಕು ಹಾಗೂ ಹಾರ್ಮುಜ್‌ ಜಲಸಂಧಿಯನ್ನು ಮುಕ್ತಗೊಳಿಸಬೇಕು ಎಂಬುದು ಅಮೆರಿಕದ ಪ್ರಮುಖ ಷರತ್ತಾಗಿದೆ. ಆದರೆ, ಅಮೆರಿಕದ ಷರತ್ತಿಗೆ ಇರಾನ್‌ ಒಪ್ಪುತ್ತಿಲ್ಲ. ಹೀಗಾಗಿ, ಮೊದಲ ಸುತ್ತಿನ ಸಂಧಾನ ಮಾತುಕತೆ ವಿಫಲವಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು