ಉರಿ ಸೆಕ್ಟರ್ನಲ್ಲಿ ಒಳನುಸುಳಲು ಯತ್ನಿಸಿದ ಪಾಕ್ ಉಗ್ರನ ಹತ್ಯೆ – ಕಹಳೆ ನ್ಯೂಸ್
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರನನ್ನು ಹತ್ಯೆ ಮಾಡಿದ್ದು, ಒಳನುಸುಳುವಿಕೆಯನ್ನು ವಿಫಲಗೊಳಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಪೋಸ್ಟ್ ಮಾಡಿದೆ. ಮಾರ್ಚ್ 14 ಹಾಗೂ 15ರ ರಾತ್ರಿ ಭಯೋತ್ಪಾದಕ ಒಳನುಸುಳುವಿಕೆಗೆ ಯತ್ನಿಸುತ್ತಾನೆ ಎಂಬ ಜಮ್ಮು ಕಾಶ್ಮೀರ ಪೊಲೀಸರ ನಿಖರ ಮಾಹಿತಿ ಆಧರಿಸಿ, ಕಾರ್ಯಾಚರಣೆ ನಡೆಸಲಾಯಿತು ಎಂದು ತಿಳಿಸಿದೆ. ಜಂಟಿ ಕಾರ್ಯಾಚರಣೆ ವೇಳೆ ಪೊದೆಯಲ್ಲಿ ಅನುಮಾನಾಸ್ಪದ ಚಲನವಲನ...





