Recent Posts

Thursday, June 18, 2026

ಸುದ್ದಿ

ಸುದ್ದಿ

ಜಿ.ಎಲ್ ಆಚಾರ್ಯ ಜ್ಯುವೆಲ್ಲ‌ರ್ಸ್‌ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳು- ಕಹಳೆ ನ್ಯೂಸ್

ಹೊಸ ವರ್ಷದ ಆರಂಭ ಮತ್ತು ಸಮೃದ್ಧಿಯ ಸಂಕೇತವಾದ ಯುಗಾದಿ ಹಬ್ಬದ ಪ್ರಯುಕ್ತ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ತನ್ನ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ. ಹಳದಿ ಟ್ಯಾಗ್ ಹೊಂದಿರುವ ವಿಶೇಷ ಆಭರಣಗಳ ಮೇಕಿಂಗ್ ಶುಲ್ಕಗಳ ಮೇಲೆ 50%ವರೆಗೆ ರಿಯಾಯಿತಿಯೊಂದಿಗೆ ಖರೀದಿ ಮಾಡುವ ಅವಕಾಶವನ್ನು ಪಡೆಯಬಹುದು.ಪುತ್ತೂರು, ಸುಳ್ಯ, ಹಾಸನ, ಕುಶಾಲನಗರ ಹಾಗೂ ಮೂಡಬಿದ್ರೆಯ ಎಲ್ಲಾ ಮಳಿಗೆಗಳಲ್ಲಿ ಈ ಆಫರ್ ಲಭ್ಯವಿದ್ದು, ಗ್ರಾಹಕರು ಹಬ್ಬದ ಸಂಭ್ರಮವನ್ನು ಹೊಸ ಆಭರಣಗಳೊಂದಿಗೆ...
ಸುದ್ದಿ

ಐಸಿಸ್‌ ಜೊತೆ ಸಂಪರ್ಕ; 19 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿ ಬಂಧನ- ಕಹಳೆ ನ್ಯೂಸ್

ಲಕ್ನೋ: ಐಸಿಸ್ ಆನ್‌ಲೈನ್ ಮಾಡ್ಯೂಲ್ ಜೊತೆ ಸಂಪರ್ಕ ಹೊಂದಿದ್ದ 19 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಸಹರಾನ್‌ಪುರ ಜಿಲ್ಲೆಯ ನಿವಾಸಿ ಹರಿಶ್‌ ಅಲಿ ಬಂಧಿತ ಆರೋಪಿ. ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್‌ನ ಆನ್‌ಲೈನ್ ಮಾಡ್ಯೂಲ್‌ನೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಮೊರಾದಾಬಾದ್‌ನಲ್ಲಿ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಈತನನ್ನು ಬಂಧಿಸಿದೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಸಿಸ್ ಸಂಬಂಧಿತ ಆನ್‌ಲೈನ್ ನೆಟ್‌ವರ್ಕ್‌ಗಳ ಚಟುವಟಿಕೆಗಳ ಕುರಿತು ನಡೆಯುತ್ತಿರುವ ತನಿಖೆಯ ಸಂದರ್ಭದಲ್ಲಿ...
ಸುದ್ದಿ

ಭಾರತಕ್ಕೆ 46,000 ಟನ್ ಎಲ್‌ಪಿಜಿ ಹೊತ್ತು ತಂದ ನಂದಾದೇವಿ ಹಡಗು- ಕಹಳೆ ನ್ಯೂಸ್

ಗಾಂಧಿನಗರ: 46,000 ಟನ್ ಎಲ್‌ಪಿಜಿ ಹೊತ್ತ ನಂದಾ ದೇವಿ ಹಡಗು ಗುಜರಾತ್‌ನ ಕಾಂಡ್ಲಾ ಬಂದರಿಗೆ ಕೆಲವೇ ಗಂಟೆಗಳಲ್ಲಿ ಆಗಮಿಸಲಿದೆ. ಇದರಿಂದ ಭಾರತದಲ್ಲಿ ತಲೆದೂರಿರುವ ಅಡುಗೆ ಅನಿಲದ ಕೊರತೆ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಯಲಿದೆ. (ಮಾ.16) ಶಿವಾಲಿಕ್ ಹಡಗು 46,000 ಟನ್ ಎಲ್‌ಪಿಜಿ ಹೊತ್ತು ಭಾರತಕ್ಕೆ ಬಂದಿತ್ತು. ಎರಡೂ ಹಡಗುಗಳು ಸರ್ಕಾರಿ ಸ್ವಾಮ್ಯದ ಶಿಪ್ಪಿಂಗ್ ಕಾರ್ಪೋರೇಷನ್‌ ಆಫ್ ಇಂಡಿಯಾ ಒಡೆತನದಲ್ಲಿವೆ. ಎರಡು ಹಡಗುಗಳು ತಲಾ 46,000 ಟನ್‌ ಎಲ್‌ಪಿಜಿ ಹೊತ್ತು ತಂದಿವೆ....
ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಸೌತಡ್ಕ ಸೇವಾಧಾಮದಲ್ಲಿ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮ ಉದ್ಘಾಟನೆ – ಕಹಳೆ ನ್ಯೂಸ್

ಸೌತಡ್ಕ : ಬೆಂಗಳೂರು APD ಸಂಸ್ಥೆಯ ಸಹಕಾರದೊಂದಿಗೆ ಪ್ರಸ್ತುತ ವರ್ಷದಲ್ಲಿ 100 ಗಾಲಿಕುರ್ಚಿಯನ್ನು ನೀಡುವ ಯೋಜನೆಯನ್ನು ಹೊಂದಿದ್ದು. ಅದರಂತೆ, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸೇವಾಧಾಮವು 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ 30 ಗಾಲಿಕುರ್ಚಿಗಳನ್ನು ವಿತರಿಸಲಾಗಿತ್ತು. ಈ ತಿಂಗಳಲ್ಲಿ 32 ಗಾಲಿಕುರ್ಚಿಗಳನ್ನು ವಿತರಿಸುವುದಾಗಿ ನಿರ್ಧರಿಸಿದ್ದು ಉಡುಪಿಯ ಶ್ರೀ ನಿಹಾಲ್ ವಿಲ್ಸನ್, ಕಾರ್ಕಳದ ಶ್ರೀ ಸಂದೀಶ್, ಆತ್ರಾಡಿಯ ಶ್ರೀ ರಮೇಶ್ ನಾಯ್ಕ್ ರವರಿಗೆ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮವನ್ನು ಮಾರ್ಚ್ 15 ರಂದು...
ಜಿಲ್ಲೆದೆಹಲಿಸುದ್ದಿ

ʻನೀನು ಹೊರಡೋ ಸಮಯ, ಎಲ್ಲರನ್ನೂ ಕ್ಷಮಿಸುʼ : ಹರೀಶ್ ರಾಣಾಗೆ ಕುಟುಂಬಸ್ಥರಿಂದ ಭಾವನಾತ್ಮಕ ವಿದಾಯ – ಕಹಳೆ ನ್ಯೂಸ್

ನವದೆಹಲಿ: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ಅವರಿಗೆ ಕುಟುಂಬಸ್ಥರು ಭಾವನಾತ್ಮಕ ವಿದಾಯ ಹೇಳಿದ್ದಾರೆ. ಚಲನರಹಿತವಾಗಿ ಏಮ್ಸ್‌ ಆಸ್ಪತ್ರೆಯಲ್ಲಿ ಮಲಗಿದ್ದ ಅವರ ಬೆಡ್‌ ಸುತ್ತ ನಿಂತ ಕುಟುಂಬಸ್ಥರು ʻನೀನು ಹೊರಡೋ ಸಮಯ, ಎಲ್ಲರನ್ನೂ ಕ್ಷಮಿಸುʼಎಂದು ಮನವಿ ಮಾಡಿಕೊಂಡಿದ್ದಾರೆ. ರಾಣಾ ಅವರ ಕುಟುಂಬವು ಅವರೊಂದಿಗೆ ತಮ್ಮ ಕೊನೆಯ ಕ್ಷಣಗಳನ್ನು ಕಳೆಯುತ್ತಿರುವ 22 ಸೆಕೆಂಡ್‌ಗಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ರಾಣಾ ಅವರ ತಾಯಿ ಪಕ್ಕದಲ್ಲಿ ಭಾವುಕರಾಗಿ ಕುಳಿತಿದ್ದರು. ಬ್ರಹ್ಮ ಕುಮಾರಿ...
ಚಿಕ್ಕಮಂಗಳೂರುಜಿಲ್ಲೆಸುದ್ದಿ

ಶಾಲೆ ಬಿಸಿಯೂಟಕ್ಕೂ ತಟ್ಟಿದ ಗ್ಯಾಸ್‌ ಅಭಾವದ ಬಿಸಿ : ಸೌದೆ ಒಲೆಯಲ್ಲೇ ಅಡುಗೆ ಮಾಡಿದ ಸಿಬ್ಬಂದಿ -ಕಹಳೆ ನ್ಯೂಸ್

ಚಿಕ್ಕಮಗಳೂರು: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಿಂದ ಉಂಟಾದ ಗ್ಯಾಸ್ ಅಭಾವ ಶಾಲೆಗಳ ಬಿಸಿಯೂಟ ಯೋಜನೆ ಮೇಲೂ ಪರಿಣಾಮ ಬೀರಿದೆ. ಗ್ಯಾಸ್ ಇಲ್ಲದೇ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಿಬ್ಬಂದಿ ಅಡುಗೆ ಮಾಡಲು ಪರದಾಡಿದ್ದಾರೆ. ಸಿಲಿಂಡರ್‌ ಸರಬರಾಜಾಗದೇ ಇದ್ದಿದ್ದರಿಂದ ಶಾಲೆಯ ಸಿಬ್ಬಂದಿ ಸೌದೆ ಬಳಸಿ ಬಯಲಲ್ಲಿ ಬಿಸಿಯೂಟ ಸಿದ್ಧಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಶಾಲೆಯ ಸಿಬ್ಬಂದಿ, ಐದು ದಿನಗಳಿಂದ ಗ್ಯಾಸ್ ಇಲ್ಲದೆ ಸೌದೆಯಲ್ಲೇ ಅಡುಗೆ ಮಾಡುತ್ತಿದ್ದೇವೆ....
ಸುದ್ದಿ

20% ಗ್ಯಾಸ್ ವಿತರಣೆಗೆ ಕೇಂದ್ರ ಗ್ರೀನ್ ಸಿಗ್ನಲ್ : ಇಂದು ಹೋಟೆಲ್ ಸಂಘದಿಂದ ಸರ್ಕಾರದ ಭೇಟಿ

ಬೆಂಗಳೂರು: ಗ್ಯಾಸ್ ಸಿಲಿಂಡರ್‌ಗಳ  ಕೊರತೆಯಿಂದ ಹೋಟೆಲ್‌ಗಳಿಗೆ ಸಾಕಷ್ಟು ಸಮಸ್ಯೆ ಎದುರಾಗಿದ್ದು, 20% ಕಮರ್ಷಿಯಲ್ ಗ್ಯಾಸ್ ನೀಡೋದಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಬೆನ್ನಲ್ಲೇ ಹೋಟೆಲ್ ಸಂಘ ಸರ್ಕಾರದ ಮುಖ್ಯ ಕಾರ್ಯದರ್ಶಿ ಭೇಟಿಗೆ ಮುಂದಾಗಿದೆ. ಸಭೆ ಕೂಡ ನಿಗದಿ ಆಗಿದೆ. ಗ್ಯಾಸ್ ಎಮರ್ಜೆನ್ಸಿ ಶುರುವಾಗಿ ಬೆಂಗಳೂರಿನ ಹೋಟೆಲ್‌ಗಳು ಬಹುತೇಕ ಮುಚ್ಚಿವೆ. ಕೆಲ ಹೋಟೆಲ್‌ಗಳು ಪರ್ಯಾಯ ವ್ಯವಸ್ಥೆ ಮಾಡಿಕೊಂಡು ನಡೆಯುತ್ತಿವೆ. ಗ್ಯಾಸ್ ಸಮಸ್ಯೆಯಿಂದ ಹೋಟೆಲ್ ಸಂಘಕ್ಕೆ ಅಂದಾಜು 100 ಕೋಟಿ ವೆಚ್ಚದಲ್ಲಿ ನಷ್ಟ...
ಸುದ್ದಿ

ಮಧ್ಯಪ್ರಾಚ್ಯದಲ್ಲಿ ಸಂಘರ್ಷ: ನೇಪಾಳದಲ್ಲೀಗ ಲೀಟರ್‌ ಪೆಟ್ರೋಲ್‌ಗೆ 188 ರೂ., ಡೀಸೆಲ್‌ಗೆ 196 ರೂ.- ಕಹಳೆ ನ್ಯೂಸ್

ಕಠ್ಮಂಡು: ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆ ಪೆಟ್ರೋಲ್‌, ಡೀಸೆಲ್‌  ಮತ್ತು ಗ್ಯಾಸ್‌ ಬೆಲೆಯನ್ನು ನೇಪಾಳ ಸರ್ಕಾರ ಹೆಚ್ಚಿಸಿದೆ. ಪಶ್ಚಿಮ ಏಷ್ಯಾದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯೆ ನೇಪಾಳದಲ್ಲಿ ಇಂಧನ ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ. ಭಾನುವಾರ ತಡರಾತ್ರಿ ನಡೆದ ನೇಪಾಳ ತೈಲ ನಿಗಮದ ಸಭೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 31 ರೂ., ಡೀಸೆಲ್ ಲೀಟರ್‌ಗೆ 54 ರೂ. ಮತ್ತು...
1 101 102 103 104 105 3,396
Page 103 of 3396