ಕನ್ಯಾಡಿ ಸೇವಾಭಾರತಿಯಿಂದ ಶಿರಸಿಯಲ್ಲಿ 3 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ – ಕಹಳೆ ನ್ಯೂಸ್
ಶಿರಸಿ : ಬೆಂಗಳೂರು APD ಸಂಸ್ಥೆಯ ಸಹಕಾರದೊಂದಿಗೆ ಪ್ರಸ್ತುತ ವರ್ಷದಲ್ಲಿ 100 ಗಾಲಿಕುರ್ಚಿಯನ್ನು ನೀಡುವ ಯೋಜನೆಯನ್ನು ಹೊಂದಿದ್ದು. ಅದರಂತೆ, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸೇವಾಧಾಮವು 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ 30 ಗಾಲಿಕುರ್ಚಿಗಳನ್ನು ವಿತರಿಸಲಾಗಿತ್ತು. ಈ ತಿಂಗಳಲ್ಲಿ 32 ಗಾಲಿಕುರ್ಚಿಗಳನ್ನು ವಿತರಿಸುವುದಾಗಿ ನಿರ್ಧರಿಸಿದ್ದು ಅಂಕೋಲಾದ ಶ್ರೀ ದಿಗಂಬರ್ ನಾಯ್ಕ್, ಸಿದ್ದಾಪುರದ ಶ್ರೀ ಕುಸುಮಾಕರ್ ನಾಯ್ಕ್, ಯಲ್ಲಾಪುರದ ಶ್ರೀ ಮಧುಕೇಶ್ವರ ನಾಯ್ಕ್ ರವರಿಗೆ ಯಲಹಂಕ ಸಮೃದ್ಧಿ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ...






