Monday, April 27, 2026
ಸುದ್ದಿ

ಎಟಿಎಂ ಕಾರ್ಡ್ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ – ಕಹಳೆ ನ್ಯೂಸ್

ಚಿಕ್ಕಮಗಳೂರು: ವಾಹನ ತಪಾಸಣೆ ವೇಳೆ ಕುಖ್ಯಾತ ಎಟಿಎಂ ಕಳ್ಳರು ಸಿಕ್ಕಿಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ.

ಆರೋಪಿಗಳು ಶಿವಮೊಗ್ಗದ 2 ಎಟಿಎಂ, ಕಡೂರು ಪಟ್ಟಣದ 1 ಎಟಿಎಂನಲ್ಲಿ ಕಳ್ಳತನ ಮಾಡಿ ಪೊಲೀಸರಿಮದ ಎಸ್ಕೇಪ್ ಆಗಿದ್ರು. ಆದ್ರೆ, ಪೊಲೀಸರು ಕಡೂರಿನ ಉಳಕಿನಕಲ್ಲು ಬಳಿ ವಾಹನ ಚೆಕ್ಕಿಂಗ್ ಮಾಡ್ತಾ ಇರೋ ಸಂದರ್ಭದಲ್ಲಿ ತಮಿಳುನಾಡು ಮೂಲದ ವಿಜಿ, ತರೀಕೆರೆ ಮೂಲದ ಪ್ರವೀಣ್ ಸಿಕ್ಕಿಬಿದ್ದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇವರಿಂದ ವಿವಿಧ ಬ್ಯಾಂಕ್‍ನ 5 ಎಟಿಎಂ ಕಾರ್ಡ್, 1.10 ಲಕ್ಷ ನಗದು, ಒಂದು ಕಾರು, ಒಂದು ಸ್ಕೂಟರ್‍ನ್ನು ವಶಕ್ಕೆ ಪಡೆಯಲಾಗಿದ್ದು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.