Friday, June 12, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಮುಂಗಾರು ಮೇಳ ಆರಂಭ -ಕಹಳೆ ನ್ಯೂಸ್

ಪುತ್ತೂರು : ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಗ್ರಾಹಕರಿಗಾಗಿ ಮಳೆಗಾಲದ ವಿಶೇಷ ಖರೀದಿ ಉತ್ಸವ ಮುಂಗಾರು ಮೇಳವನ್ನು ಘೋಷಿಸಿದೆ.

ಜಾಹೀರಾತು

ಈ ಮೇಳವು ಜೂನ್ 13ರಿಂದ ಜೂನ್ 22ರವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೇಳದ ಅಂಗವಾಗಿ ಚಿನ್ನದ ಸರಗಳ ತಯಾರಿಕೆ ಶುಲ್ಕ ಕೇವಲ 8%ರಿಂದ, ಹಾಗೂ ಆಂಟಿಕ್ ಆಭರಣಗಳ ತಯಾರಿಕೆ ಶುಲ್ಕ 12%ರಿಂದ ಆರಂಭವಾಗುತ್ತದೆ. ಜೊತೆಗೆ EF & VVS ಗುಣಮಟ್ಟದ ವಜ್ರಾಭರಣಗಳು ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿದ್ದು, ಇತರೆ ಆಯ್ದ ಆಭರಣಗಳ ಖರೀದಿಯ ಮೇಲೂ ಆಕರ್ಷಕ ರಿಯಾಯಿತಿಗಳನ್ನು ಪಡೆಯಬಹುದು.

ಇದಲ್ಲದೆ, ಹಳೆಯ 916 ಹಾಲ್‌ಮಾರ್ಕ್ ಚಿನ್ನವನ್ನು ಯಾವುದೇ ಕಡಿತವಿಲ್ಲದೆ ಪ್ರಸ್ತುತ ಚಿನ್ನದ ದರದಲ್ಲಿ ಮೌಲ್ಯಮಾಪನ ಮಾಡಿ ಹೊಸ ಆಭರಣಗಳಿಗೆ ವಿನಿಮಯ ಮಾಡಿಕೊಳ್ಳುವ ಸುವರ್ಣಾವಕಾಶವೂ ಗ್ರಾಹಕರಿಗಾಗಿ ಕಲ್ಪಿಸಲಾಗಿದೆ.

ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಅಭಿರುಚಿಗೆ ತಕ್ಕ ವಿಶೇಷ ಆಭರಣಗಳ ವಿಶಾಲ ಸಂಗ್ರಹ, ಇಂದಿನ ಟ್ರೆಂಡಿಂಗ್ ಡಿಸೈನ್‌ಗಳ ಅದ್ಭುತ ಕಲೆಕ್ಷನ್‌ಗಳೊಂದಿಗೆ ನಿಮ್ಮ ಕನಸಿನ ಆಭರಣಗಳನ್ನು ಆಯ್ಕೆಮಾಡುವ ಅವಕಾಶ ಈ ಮುಂಗಾರು ಮೇಳದಲ್ಲಿ ಲಭ್ಯವಿದೆ.

ಸಂಸ್ಥೆಯು ತನ್ನ ಸುದೀರ್ಘ ವರ್ಷಗಳ ವಿಶ್ವಾಸ, ಶುದ್ಧತೆ ಹಾಗೂ ಉತ್ತಮ ಸೇವೆಯ ಮೂಲಕ ಗ್ರಾಹಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಪುತ್ತೂರು ಸೇರಿದಂತೆ ಸುಳ್ಯ,ಹಾಸನ, ಕುಶಾಲನಗರ ಹಾಗೂ ಮೂಡಬಿದ್ರೆ ಶಾಖೆಗಳಲ್ಲಿಯೂ ಮುಂಗಾರು ಮೇಳ ನಡೆಯಲಿದ್ದು, ಗ್ರಾಹಕರು ಈ ವಿಶೇಷ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ.

ಮಳೆಗಾಲದ ಸಂಭ್ರಮವನ್ನು ಆಭರಣ ಖರೀದಿಯೊಂದಿಗೆ ಇನ್ನಷ್ಟು ವಿಶೇಷವಾಗಿಸಿಕೊಳ್ಳಲು, ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಭೇಟಿ ನೀಡಿ ಆಕರ್ಷಕ ಕೊಡುಗೆಗಳು ಹಾಗೂ ರಿಯಾಯಿತಿಗಳ ಪ್ರಯೋಜನ ಪಡೆಯುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಗಾರು ಮೇಳ – ಉಳಿತಾಯದ ಮಳೆ, ಸಂಭ್ರಮದ ಖರೀದಿ.