Recent Posts

Friday, June 19, 2026
ಸುಳ್ಯ

ಸುಳ್ಯದ ಜ್ಯೋತಿ ವೃತ್ತದ ಬಳಿ ನಿಂತಿದ್ದ ಹುಂಡಾಯ್ ಕಾರಿಗೆ ಅಲ್ಟೋ ಕಾರು ಢಿಕ್ಕಿ-ಕಹಳೆ ನ್ಯೂಸ್

ಸುಳ್ಯ : ಸುಳ್ಯದ ಜ್ಯೋತಿ ವೃತ್ತದ ಬಳಿ ನಿಂತಿದ್ದ ಹುಂಡಾಯ್ ಕಾರಿಗೆ ಅಲ್ಟೋ ಕಾರೊಂದು ಢಿಕ್ಕಿ ಹೊಡೆದ ಘಟನೆ ನಡೆದಿದೆ. ಸುಳ್ಯದ ಜಯನಗರ ನಿವಾಸಿ ಕೇಶವ ಎಂಬವರು ಜ್ಯೋತಿ ವೃತ್ತದ ಬಳಿ ತಮ್ಮ ಹುಂಡೈ ಕಾರನ್ನು ನಿಲ್ಲಿಸಿದ್ದರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಐವರ್ನಾಡು ನಿವಾಸಿ ವೀರನಾಥ ಎಂಬವರು ತನ್ನ ಆಲ್ಟೋ ಕಾರಿನಲ್ಲಿ ಸುಳ್ಯಕ್ಕೆ ಬರುತ್ತಿದ್ದರು. ಈ ಸಮಯದಲ್ಲಿ ಕಾರಿನ ಬ್ರೇಕ್ ಜಾಮ್ ಆಗಿ ಜ್ಯೋತಿ ವೃತ್ತದ ಬಳಿ ನಿಂತಿದ್ದ ಹುಂಡೈ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಸುಳ್ಯ ಠಾಣಾ ಉಪನಿರೀಕ್ಷಕ ಎಂ ಆರ್ ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.