Recent Posts

Sunday, June 7, 2026
ಜಿಲ್ಲೆದಕ್ಷಿಣ ಕನ್ನಡಶಿಕ್ಷಣಸುದ್ದಿಸುಳ್ಯ

ನೆಹರು ಸ್ಮಾರಕ ಕಾಲೇಜಿನ ಎನ್‌ಸಿಸಿ ಅಧಿಕಾರಿ ಸೀತಾರಾಮ ಎಂ.ಡಿ. ಅವರಿಗೆ ಕ್ಯಾಪ್ಟನ್ ಹುದ್ದೆಗೆ ಬಡ್ತಿ – ಕಹಳೆ ನ್ಯೂಸ್

ಸುಳ್ಯ : ಸುಳ್ಯದ ನೆಹರು ಸ್ಮಾರಕ ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಸೀತಾರಾಮ ಎಂ.ಡಿ. ಅವರು ಕ್ಯಾಪ್ಟನ್ ಹುದ್ದೆಗೆ ಬಡ್ತಿ ಹೊಂದಿದ್ದು, ಈ ಸಂಬಂಧದ ಪಿಪ್ಪಿಂಗ್ ಸಮಾರಂಭವು ಜೂನ್ 5, 2026ರಂದು ಮಡಿಕೇರಿಯ 19 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಕೇಂದ್ರದಲ್ಲಿ ಗೌರವಯುತವಾಗಿ ನಡೆಯಿತು.

ಜಾಹೀರಾತು

ಕಳೆದ ಸುಮಾರು ಹನ್ನೊಂದು ವರ್ಷಗಳಿಂದ ನೆಹರು ಸ್ಮಾರಕ ಕಾಲೇಜಿನಲ್ಲಿ ಎನ್‌ಸಿಸಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸೀತಾರಾಮ ಎಂ.ಡಿ. ಅವರು ತಮ್ಮ ಕರ್ತವ್ಯನಿಷ್ಠೆ, ಶಿಸ್ತುಬದ್ಧತೆ, ನಾಯಕತ್ವ ಗುಣಗಳು ಹಾಗೂ ಎನ್‌ಸಿಸಿ ಚಟುವಟಿಕೆಗಳಲ್ಲಿನ ಗಣನೀಯ ಕೊಡುಗೆಗಾಗಿ ಈ ಗೌರವಾನ್ವಿತ ಬಡ್ತಿಗೆ ಪಾತ್ರರಾಗಿದ್ದಾರೆ.
ಸಮಾರಂಭದಲ್ಲಿ ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯದ ಉಪ ಮಹಾನಿರ್ದೇಶಕರಾದ ಏರ್ ಕಮೋಡೋರ್ ಕಮಲ್ ಚಡ್ಡಾ (Air Cmde Kamal Chadha), Dy DG, NCC Directorate Karnataka & Goa ಹಾಗೂ ಮಂಗಳೂರು ಗ್ರೂಪ್ ಕಮಾಂಡರ್ ಕರ್ನಲ್ ವಿರಾಜ್ ಕಾಮತ್ (Col. Viraj Kamath) ಅವರು ಸೀತಾರಾಮ ಎಂ.ಡಿ. ಅವರ ಭುಜದ ಮೇಲೆ ಕ್ಯಾಪ್ಟನ್ ಹುದ್ದೆಯ ನೂತನ ನಕ್ಷತ್ರಗಳನ್ನು ಧರಿಸುವ ಮೂಲಕ ಪಿಪ್ಪಿಂಗ್ ಸಮಾರಂಭ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು ಸೀತಾರಾಮ ಎಂ.ಡಿ. ಅವರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಮತ್ತು ಸಾಧನೆಗಳು ದೊರೆಯಲಿ ಎಂದು ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ 19 ಕರ್ನಾಟಕ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ರಂಜಿತ್ ಮುಕಂದನ್, ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶ್ರೀನಿವಾಸನ್ ಹಾಗೂ ವಿವಿಧ ಕಾಲೇಜುಗಳ ಎನ್‌ಸಿಸಿ ಅಧಿಕಾರಿಗಳು ಉಪಸ್ಥಿತರಿದ್ದು ಶುಭಾಶಯ ಕೋರಿದರು.
ಕ್ಯಾಪ್ಟನ್ ಸೀತಾರಾಮ ಎಂ.ಡಿ. ಅವರ ಬಡ್ತಿಯು ನೆಹರು ಸ್ಮಾರಕ ಕಾಲೇಜಿಗೆ ಹೆಮ್ಮೆಯ ಸಂಗತಿಯಾಗಿದ್ದು, ಕಾಲೇಜಿನ ಎನ್‌ಸಿಸಿ ಘಟಕದ ಸಾಧನೆಗೆ ಮತ್ತೊಂದು ಗರಿ ಮೂಡಿಸಿದೆ. ಅವರ ಮಾರ್ಗದರ್ಶನದಲ್ಲಿ ಅನೇಕ ಕೆಡೆಟ್‌ಗಳು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಶಿಬಿರಗಳಲ್ಲಿ ಭಾಗವಹಿಸಿ ಸಾಧನೆ ಮಾಡಿರುವುದಲ್ಲದೆ, ಹಲವರು ಸಶಸ್ತ್ರ ಪಡೆಗಳು ಮತ್ತು ಇತರ ಸೇವಾ ಕ್ಷೇತ್ರಗಳಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ನೆಹರು ಸ್ಮಾರಕ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಹಾಗೂ ಎನ್‌ಸಿಸಿ ಕೆಡೆಟ್‌ಗಳು ಕ್ಯಾಪ್ಟನ್ ಸೀತಾರಾಮ ಎಂ.ಡಿ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಅವರ ಮುಂದಿನ ಸೇವಾ ಜೀವನವು ಮತ್ತಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.