Recent Posts

Friday, June 19, 2026
ಹೆಚ್ಚಿನ ಸುದ್ದಿ

ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದಲ್ಲಿ ನಾಡ ಕೋವಿಯಿಂದ ಗುಂಡಿಕ್ಕಿ ಯುವಕ ಆತ್ಮಹತ್ಯೆ-ಕಹಳೆ ನ್ಯೂಸ್

ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದಲ್ಲಿ ಯುವಕನೋರ್ವ ನಾಡಕೋವಿಯಿಂದ ತನಗೆ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಯುವಕನನ್ನು 30ವರ್ಷದ ವಿಶಾಕ್ ಪೂಜಾರಿ ಎಂದು ಗುರುತಿಸಲಾಗಿದೆ. ಮೃತ ಯುವಕ ವಿವಾಹಿತನಾಗಿದ್ದು , 1ಹೆಣ್ಣು ಮಗುವನ್ನು ಹೊಂದಿದ್ದಾರೆ. ಇವರು ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಎಂದು ಹೋದವರು ನಂತರ ಪತ್ತೆಯಾಗಲಿಲ್ಲ. ಕಂಗಾಲಾದ ಮನೆಯವರು ಹುಡುಕಾಟ ನಡೆಸಿದಾಗ ತೋಟದಲ್ಲಿ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಕಾರ್ಕಳ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.