Thursday, May 14, 2026
ಆರೋಗ್ಯಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿಹೆಚ್ಚಿನ ಸುದ್ದಿ

ಬೆಟ್ಟಂಪಾಡಿ ಯುವಕನಿಗೆ ಭೀಕರ ರಸ್ತೆ ಅಪಘಾತ : ಚಿಕಿತ್ಸೆಗಾಗಿ ನೆರವಿನ ಮನವಿ..!! – ಕಹಳೆ ನ್ಯೂಸ್

ಪುತ್ತೂರು : ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬೈಕ್ ಮತ್ತು ಟಾಟಾ ಏಸ್ ವಾಹನದ ನಡುವೆ ಭೀಕರ ರಸ್ತೆ ಅಪಘಾತವು ಪುತ್ತೂರಿನ ಬೆಟ್ಟಂಪಾಡಿ ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬೆಟ್ಟಂಪ್ಪಾಡಿಯ ಸರಳೀಕಾನ ನಿವಾಸಿ ಸಶಿತ್ ಎಸ್ ಅವರ ಬಲ ಕಾಲಿನ ಎಲುಬು, ಸೊಂಟದ ಪಕ್ಕೆಲುಬು, ಎಡಕೈ ಎಲುಬು, ಬಲಗೈಯ ಎರಡು ಬೆರಳುಗಳು ಹಾಗೂ ಕುತ್ತಿಗೆಯ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಪ್ರಸ್ತುತ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ವೈದ್ಯರ ಪ್ರಕಾರ ಶಸ್ತ್ರಚಿಕಿತ್ಸೆ ಹಾಗೂ ಮುಂದಿನ ಚಿಕಿತ್ಸೆಗೆ ಸುಮಾರು ₹6 ರಿಂದ ₹7 ಲಕ್ಷ ವೆಚ್ಚವಾಗುವ ಸಾಧ್ಯತೆ ಇದ್ದು, ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಇಷ್ಟು ದೊಡ್ಡ ಮೊತ್ತವನ್ನು ಭರಿಸುವುದು ಕಷ್ಟಕರವಾಗಿದೆ. ಆದ್ದರಿಂದ ಸಹೃದಯರು ತಮ್ಮಿಂದಾದ ನೆರವು ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

 

ನೆರವಿಗಾಗಿ ಬ್ಯಾಂಕ್ ವಿವರಗಳು:

ಹೆಸರು: Sowmya Shree S

ಖಾತೆ ಸಂಖ್ಯೆ: 64182038892

IFSC Code: SBIN0004270

 

ಸಹಾಯ ಮಾಡಲು ಇಚ್ಛಿಸುವವರು ಮೇಲ್ಕಂಡ ಖಾತೆಗೆ ತಮ್ಮ ನೆರವನ್ನು ಕಳುಹಿಸಬಹುದು. .