Recent Posts

Sunday, September 13, 2026
ಹೆಚ್ಚಿನ ಸುದ್ದಿ

ತೋಟದ ಕೆಲಸದ ವೇಳೆಯಲ್ಲಿ ಗುಡ್ಡ ಕುಸಿತ ; 4 ಕಾರ್ಮಿಕರ ದುರಂತ ಸಾವು-ಕಹಳೆ ನ್ಯೂಸ್

ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಇಡಗುಂದಿಯಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಮಣ್ಣು ಕುಸಿದು ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಯಲ್ಲಾಪುರ ತಾಲೂಕಿನ ಕಿರವತ್ತಿ ನಿವಾಸಿ ಗೌಳಿವಾಡದ 38 ವರ್ಷದ ಭಾಗ್ಯ ಲಕ್ಷ್ಮಿ, 18 ವರ್ಷದ ಸಂತೋಷ್ ಡೋಯಿಪಡೆ ಮತ್ತು 21 ವರ್ಷದ ಮಾಲು ಡೋಯಿಪಡೆ, 21 ವರ್ಷದ ಭಾಗ್ಯಶ್ರೀ ಎಡಗೆ ಮೃತ ದುರ್ದೈವಿಗಳು. ಘಟನೆಯಲ್ಲಿ ಮೂವರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೋಟದ ಮಾಲೀಕ ಮಂಜುನಾಥ ನಾಗಪ್ಪ ಭಟ್ ಸೇರಿದಂತೆ 7 ಮಂದಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆಯಲ್ಲಿ ಒಮ್ಮಿಂದೊಮ್ಮೆಲೆ ಗುಡ್ಡ ಕುಸಿತವಾಗಿದೆ. ಕೆಲಸ ಮಾಡುತ್ತಿದ್ದ ನಾಲ್ವರು ಮಣ್ಣಿನಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದು, ತೋಟದ ಮಾಲೀಕ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಇನ್ನು ಮಣ್ಣಿನಡಿಯಲ್ಲಿ ಸಿಲುಕಿರುವವರ ಮೃತ ದೇಹಗಳನ್ನು ಹೊರ ತೆಗೆಯಲಾಗಿದ್ದು, ಮರಣೋತ್ತರ ಕಾರ್ಯವನ್ನು ನಡೆಸಲಾಗಿದೆ. ಯಲ್ಲಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.